ಸಾರಾಂಶ
ಹೊನ್ನಾಳಿ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸೊಸೈಟಿ ಜಿಲ್ಲೆಯಲ್ಲಿಯೇ ಎಲ್ಲಾ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಹಾಗೂ ಇದೇ ವರ್ಷ ಸೊಸೈಟಿ 25ನೇ ವರ್ಷದ ಬೆಳ್ಳಿಹಬ್ಬಆಚರಿಸಲಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯ ಯೋಜನೆಗಳ ರೂಪಿಸಲಾಗುವುದು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಟ್ಟಣದ ಹೊನ್ನಾಳಿ ಅರ್ಬನ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷರಾಗಿ ಡಾ.ಎಚ್.ಪಿ.ರಾಜಕುಮಾರ್ ಮತ್ತು ಉಪಾಧ್ಯಕ್ಷರಾಗಿ ಎಚ್.ವೀರೇಶಪ್ಪ ಅವಿರೋಧ ಆಯ್ಕೆಯಾದರು.ಸೊಸೈಟಿ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಚುನಾವಣಾ ಅಧಿಕಾರಿ ಸಹಕಾರಿ ಅಭಿವೃದ್ಧಿ ಅಧಿಕಾರಿ ನವೀನ್ ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಡಾ.ಎಚ್.ಪಿ.ರಾಜಕುಮಾರ್, ಹೊನ್ನಾಳಿ ಅರ್ಬನ್ ಕೋ ಆಪರೇಟಿವ್ ಸೊಸೈಟಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ಸೊಸೈಟಿ ಜಿಲ್ಲೆಯಲ್ಲಿಯೇ ಎಲ್ಲಾ ವಿಷಯಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಹಾಗೂ ಇದೇ ವರ್ಷ ಸೊಸೈಟಿ 25ನೇ ವರ್ಷದ ಬೆಳ್ಳಿಹಬ್ಬಆಚರಿಸಲಿದ್ದು, ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕಾರ್ಯ ಯೋಜನೆಗಳ ರೂಪಿಸಲಾಗುವುದು ಎಂದು ಹೇಳಿದರು. ಎಲ್ಲಾ ನಿರ್ದೇಶಕರ ಸಹಕಾರದಿಂದ ಸೊಸೈಟಿ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು
ಸೊಸೈಟಿ ನಿರ್ದೇಶಕರಾದ ಎನ್.ಜಯರಾವ್, ಜಿ.ಆರ್.ಪ್ರಕಾಶ್, ಎಚ್.ಬಿ.ಮೋಹನ್, ಎಚ್.ಎಂ.ಅರುಣ್‍ಕುಮಾರ್, ಬಿ.ಎಚ್.ಉಮೇಶ್, ಕೆ.ಆರ್.ನಾಗರಾಜ್, ಎಚ್.ಎಂ.ಶಿವಮೂರ್ತಿ, ಸಿ.ಕೆ.ರವಿಕುಮಾರ್, ಎನ್.ಎನ್.ನಾಗರತ್ನ, ಎಚ್.ಕೆ.ರೂಪ, ಡಿ.ಎನ್.ಶಾಂತಲಾ, ಡಾ.ರಾಜಾನಾಯ್ಕ, ಎನ್.ಪ್ರಸಾದ್, ಕಾರ್ಯದರ್ಶಿ ಕುಮಾರ್, ಇತರರಿದ್ದರು.