ಹಾವೇರಿ: ತಾಲೂಕಿನ ಹೊಸಕಿತ್ತೂರಿನಲ್ಲಿ ಭಾನುವಾರ ಸಂಜೆ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸ್ಥಳೀಯ ಅಪ್ಪ್ಪು ಡ್ಯಾನ್ಸ್ ಅಕಾಡೆಮಿ ವತಿಯಿಂದ ಡಾ. ಪುನೀತ್ ರಾಜಕುಮಾರ್ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರ ಬದುಕು ಯುವಜನತೆಗೆ ಮಾದರಿಯಾಗಿದೆ. ಅವರ ಆದರ್ಶಗಳು, ಸಮಾಜಮುಖಿ ಕಾರ್ಯಗಳು ಹಾಗೂ ಸರಳ ಜೀವನ ಶೈಲಿ ಅನುಕರಣೀಯ ಎಂದು ಹೇಳಿದರು.ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಹೊಸರಿತ್ತಿಯ ಗುದ್ದಲಿಸ್ವಾಮಿ ಮಠದ ಶ್ರೀ ಗುದ್ದಲಿ ಶಿವಯೋಗಿಶ್ವರ ಸ್ವಾಮೀಜಿ ಮಾತನಾಡಿ, ಪುನೀತ್ ರಾಜ್‌ಕುಮಾರ್ ಅವರು ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಗುರುಗಳ ಆಶೀರ್ವಾದ ಪಡೆದಿದ್ದನ್ನು ಸ್ಮರಿಸಿದರು. ಅವರ ಜೀವನವೇ ದೈವಸಂದೇಶ ಸಾರುವಂತದ್ದು ಎಂದು ಹೇಳಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಸಂಜಯಗಾಂಧಿ ಸಂಜೀವಣ್ಣನವರ, ಕಾರ್ಯಕ್ರಮದ ಆಯೋಜಕ, ನೃತ್ಯ ನಿರ್ದೇಶಕ, ಪ್ರಕಾಶ್ ಮರಬದ ಅವರು ಪುನೀತ್ ರಾಜ್‌ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ವಿಶೇಷ ಕಾರ್ಯಕ್ರಮಗಳ ಮೂಲಕ ಅವರ ಸ್ಮರಣೆಯನ್ನು ಜೀವಂತವಾಗಿರಿಸಿದ್ದಾರೆ ಎಂದರು.ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ವೇದಮೂರ್ತಿ ಶಿವಯ್ಯ ಹಿರೇಮಠ, ಸಿದ್ದರಾಜ ಕಲಕೋಟಿ, ಐ.ಜಿ. ಕೋರಿ, ಗುಡದಯ್ಯ ಬರಡಿ, ನಾಗರಾಜ ಮಡಿವಾಳರ, ಆನಂದ ಮುರುಡಪ್ಪ, ಮಂಜರೆಡ್ಡಿ ಮಾಗಡಿ, ಸಂಗನಗೌಡ ಧೂಳಿಕೊಪ್ಪ, ರಂಗಪ್ಪ ತಳವಾರ, ಎಂ.ಎಫ್. ಭಗವಂತಗೌಡ್ರ, ಎಚ್.ಆರ್. ಮಡಿವಾಳರ, ಗೀತಾಬಾಯಿ ಲಮಾಣಿ, ಮಂಜು ದಡ್ಡೂರು, ಸಿದ್ದಯ್ಯ ಹಿರೇಮಠ, ಫಕೀರೇಶ ಮತ್ತೂರು, ರಾಜಶೇಖರ ದಂಡಣ್ಣನವರ, ಸಿದ್ದಲಿಂಗಪ್ಪ ಗುಳ್ಳೆದ, ಪಿ.ಬಿ. ದುಂಡಪ್ಪನವರ, ಮಂಜುನಾಥ ಕುರಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಡಾ. ಪುನೀತ್ ರಾಜ್‌ಕುಮಾರ್ ಬದುಕು ಯುವಜನತೆಗೆ ಮಾದರಿ
ಹಾವೇರಿ ತಾಲೂಕಿನ ಹೊಸಕಿತ್ತೂರಿನಲ್ಲಿ ಭಾನುವಾರ ಸಂಜೆ ಶ್ರೀ ಸಂಗಮೇಶ್ವರ ಜಾತ್ರಾ ಮಹೋತ್ಸವ ನಿಮಿತ್ತ ಸ್ಥಳೀಯ ಅಪ್ಪ್ಪು ಡ್ಯಾನ್ಸ್ ಅಕಾಡೆಮಿ ವತಿಯಿಂದ ಡಾ. ಪುನೀತ್ ರಾಜಕುಮಾರ್ ಸಂಸ್ಮರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.