ಗ್ರಂಥಾಲಯಗಳ ಅಭಿವೃದ್ಧಿಗೆ ಶ್ರಮಿಸಿದ ಡಾ.ರಂಗನಾಥನ್‌

| Published : Aug 14 2025, 01:02 AM IST

ಗ್ರಂಥಾಲಯಗಳ ಅಭಿವೃದ್ಧಿಗೆ ಶ್ರಮಿಸಿದ ಡಾ.ರಂಗನಾಥನ್‌
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದಲ್ಲಿ ಗ್ರಂಥಾಲಯ ವಿಜ್ಞಾನವನ್ನು ಪ್ರತ್ಯೇಕ ವಿದ್ಯಾ ಶಾಖೆಯಾಗಿ ರೂಪಿಸಿ, ಗ್ರಂಥಾಲಯಗಳ ಅಭಿವೃದ್ಧಿಗೆ ಜೀವಮಾನವಿಡಿ ಶ್ರಮಿಸಿದವರು ಡಾ.ಎಸ್.ಆರ್.ರಂಗನಾಥನ್‌ವರು ಎಂದು ಕನ್ನಡ ವಿಭಾಗದ ಅಧ್ಯಾಪಕ ಡಾ.ಎಸ್.ಜಿ.ನಾಯಕ ಹೇಳಿದರು.

ಕನ್ನಡಪ್ರಭ ವಾರ್ತೆ ನಿಪ್ಪಾಣಿ

ಭಾರತದಲ್ಲಿ ಗ್ರಂಥಾಲಯ ವಿಜ್ಞಾನವನ್ನು ಪ್ರತ್ಯೇಕ ವಿದ್ಯಾ ಶಾಖೆಯಾಗಿ ರೂಪಿಸಿ, ಗ್ರಂಥಾಲಯಗಳ ಅಭಿವೃದ್ಧಿಗೆ ಜೀವಮಾನವಿಡಿ ಶ್ರಮಿಸಿದವರು ಡಾ.ಎಸ್.ಆರ್.ರಂಗನಾಥನ್‌ವರು ಎಂದು ಕನ್ನಡ ವಿಭಾಗದ ಅಧ್ಯಾಪಕ ಡಾ.ಎಸ್.ಜಿ.ನಾಯಕ ಹೇಳಿದರು.

ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ಗ್ರಂಥಪಾಲಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಗ್ರಂಥಪಾಲಕ ದಿನಾಚರಣೆಯ ಉದ್ದೇಶ ಪುಸ್ತಕ ಓದುವ ಮಹತ್ವವನ್ನು ಜನರಿಗೆ ತಲುಪಿಸುವುದು. ವಿದ್ಯಾರ್ಥಿಗಳಲ್ಲಿ ಗ್ರಂಥಾಲಯ ಬಳಕೆಯ ಪ್ರೇರಣೆ ಮೂಡಿಸುವುದು. ಜ್ಞಾನ ಹಂಚಿಕೊಳ್ಳುವ ಮತ್ತು ಸಂಗ್ರಹಿಸುವ ಸಂಸ್ಕೃತಿ ಉತ್ತೇಜಿಸುವುದು, ಎಲ್ಲರೂ ಪುಸ್ತಕ ಪ್ರೇಮ ಬೆಳೆಸಿಕೊಳ್ಳುವ ಮೂಲಕ ಗ್ರಂಥಾಲಯವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಡಾ.ಎಸ್.ಆರ್.ರಂಗನಾಥನ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಪ.ಪೂ ಪ್ರಾಚಾರ್ಯೆ ಹೇಮಾ ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ಡಾ.ಎಸ್.ಎಂ.ರಾಯಮಾನೆ, ಬಿ.ಜಿ.ಕಂಕನವಾಡಿ, ತೇಜಸ್ವಿನಿ ನಂದಿ, ಮಂಜುಳಾ.ಕೆ, ಡಾ.ಎಂ.ಡಿ.ಗುರವ, ಶಂಕರಮೂರ್ತಿ ಕೆ.ಎನ್, ಸುಧೀರ ಕೋಠಿವಾಲೆ, ಶಶಿಧರ ಕುಂಬಾರ, ಡಾ.ಬಿ.ಎಂ.ಜನಗೌಡ, ಪ್ರಿಯಾಂಕಾ ಕಮತೆ, ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವರ್ಗ ಉಪಸ್ಥಿತರಿದ್ದರು. ಗ್ರಂಥಪಾಲಕ ಡಾ.ಆನಂದ ಕೆಂಚಕ್ಕನವರ ಸ್ವಾಗತಿಸಿದರು. ಗಿರೀಶ ಕೊಕಟ್ಟನೂರ ನಿರೂಪಿಸಿ, ವಂದಿಸಿದರು.ವೃತ್ತಿ ಮಾರ್ಗದರ್ಶನ ಕಾರ್ಯಾಗಾರ

ಐಕ್ಯೂಎಸಿ ಸಹಯೋಗದಲ್ಲಿ ಜಿ.ಐ.ಬಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಪರೀಕ್ಷೆಗಳು ತೇರ್ಗಡೆ: ತಂತ್ರಗಳು ಮತ್ತು ಸಲಹೆಗಳು ಎಂಬ ವಿಷಯದ ಕುರಿತು ವೃತ್ತಿ ಮಾರ್ಗದರ್ಶನ ಕಾರ್ಯಾಗಾರವನ್ನು ಸ್ಥಳೀಯ ಕೆ.ಎಲ್.ಇ ಸಂಸ್ಥೆಯ ಜಿ.ಐ.ಬಾಗೇವಾಡಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.ಸಂಪನ್ಮೂಲ ವ್ಯಕ್ತಿಗಳಾಗಿ ಬೆಳಗಾವಿಯ ನವದಿಶಾ ತರಬೇತಿ ಕೇಂದ್ರದ ನಿರ್ದೇಶಕ ಪ್ರವೀಣ ಕುಲಕರ್ಣಿ ಹಾಗೂ ದತ್ತಾ ಸುಳೇಭಾವಿ ಅವರು ವಿದ್ಯಾರ್ಥಿಗಳು ಪದವಿ ಅಭ್ಯಾಸದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿದಲ್ಲಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೇಗೆ ಯಶಸ್ವಿಯಾಗಿ ತೇರ್ಗಡೆ ಆಗಬಹುದು ಎಂಬುವುದರ ಕುರಿತು ಮಾಹಿತಿ ನೀಡಿದರು.ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಚುರುಕಾಗಿ ಭಾಗವಹಿಸಿ ತಮಗೆ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಬೇಕು ಮತ್ತು ಯಶಸ್ವಿ ವೃತ್ತಿಜೀವನಕ್ಕಾಗಿ ಯಾವ ರೀತಿಯ ಅಭ್ಯಾಸ ಕ್ರಮಗಳನ್ನು ಅನುಸರಿಸಬೇಕು ಎಂಬುವುದರ ಬಗ್ಗೆ ಉಪಯುಕ್ತ ಮಾಹಿತಿ ಪಡೆದುಕೊಂಡರು.ಕಾರ್ಯಕ್ರಮದ ಅಧ್ಯಕ್ಷತೆ ಪ್ರಾಚಾರ್ಯ ಡಾ.ಎಂ.ಎಂ.ಹುರಳಿ ವಹಿಸಿದ್ದರು. ಐಕ್ಯೂಎಸಿ ಸಂಯೋಜಕ ಡಾ.ಅತುಲಕುಮಾರ ಕಾಂಬಳೆ, ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಸುಧೀರ ಕೋಠಿವಾಲೆ, ಎಸ್.ಎಸ್.ಘೋರ್ಪಡೆ, ನಾಗರಾಜ ಬೆಳಗಾಂಕರ, ಡಾ.ವಿನೋದ ಮಗದುಮ್ಮ, ಡಾ.ಆನಂದ ಕೆಂಚಕ್ಕನವರ, ಶಶಿಧರ ಕುಂಬಾರ ಹಾಗೂ 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಜಿ.ಐ.ಬಿ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರದ ಸಂಯೋಜಕ ಡಾ.ಬಿ.ಎಂ.ಜನಗೌಡ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಂಕರಮೂರ್ತಿ ಕೆ.ಎನ್.ಸಂಪನ್ಮೂಲ ವ್ಯಕ್ತಿಗಳನ್ನು ಪರಿಚಯಿಸಿದರು. ಕುಮಾರ ಬಸವರಾಜ ಯಕ್ಸಂಬಿ ನಿರೂಪಿಸಿ, ವಂದಿಸಿದರು.