ಡಾ. ಶರತ್ ಕೆ. ರಾವ್‌ಗೆ ಲಂಡನ್‌ನ ರಾಯಲ್ ಕಾಲೇಜ್‌ನಿಂದ ಗೌರವ ಡಾಕ್ಟರೇಟ್

| Published : Jul 13 2025, 01:18 AM IST

ಡಾ. ಶರತ್ ಕೆ. ರಾವ್‌ಗೆ ಲಂಡನ್‌ನ ರಾಯಲ್ ಕಾಲೇಜ್‌ನಿಂದ ಗೌರವ ಡಾಕ್ಟರೇಟ್
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ರಾವ್ ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಆರೋಗ್ಯ ವಿಜ್ಞಾನಗಳ ಸಹಉಪಕುಲಪತಿಯಾಗಿದ್ದಾರೆ. ಅವರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೀನ್, ಡೀನ್, ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಮಣಿಪಾಲ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಪ್ರಸಿದ್ಧ ಆರ್ಥೋಪೆಡಿಕ್ ಶಸ್ತ್ರಚಿಕಿತ್ಸಕ ಮತ್ತು ಶಿಕ್ಷಣತಜ್ಞ ಡಾ. ಶರತ್ ಕುಮಾರ್ ರಾವ್ ಕೆ. ಅವರ ವೈದ್ಯಕೀಯ ಮತ್ತು ಆರೋಗ್ಯ ನಿರ್ವಹಣೆಯಲ್ಲಿ ಸಾಧನೆ ಕೊಡುಗೆಗಳನ್ನು ಗುರುತಿಸಿ, ಲಂಡನ್‌ನ ರಾಯಲ್ ಕಾಲೇಜ್ ಆಫ್ ಫಿಸಿಷಿಯನ್ಸ್ ಗೌರವ ಡಾಕ್ಟರೇಟ್ (ಎಫ್‌ಆರ್‌ಸಿಪಿ) ನೀಡಿ ಗೌರವಿಸಿದೆ. ಈ ಪ್ರಶಸ್ತಿಯನ್ನು ಜು.8ರಂದು ಲಂಡನ್‌ನ ರಾಯಲ್ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಪ್ರದಾನ ಮಾಡಲಾಯಿತು.ಡಾ. ರಾವ್ ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ)ನ ಆರೋಗ್ಯ ವಿಜ್ಞಾನಗಳ ಸಹಉಪಕುಲಪತಿಯಾಗಿದ್ದಾರೆ. ಅವರು ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಡೀನ್, ಡೀನ್, ಆರ್ಥೋಪೆಡಿಕ್ಸ್ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದರು.ಸಂಕೀರ್ಣ ಗಾಯಚಿಕಿತ್ಸೆ, ಸಂಧಿ ಜೋಡಣೆ, ಬದಲಾವಣೆ ಮತ್ತು ಮಣಿಗಂಟು ಆರ್ಥೋಸ್ಕೋಪಿಯಲ್ಲಿ ನಿಪುಣರಾಗಿರುವ ಅವರು, ಜರ್ಮನಿ, ಇಟಲಿ, ಯುಕೆ ಮತ್ತು ಆಸ್ಟ್ರೇಲಿಯಾದ ಪ್ರಸಿದ್ಧ ವೈದ್ಯಕೀಯ ಕೇಂದ್ರಗಳಲ್ಲಿ ಮಂಡಿ ಮತ್ತು ಸೊಂಟದ ಬದಲೀ ಶಸ್ತ್ರಚಿಕಿತ್ಸೆಯಲ್ಲಿ ಉನ್ನತ ತರಬೇತಿ ಪಡೆದುಕೊಂಡಿದ್ದಾರೆ. ಈ ಅಂತಾರಾಷ್ಟ್ರೀಯ ಅನುಭವದಿಂದ ಅವರು ಮಾಹೆ ಮತ್ತು ಇತರ ಸಂಸ್ಥೆಗಳಲ್ಲಿ ಆರ್ಥೋಪೆಡಿಕ್ ಆರೈಕೆ ಮತ್ತು ಶಸ್ತ್ರಚಿಕಿತ್ಸಾ ತರಬೇತಿಯ ಗುಣಮಟ್ಟವನ್ನು ಎತ್ತರಕ್ಕೆ ಏರಿಸಿದ್ದಾರೆ.ಅವರ ಈ ಸಾಧನೆಗಾಗಿ ಮಾಹೆಯ ಉಪಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್, ಸಹಕುಲಾಧಿಪತಿ ಡಾ.ಎಚ್.ಎಸ್. ಬಲ್ಲಾಳ್ ಅಭಿನಂದಿಸಿದ್ದಾರೆ.