ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಕೆ.ಕುಲಕರ್ಣಿ ಅವರಿಗೆ ಕುವೆಂಪು ಭಾಷಾ ಸಂಸ್ಕೃತಿ ಪ್ರಾಧಿಕಾರದ ಪ್ರಶಸ್ತಿ ಘೋಷಣೆ ಆದ ಹಿನ್ನೆಲೆಯಲ್ಲಿ ಗಾಯತ್ರಿ ಸಮೂಹದ ಸದಸ್ಯರು ಹಾಗೂ ಶಿಷ್ಯವರ್ಗ ಸನ್ಮಾನಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ನಿವೃತ್ತ ಪ್ರಾಧ್ಯಾಪಕ ಡಾ.ಆರ್.ಕೆ.ಕುಲಕರ್ಣಿ ಅವರಿಗೆ ಕುವೆಂಪು ಭಾಷಾ ಸಂಸ್ಕೃತಿ ಪ್ರಾಧಿಕಾರದ ಪ್ರಶಸ್ತಿ ಘೋಷಣೆ ಆದ ಹಿನ್ನೆಲೆಯಲ್ಲಿ ಗಾಯತ್ರಿ ಸಮೂಹದ ಸದಸ್ಯರು ಹಾಗೂ ಶಿಷ್ಯವರ್ಗ ಸನ್ಮಾನಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ರಾಜು ಪದಕಿ ಮಾತನಾಡಿ, ೨೦೦೩ ರಲ್ಲಿ ಕೋಟಿ ಗಾಯತ್ರಿ ಯಾಗದ ಸಮಯದಲ್ಲಿ ಅನೇಕ ಲೇಖನಗಳನ್ನು ಗಾಯತ್ರಿ ಮಾತೆಯ ಕುರಿತಾಗಿ ಪ್ರಕಟಿಸಿ ಪ್ರಚಾರ ಕಾರ್ಯದಲ್ಲಿ ಸಮೂಹದ ಬೆನ್ನೆಲುಬಾಗಿ ನಿಂತಿದ್ದರು ಎಂದರು.
ಡಾ.ಕುಲಕರ್ಣಿಯವರು ಕನ್ನಡ ಭಾಷೆಯಲ್ಲಿಯೂ ಸಹ ಅಷ್ಟೇ ಪ್ರಭುತ್ವವನ್ನು ಸಾಧಿಸಿದ್ದನ್ನು ಕೊಂಡಾಡಿದರು. ಇಂಥ ಹಿರಿಯರಿಗೆ ಪ್ರಶಸ್ತಿ ಬಂದದ್ದು ವಿಜಯಪುರಕ್ಕೂ ಹೆಮ್ಮೆಯ ವಿಷಯವಾಗಿದೆ. ಅವರನ್ನು ಗೌರವಿಸುವದು ನಮ್ಮನ್ನು ನಾವೇ ಗೌರವಿಸಿಕೊಂಡಂತೆ ಎಂದು ಹೇಳಿದರು.ಬಹು ಭಾಷಾ ಸಾಹಿತಿ ವಿಶ್ರಾಂತ ಪ್ರಾಚಾರ್ಯ ಜಿ.ಆರ್.ಕುಲಕರ್ಣಿ ಮಾತನಾಡಿ, ಶಿಕ್ಷಕರೆಲ್ಲರೂ ಗುರುಗಳಾಗುವದು ಸಾಧ್ಯವಿಲ್ಲ, ಅದು ಕೆಲವರಿಗೆ ಮಾತ್ರ ಸಾಧಿಸುತ್ತದೆ. ಅಂಥವರಲ್ಲಿ ಡಾ.ಕುಲಕರ್ಣಿ ಅವರೂ ಒಬ್ಬರು ಎಂದರು.
ಸದಸ್ಯರಾದ ಸುರೇಶ ದೇಸಾಯಿ, ಪ್ರಕಾಶ ಕುಲಕರ್ಣಿ, ಉದಯ ದೇಶಪಾಂಡೆ, ಜೆ.ಕೆ.ಕುಲಕರ್ಣಿ, ಅನಿಲ ದೀಕ್ಷಿತ, ಅಶೋಕ ಉಪಾಧ್ಯಾಯ, ಶಿಷ್ಯಂದಿರಾದ ಅರವಿಂದ ಕುಸನೂರ, ಆರ್.ಎಸ್.ಜನಗೊಂಡ, ಶ್ರೀನಿವಾಸ ಬಾಹೇತಿ, ಸನ್ಮಾನಿತರ ಪುತ್ರ ರಾಘವೇಂದ್ರ ಕುಲಕರ್ಣಿ ಮುಂತಾದವರು ಇದ್ದರು.