ಡಾ.ಸರ್ಜಿ, ಭೋಜೆಗೌಡ ಬೆಂಬಲಿಗರಿಂದ ವಿಜಯೋತ್ಸವ

| Published : Jun 08 2024, 12:31 AM IST

ಡಾ.ಸರ್ಜಿ, ಭೋಜೆಗೌಡ ಬೆಂಬಲಿಗರಿಂದ ವಿಜಯೋತ್ಸವ
Share this Article
  • FB
  • TW
  • Linkdin
  • Email

ಸಾರಾಂಶ

ವಿಧಾನ ಪರಿಷತ್ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳು ಅತ್ಯಧಿಕ ಮತಗಳಿಂದ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಅವಳಿ ತಾಲೂಕಿನ ಬಿಜೆಪಿ ಮುಖಂಡರುಗಳು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿಸಿ ಸಿಡಿಸಿ ಸಿಹಿಸ ಹಂಚಿ ವಿಯೋತ್ಸವ ಆಚರಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿಧಾನ ಪರಿಷತ್ ನೈಋತ್ಯ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಮೈತ್ರಿ ಅಭ್ಯರ್ಥಿಗಳಾದ ಡಾ. ಧನಂಜೆಯ ಸರ್ಜಿ ಹಾಗೂ ಭೋಜೆಗೌಡ ಇಬ್ಬರೂ ಅತ್ಯಧಿಕ ಮತಗಳಿಂದ ಜಯಗಳಿಸಿದ ಹಿನ್ನೆಲೆಯಲ್ಲಿ ಹೊನ್ನಾಳಿ, ನ್ಯಾಮತಿ ತಾಲೂಕು ಬಿಜೆಪಿ ಘಟಕದಿಂದ ಶುಕ್ರವಾರ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪಟಾಕಿಸಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಬಿಜೆಪಿ ಘಟಕದ ತಾಲೂಕು ಅಧ್ಯಕ್ಷ ಜೆ.ಕೆ.ಸುರೇಶ್ ಮಾತನಾಡಿ, ಸುಶಿಕ್ಷಿತರು ಹಾಗೂ ಪ್ರಜ್ಞಾವಂತರು ಯಾವತ್ತೂ ಬಿಜೆಪಿ ಕೈ ಬಿಟ್ಟಿಲ್ಲ, ಈಗಲೂ ವಿಧಾನ ಪರಿಷತ್ತಿನ ಚುನಾವಣೆ ನಮ್ಮ ಮೈತ್ರಿ ಪಕ್ಷದ ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಪದವೀಧರ ಕ್ಷೇತ್ರದಿಂದ 1988ರಿಂದಲ್ಲೂ ನಮ್ಮ ಪಕ್ಷದ ಅಭ್ಯರ್ಥಿಗಳೇ ಜಯಗಳಿಸಿಕೊಂಡು ಬರುತ್ತಿದ್ದಾರೆ. ಪ್ರಾರಂಭ ದಲ್ಲಿ, ಶಿಕ್ಷಕರ ಕ್ಷೇತ್ರದಿಂದ ಮೊದಲು ನಮ್ಮ ಪಕ್ಷದ ಕ್ಯಾಪ್ಟನ್ ಗಣೇಶ್‍ಕಾರ್ತಿಕ್ ಗೆದ್ದು ಬರುತ್ತಿದ್ದರು, ತದನಂತರ ಜೆಡಿಎಸ್ ಅಭ್ಯರ್ಥಿ ಬೋಜೆಗೌಡ್ರು ಗೆದ್ದು ಬರುತ್ತಿದ್ದಾರೆ ಎಂದು ಅವರು ವಿವರಿಸಿದರು.

ಹೊನ್ನಾಳಿ ತಾಲೂಕಿನಲ್ಲಿ ನಡೆದ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದ ಅಭ್ಯರ್ಥಿಗಳ ಪರವಾಗಿ ನಮ್ಮ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರ ನೇತೃತ್ವದಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಿದ್ದರಿಂದ ಇಬ್ಬರೂ ಅತ್ಯಧಿಕ ಮತಗಳಿಂದ ಗೆಲ್ಲಲ್ಲು ಸಾಧ್ಯವಾಯಿತು. ಮುಂದಿನ ಜಿ.ಪಂ. ಹಾಗೂ ತಾ.ಪಂ. ಚುನಾವಣೆಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಮೈತ್ರಿ ಅಭ್ಯರ್ಥಿಗಳನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ ಎಂದರು.

ಜಿಲ್ಲಾ ಬಿಜೆಪಿ ಮುಖಂಡ ಶಾಂತರಾಜ್ ಪಾಟೀಲ್ ಮಾತನಾಡಿ, ಮೇಲ್ಮನೆಯಲ್ಲಿ ಸದ್ಯ ಬಿಜೆಪಿ ಹಾಗೂ ಜೆಡಿಎಸ್ ಶಾಸಕರೇ ಹೆಚ್ಚಾಗಿದ್ದಾರೆ. ಈಗ ಮತ್ತೆ 4 ಜನ ಮೈತ್ರಿ ಅಭ್ಯರ್ಥಿಗಳು ಗೆದ್ದಿರುವುದರಿಂದ ಮೇಲ್ಮನೆಯಲ್ಲಿ ನಮ್ಮ ಬಲ ಮತ್ತಷ್ಟು ಹೆಚ್ಚಾಗಲಿದೆ. ಅಲ್ಲದೆ, ಸರ್ಕಾರ ಬೇಕಾಬಿಟ್ಟಿ ಬಿಲ್‍ಗಳನ್ನು ಪಾಸ್ ಮಾಡಲು ಸರ್ಕಾರಕ್ಕೆ ಸಾಧ್ಯ ವಾಗುವುದಿಲ್ಲ. ಇದಕ್ಕೆ ಕಾರಣ ನಮ್ಮ ಪಕ್ಷದ ಹೆಚ್ಚಿನ ಶಾಸಕರಿರುವುದು. ಮುಂದಿನ ಎಲ್ಲಾ ಸ್ಥಳಿಯ ಸಂಸ್ಥೆ ಚುನಾವಣೆಗಳಲ್ಲಿಯೂ ನಾವೇ ಗೆಲ್ಲುತ್ತೇವೆ, ಈಗಲೇ ಸರ್ಕಾರ ಜಿ.ಪಂ. ಹಾಗೂ ತಾ.ಪಂ. ಚುನಾವಣೆಗಳು ನಡೆಸಿದರೂ ನಾವು ರೆಡಿ ಇದ್ದೇವೆ ಎಂದರು.

ಪುರಸಭೆ ಸದಸ್ಯರಾದ ಧರ್ಮಪ್ಪ ಮಾತನಾಡಿದರು. ಜಿ.ಪಂ.,ಸುರೇಂದ್ರನಾ ಯ್ಕ , ರಂಗನಾಥ, ,ಅನುಶಂಕರ್ ಗುಂಡ,ಬಿಜೆಪಿ ಮುಖಂಡರಾದ ಕೆ.ವಿ.ಚನ್ನಪ್ಪ,ನೆಲಹೊನ್ನೆ ಮಂಜುನಾಥ್,ಶಿವಾನಂದ್,ಅರಕೆರೆ ನಾಗರಾಜ್,ಶಿವುಹುಡೇದ್, ತರಗನಹಳ್ಳಿ ರಮೇಶ್‍ಗೌಡ,ರಮೇಶ್‍ನಾಯ್ಕ್,ರವಿಕುಮಾರ್,ಕುಳಗಟ್ಟೆ ರಂಗನಾಥ್ ಹಾಗೂ ಇತರರು ಇದ್ದರು.