ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

2025-26 ನೇ ಸಾಲಿನ ಯುಪಿಎಸ್‌ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು ಚಿಂತಾಮಣಿಯ ಡಾ.ಪಿ.ವರುಣ್ ಗೌಡಗೆ 462 ನೇ ರ್ಯಾಂಕ್ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.

ಡಾ.ಪಿ.ವರುಣ್ ಗೌಡ ತಂದೆ ಪ್ರಕಾಶ್ ಅವರು ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯ ಕೈವಾರದ ಔಟ್ ಪೋಸ್ಟ್ ನಲ್ಲಿ ಎಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ . ತಾಯಿ ಪ್ರೇಮಾ ಮತ್ತು ತಂಗಿ ರಚನಾ ಎಂ.ಎಸ್ಸಿ ಮಾಡಿದ್ದು ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಚಿಂತಾಮಣಿಯ ರಾಯಲ್ಸ್ ಶಾಲೆಯಲ್ಲಿ ಎಸ್‌ಎಸ್ಎಲ್ ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದಿದ್ದರು. ಮೂಡಬಿದಿರೆಯ ಆಳ್ವಾಸ್‌ನಲ್ಲಿ ಪಿಯುಸಿ ಮುಗಿಸಿದ್ದ ಅವರು, ಕೊಪ್ಪಳದ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಮುಗಿಸಿದ್ದಾರೆ. ಒಂದು ವರ್ಷ ಕಡ್ಡಾಯ ಗ್ರಾಮೀಣ ಸೇವೆಯನ್ನು ಪೂರೈಸಿ ಬೆಂಗಳೂರಿನ ರಾಜ ರಾಜೇಶ್ವರಿ ಆಸ್ಪತ್ರೆಯಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸದ್ಯ ಬೆಂಗಳೂರಿನಲ್ಲಿ ನೆಲೆಸಿ ತಂಗಿಯ ಸಹಾಯದಿಂದ ಯುಪಿಎಸ್‌ಸಿ ಪರೀಕ್ಷೆಗಾಗಿ ತಯಾರಿ ನಡೆಸಿದ್ದರು. ಅವರಿಗೆ ಜಿಲ್ಲೆಯ ಪೊಲೀಸ್ ವರಿಷ್ಟಾಧಿಕಾರಿ ಕುಶಲ್ ಚೌಕ್ಷೆ ಅವರು ಸಹ ಸಾಕಷ್ಟು ಮಾರ್ಗದರ್ಶನ ನೀಡಿದ್ದರು. ಯುಪಿಎಸ್‌ಸಿ ಪರೀಕ್ಷೆಯ ಪ್ರಿಲಿಮ್ಸ್‌ನಲ್ಲಿ ಪ್ರಥಮ ಭಾರಿಗೆ ಪಾಸಾಗಿ ಮುಖ್ಯ ಪರೀಕ್ಷೆಯಲ್ಲಿ ಮೂರನೇ ಬಾರಿಗೆ ಪಾಸಾಗಿ 462 ನೇ ರ್ಯಾಂಕ್ ಪಡೆದಿದ್ದಾರೆ ಎಂದು ಡಾ.ಪಿ.ವರುಣ್ ಗೌಡ ತಂದೆ ಪ್ರಕಾಶ್ ತಿಳಿಸಿದ್ದಾರೆ

ಸಿಕೆಬಿ-5 ಡಾ.ಪಿ.ವರುಣ್ ಗೌಡ


ಸಿಕೆಬಿ-6 ಡಾ.ಪಿ.ವರುಣ್ ಗೌಡ ನಿಗೆ ಪೋಷಕರು ಮತ್ತು ಸಹೋದರಿ ಸಿಹಿ ತಿನ್ನಿಸುತ್ತಿರುವುದು