ರಾಷ್ಟ್ರಭಕ್ತ ಮತದಾರರಿಂದ ಡಾ.ಸರ್ಜಿ ತಿರಸ್ಕಾರ ಶತಸಿದ್ಧ: ಕೆ.ಎಸ್‌.ಈಶ್ವರಪ್ಪ

| Published : May 26 2024, 01:32 AM IST

ರಾಷ್ಟ್ರಭಕ್ತ ಮತದಾರರಿಂದ ಡಾ.ಸರ್ಜಿ ತಿರಸ್ಕಾರ ಶತಸಿದ್ಧ: ಕೆ.ಎಸ್‌.ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ರಘುಪತಿ ಭಟ್ ರಿಗೆ ಈ ಬಾರಿಯ ವಿಧಾನಪರಿಷತ್ ನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಲಿದ್ದು ನನ್ನಂತೆ ರಘುಪತಿ ಭಟ್ಟರಿಗೂ ಅನ್ಯಾಯವಾಗಿದೆ. ಚುನಾವಣೆ ಸಿದ್ಧತೆಗಳ ಮಾಡಿಕೊಳ್ಳಿ ಎಂದು ಆಶ್ವಾಸನೆ ನೀಡಿ ಇತ್ತೀಚೆಗೆ ಪಕ್ಷಕ್ಕೆ ಸೇರಿದ ಧನಂಜಯ್ ಸರ್ಜಿಯವರ ಅಭ್ಯರ್ಥಿ ಎಂದು ಘೋಷಿಸಿರುವುದು, ಬಿಜೆಪಿ ಕಟ್ಟಿದ ಎಲ್ಲ ಪ್ರಾಮಾಣಿಕ ಕಾರ್ಯಕರ್ತರಿಗೆ ನೋವು ತಂದಿದೆ.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಮೂರು ಬಾರಿ ಶಾಸಕರಾಗಿ ಅನುಭವವಿರುವ ರಘುಪತಿ ಭಟ್ ರನ್ನು ಜಾತ್ಯಾತೀತವಾಗಿ ಜನರು ಬೆಂಬಲಿಸುತ್ತಿದ್ದು, ಹಣ ಬಲದ ಆಧಾರದಲ್ಲಿ ಚುನಾವಣೆ ಎದುರಿಸುತ್ತಿರುವ ಡಾ.ಧನಂಜಯ ಸರ್ಜಿಯವರನ್ನು ಸ್ವಾಭಿಮಾನಿ, ರಾಷ್ಟ್ರಭಕ್ತ ಮತದಾರರು ತಿರಸ್ಕರಿಸುವುದು ಶತಸ್ಸಿದ್ಧ ಎಂದು ಮಾಜಿ ಡಿಸಿಎಂ ಕೆ.ಎಸ್‌ ಈಶ್ವರಪ್ಪ ತಿಳಿಸಿದರು.

ಪಟ್ಟಣದ ಶಿವಗಿರಿ ಸಮುದಾಯ ಭವನದಲ್ಲಿ ಶನಿವಾರ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರ ಸಭೆ ಉದ್ದೇಶಿಸಿ ಮಾತನಾಡಿ, ರಘುಪತಿ ಭಟ್ ರಿಗೆ ಈ ಬಾರಿಯ ವಿಧಾನಪರಿಷತ್ ನ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ರಾಷ್ಟ್ರಭಕ್ತರ ಬಳಗ ಬೆಂಬಲ ನೀಡಲಿದ್ದು ನನ್ನಂತೆ ರಘುಪತಿ ಭಟ್ಟರಿಗೂ ಅನ್ಯಾಯವಾಗಿದೆ. ಚುನಾವಣೆ ಸಿದ್ಧತೆಗಳ ಮಾಡಿಕೊಳ್ಳಿ ಎಂದು ಆಶ್ವಾಸನೆ ನೀಡಿ ಇತ್ತೀಚೆಗೆ ಪಕ್ಷಕ್ಕೆ ಸೇರಿದ ಧನಂಜಯ್ ಸರ್ಜಿಯವರ ಅಭ್ಯರ್ಥಿ ಎಂದು ಘೋಷಿಸಿರುವುದು, ಬಿಜೆಪಿ ಕಟ್ಟಿದ ಎಲ್ಲ ಪ್ರಾಮಾಣಿಕ ಕಾರ್ಯಕರ್ತರಿಗೆ ನೋವು ತಂದಿದೆ ಎಂದರು.

ನನ್ನ ಹೋರಾಟ ಯಾರ ವಿರುದ್ಧವೂ ಅಲ್ಲ ಶಿಕಾರಿಪುರ ತಾಲೂಕಿನಲ್ಲಿ ಬಡವರ, ಬಗರುಹುಕುಂ ಸಾಗುವಳಿದಾರರ, ಶೋಷಿತರ ತುಳಿತಕ್ಕೆ ಒಳಗಾದವರ ಪರ ನನ್ನ ಹೋರಾಟ ಮುಂದುವರಿಯಲಿದೆ. ಚುನಾವಣೆ ದಿನ ಬೆಳಗ್ಗೆ ನನ್ನ ಹಳೆಯ ವಿಡಿಯೋ ಹಿಡಿದು ನಕಲಿ ಸುದ್ದಿ ತಯಾರಿಸಿ ಲಾಭ ಪಡೆಯಲು ಯತ್ನಿಸಿದ ಸಂಸದ ರಾಘವೇಂದ್ರ ಇಷ್ಟು ನೀಚ ಮಟ್ಟಕ್ಕೆ ಇಳಿಯುತ್ತಾರೆ ಎಂದು ಅಂದು ಕೊಂಡಿರಲಿಲ್ಲ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದು, ಕೂಡಲೇ ಕ್ರಮ ಕೈಗೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಈಶ್ವರಪ್ಪ ಪುತ್ರ ಕೆ.ಇ. ಕಾಂತೇಶ್, ಮುಖಂಡ ಗಂಗಾ ನಾಯಕ್, ಹುಚ್ರಾಯಪ್ಪ, ಎಲ್ಲಪ್ಪ, ಕುಮಾರ್ ನಾಯಕ್, ಸಂತೋಷ್, ಚೌಡಪ್ಪ ಮತ್ತಿತರರಿದ್ದರು.ಮನವೊಲಿಸಿ ಮತದಾನ ಮಾಡಿಸಿ

ರಘುಪತಿ ಭಟ್ ನೂರಕ್ಕೆ ನೂರರಷ್ಟು ಗೆಲುವು ವಿಶ್ವಾಸವಿದೆ. ಸ್ವಾಭಿಮಾನಿ ರಾಷ್ಟ್ರ ಭಕ್ತರು ಈ ಬಾರಿ ಚುನಾವಣೆಯಲ್ಲಿ ಹಣವುಳ್ಳ ಧನಂಜಯ್ ಸರ್ಜಿಯವರ ತಿರಸ್ಕರಿಸಲಿದ್ದಾರೆ. ತಾಲೂಕಿನಲ್ಲಿ ಸುಮಾರು ನಾಲ್ಕು ಸಾವಿರ ಪದವೀಧರ ಮತದಾರರಿದ್ದು, ಅವರ ಮನವೊಲಿಸಿ ಮತದಾನ ಮಾಡುವಂತೆ ಮಾಡುವುದು ಸ್ವಾಭಿಮಾನಿ ರಾಷ್ಟ್ರಭಕ್ತರ ಕರ್ತವ್ಯವಾಗಿದೆ. ಮತದಾರರ ನಿಮ್ಮ ಪರವಾಗಿ ಪ್ರಚಾರಕ್ಕೆ ಕರೆ ತರಬೇಡಿ ಅವರನ್ನು ಬೆದರಿಸುವ ಒತ್ತಡ ಹಾಕುವ ತಂತ್ರವು ಈ ತಾಲೂಕಿನಲ್ಲಿ ನಡೆಯುತ್ತದೆ. ಬದಲಾಗಿ ಗುಪ್ತವಾಗಿ ರಘುಪತಿ ಭಟ್‌ರಿಗೆ ಮತದಾನ ಮಾಡಲು ಮನವಿ ಮಾಡಿ ಎಂದು ಈಶ್ವರಪ್ಪ ತಿಳಿಸಿದರು.