ಡಾ.ಶ್ಯಾಂ ಪ್ರಕಾಶ್ ಮುಖರ್ಜಿ ಕನಸು ನನಸು ಮಾಡಿ ಪ್ರಧಾನಿ ಮೋದಿ: ಪೀಹಳ್ಳಿ ರಮೇಶ್

| Published : Jun 24 2024, 01:34 AM IST

ಸಾರಾಂಶ

ನೆಹರು ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಮುಖರ್ಜಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದನ್ನು ಅಂದೇ ವಿರೋಧ ಮಾಡಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. 1951ರಲ್ಲಿ ರಾಷ್ಟ್ರೀಯತೆ ಉಳ್ಳ ಒಂದು ಪಕ್ಷ ವನ್ನು ಸಂಘಟಿಸಿ ಜನಸಂಘವನ್ನು ಸಂಘಟನೆ ಮಾಡಿ ನಂತರ ಬಿಜೆಪಿ ಇಂದು ದೇಶದಲ್ಲಿ ಬಹು ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನಗಳ ನೀಡುವ 370ನೇ ವಿಧಿಯನ್ನು ಮೊದಲು ವಿರೋಧಿಸಿದ ಬಿಜೆಪಿ ಸಂಸ್ಥಾಪಕ ಶ್ಯಾಂ ಪ್ರಕಾಶ್ ಮುಖರ್ಜಿ ಅವರ ಕನಸನ್ನು ಪ್ರಧಾನಿ ಮೋದಿ ಅವರು ನನಸು ಮಾಡಿದರು ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಪೀಹಳ್ಳಿ ರಮೇಶ್ ಹೇಳಿದರು.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಸಂಸ್ಥಾಪಕ ಶ್ಯಾಂ ಪ್ರಕಾಶ್ ಮುಖರ್ಜಿ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಡಾ. ಶ್ಯಾಂ ಪ್ರಸಾದ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.

ನೆಹರು ಮಂತ್ರಿ ಮಂಡಲದಲ್ಲಿ ಸಚಿವರಾಗಿದ್ದ ಮುಖರ್ಜಿ ಅವರು ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದನ್ನು ಅಂದೇ ವಿರೋಧ ಮಾಡಿ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದರು. 1951ರಲ್ಲಿ ರಾಷ್ಟ್ರೀಯತೆ ಉಳ್ಳ ಒಂದು ಪಕ್ಷ ವನ್ನು ಸಂಘಟಿಸಿ ಜನಸಂಘವನ್ನು ಸಂಘಟನೆ ಮಾಡಿ ನಂತರ ಬಿಜೆಪಿ ಇಂದು ದೇಶದಲ್ಲಿ ಬಹು ದೊಡ್ಡ ಪಕ್ಷವಾಗಿ ಬೆಳೆದು ನಿಂತಿದೆ ಎಂದರು.

ಎಲ್ಲರಿಗೂ ಒಂದೇ ಕಾನೂನು ಎಂಬ ತತ್ವ, ಸಿದ್ಧಾಂತಗಳು ಅವರ ಪ್ರಮುಖ ಉದ್ದೇಶಗಳಾಗಿದ್ದವು. ದೇಶಕ್ಕಾಗಿ ಮುಖರ್ಜಿ ಭಾರತೀಯ ಜನಸಂಘದ ಸಂಸ್ಥಾಪನೆ ಮಾಡಿ ದೇಶದ ಅಖಂಡತೆ, ಸಾರಭೌಮತ್ವಕ್ಕಾಗಿ ಬಲಿದಾನಗೈದ ವ್ಯಕ್ತಿಗಳಲ್ಲಿ ಇವರು ಒಬ್ಬರಾಗಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ಇಂಡವಾಳು ಎಸ್.ಸಚ್ಚಿದಾನಂದ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್, ನಂದೀಶ್, ಪುರಸಭಾ ಸದಸ್ಯ ಗಂಜಾಂ ಶಿವು, ಮುಖಂಡರಾದ ಸಾಮೀಯಾನ ಪುಟ್ಟರಾಜು, ಕೃಷ್ಣೇಗೌಡ ಬಲ್ಲೇನಹಳ್ಳಿ, ಪುಟ್ಟರಾಮು, ರಾಮಕೃಷ್ಣ, ಹೇಮಂತ್ ಕುಮಾರ್, ವಿರುಪಾಕ್ಷ, ಪ್ರಭಾಕರ್ ಸೇರಿದಂತೆ ಬಿಜೆಪಿ ಮಹಿಳಾ ಕಾರ್ಯಕರ್ತರು ಇದ್ದರು.