ಡಾಕ್ಟರೇಟ್ ಪದವಿ ಪಡೆದ ಡಾ.ರೇಷ್ಮಾಗೆ ಸನ್ಮಾನ

| Published : Mar 04 2025, 12:36 AM IST

ಸಾರಾಂಶ

ಡಾಕ್ಟರೇಟ್‌ ಪದವಿ ಪಡೆದ ಡಾ. ರೇಷ್ಮಾ ಕೆ.ಜೆ. ಅವರನ್ನು ಕ್ರೈಸ್ತ ಸಮುದಾಯದ ವತಿಯಿಂದ ಸನ್ಮಾನಿಸಲಾಯಿತು.

ನಾಪೋಕ್ಲು : ಡಾಕ್ಟರೇಟ್ ಪದವಿ ಪಡೆದ ಡಾ.ರೇಷ್ಮಾ ಕೆ.ಜೆ. ಅವರನ್ನು ಕ್ರೈಸ್ತ ಸಮುದಾಯದ ವತಿಯಿಂದ ಭಾನುವಾರ ಇಲ್ಲಿನ ಕೊಡವ ಸಮಾಜದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.

ಸ್ಥಳೀಯ ಕ್ರೈಸ್ತ ಸಮುದಾಯದವರು ಮೇರಿ ಮಾತೆಯ ದೇವಾಲಯದ ವತಿಯಿಂದ ಸನ್ಮಾನ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ನಾಪೋಕ್ಲು ಕೊಡವ ಸಮಾಜದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು ಧರ್ಮ ಕೇಂದ್ರದ ಜ್ಞಾನ ಪ್ರಕಾಶ್, ಪಾಲನಾ ಸಮಿತಿಯ ಸದಸ್ಯರು, ಯುವಕ ಸಂಘದ ಸದಸ್ಯರು ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭ ಪಾಲನಾ ಸಮಿತಿ ಸದಸ್ಯರು, ಯುವಕ ಸಂಘದ ಸದಸ್ಯರು, ಬಂಧು ಮಿತ್ರರು ಇದ್ದರು.

ಡಾ. ರೇಷ್ಮಾ ಕೆ. ಜೆ ಬೆಂಗಳೂರಿನ ಎಂ ಎಸ್ ರಾಮಯ್ಯ ವಿಶ್ವವಿದ್ಯಾಲಯದಲ್ಲಿ ಉನ್ನತ ವ್ಯಾಸಂಗಮಾಡಿ ಪ್ರೊಫೆಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು ಮೂರು ವರ್ಷದ ಹಣಕಾಸು ವಿಶ್ಲೇಷಕರ ನಡವಳಿಕೆಯ ಮೇಲೆ ಮನೋವಿಜ್ಞಾನದ ಪ್ರಭಾವದ ಅಧ್ಯಯನ ಪಿ ಎಚ್ ಡಿ ಪದವಿಯನ್ನು ಮುಗಿಸಿ ಡಾಕ್ಟರೇಟ್ ಪದವಿ ಪಡೆದುಕೊಂಡಿದ್ದಾರೆ. ಇವರು ಸ್ಥಳೀಯ ನಿವಾಸಿ ಜಾಯ್ ಕೆ, ಜೆ. ಲೀನಾ ಜಾಯ್ ದಂಪತಿ ಪುತ್ರಿ. ಜಾರ್ಜ್ ಮಸ್ಕರೇನಸ್ ಕಾರ್ಯಕ್ರಮ ನಿರೂಪಿಸಿದರು. ಜೋಶಿ ಸಿರಿಯಕ್ ಸ್ವಾಗತಿಸಿ. ಡೇರಿನ ಲೂವಿಸ್ ವಂದಿಸಿದರು.