ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ದೇಶದ ಅಖಂಡತೆಗಾಗಿ ಶ್ರಮಿಸಿದ ಭಾರತೀಯ ಜನಸಂಘದ ಸಂಸ್ಥಾಪಕರಾದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರು ಪ್ರಖರ ರಾಷ್ಟ್ರೀಯವಾದಿಯಾಗಿದ್ದರು ಎಂದು ಹಿಂದಿನ ಶಾಸಕರಾದ ಡಾ.ವೀರಣ್ಣ ಚರಂತಿಮಠ ಹೇಳಿದರು.ನಗರದ ಶಿವಾನಂದ ಜಿನ್ ನಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಭಾನುವಾರ ಹಮ್ಮಿಕೊಂಡ ಡಾ.ಶಾಮ ಪ್ರಸಾದ್ ಮುಖರ್ಜಿ ಅವರ ಜನ್ಮದಿನಾಚರಣೆ ನಿಮಿತ್ತ ಅವರ ಭಾವಚಿತ್ರಕ್ಕೆ ಪುಷ್ಪಾಂಜಲಿ ಸಲ್ಲಿಸುವ ಮೂಲಕ ಗೌರವ ನಮನ ಸಲ್ಲಿಸಿ ಮಾತನಾಡಿದರು.
ಧರ್ಮನಿಷ್ಠ ದೇಶಭಕ್ತ, ಭಾರತದ ಅಭಿವೃದ್ಧಿಗೆ ಅಪ್ರತಿಮ ಕೊಡುಗೆ ನೀಡಿದ್ದಾರೆ. ಭಾರತದ ಏಕತೆಗೆ ಅವರು ದಿಟ್ಟ ಪ್ರಯತ್ನ ನಡೆಸಿದರು. ಮುಖರ್ಜಿ ಅವರು ತಮ್ಮ ಸಂಪೂರ್ಣ ಜೀವನ ಭಾರತದ ಏಕತೆ, ಸಮಗ್ರತೆ ಮತ್ತು ಪ್ರಗತಿಗಾಗಿ ಮುಡಿಪಾಗಿಟ್ಟವರು. ಅವರ ಚಿಂತನೆ ಆದರ್ಶಗಳು ಭಾರತದ ಕೋಟ್ಯಂತರ ಜನರಿಗೆ ಆದರ್ಶಗಳಾಗಿವೆ ಎಂದು ಹೇಳಿದರು.ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಮಾತನಾಡಿ, ಮುಖರ್ಜಿ ಅವರು ದೇಶದ ಜನತೆಯ ನಡುವೆ ವಿದ್ವತ್ ಪೂರ್ಣ ವಿದ್ವಾಂಸರಾಗಿ ಮತ್ತು ಬುದ್ಧಿಜೀವಿಯಾಗಿ ಗುರುತಿಸಿಕೊಂಡಿದ್ದರು, ಕಾಶ್ಮೀರವನ್ನು ಭಾರತದ ಉಳಿದ ಭಾಗಗಳೊಂದಿಗೆ ಸಂಯೋಜಿಸುವ ಕಾರಣಕ್ಕಾಗಿ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಅವರು ಹುತಾತ್ಮರಾದರು,
ಬಿಜೆಪಿಯ ಮೂಲಪಕ್ಷವಾದ ಜನಸಂಘದ ಸಂಸ್ಥಾಪಕರು ಮತ್ತು ದೇಶದ ಅಖಂಡತೆ ಮತ್ತು ಏಕತೆಗಾಗಿ ಪ್ರಾಣ ಬಲಿಕೊಟ್ಟವರು, ರಾಷ್ಟ್ರವಾದಿ ರಾಜಕಾರಣವನ್ನು ಪ್ರತಿಪಾದಿಸಿದ ಮುಖರ್ಜಿಯವರು, ಏಕ್ ವಿಧಾನ್ ಏಕ್ ಪ್ರಧಾನ್ ಮತ್ತು ಏಕ್ ಸಂವಿಧಾನ ಘೋಷಣೆ ಮಾಡಿದವರು ಎಂದರು.ನಗರ ಮಂಡಲ ಅಧ್ಯಕ್ಷ ಬಸವರಾಜ ಹುನಗುಂದ, ಮುಖಂಡರಾದ ಜಿ.ಎನ್. ಪಾಟೀಲ, ಡಾ.ಎಂ.ಎಸ್. ದಡ್ಡೆನ್ನವರ, ಬಸವರಾಜ ಯಂಕಂಚಿ, ರಾಜು ನಾಯ್ಕರ, ಲಕ್ಷ್ಮೀ ನಾರಾಯಣ ಕಾಸಟ್, ಸತ್ಯನಾರಾಯಣ ಹೆಮಾದ್ರಿ, ಭಾಗೀರಥಿ ಪಾಟೀಲ, ನಗರಸಭೆ ಉಪಾಧ್ಯಕ್ಷೆ ಶೋಭಾ ರಾವ, ಸದಸ್ಯರಾದ ಜ್ಯೋತಿ ಭಜಂತ್ರಿ, ಶಶಿಕಲಾ ಮಜ್ಜಗಿ, ಸ್ಮೀತಾ ಪವಾರ, ಪ್ರಮಾ ಅಂಬಿಗೇರ, ಸರಸ್ವತಿ ಕುರಬರ, ಶ್ರೀನಾಥ ಸಜ್ಜನ, ಸಾಗರ ಬಂಡಿ, ಗುಂಡುರಾವ ಶಿಂದೆ, ಕೇಶವ ಭಜಂತ್ರಿ, ಶ್ರೀಧರ ನಾಗರಬೇಟ್ಟ ಸೇರಿದಂತೆ ಅನೇಕರು ಭಾಗವಹಿಸಿದ್ದರು.