ಮಾಜಿ ಪ್ರಧಾನಿ ಡಾ.ಸಿಂಗ್‌ ಎಂದೂ ಮರೆಯಲಾಗದ ಧ್ರುವತಾರೆ

| Published : Dec 28 2024, 12:45 AM IST

ಸಾರಾಂಶ

ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಭಾರತದ ಶ್ರೇಷ್ಠ ಆರ್ಥಿಕ ತಜ್ಞ. ಸರಳತೆಯ ರಾಜಕಾರಣಿ, ಶಿಸ್ತುಬದ್ಧ ಆರ್ಥಿಕ ಸಲಹೆಗಾರರಾಗಿದ್ದರು. ವಿತ್ತ ಸಚಿವರಾಗಿ ದೇಶಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಇತಿಹಾಸದಲ್ಲಿ ಎಂದೆಂದೂ ಮರೆಯಲಾಗದ ಧ್ರುವತಾರೆ ಎಂದು ಜವಾಹರ್ ಬಾಲ್ ಮಂಚ್ ಸ್ಮರಿಸಿದೆ ಸ್ಮರಿಸಿದ್ದಾರೆ.

ದಾವಣಗೆರೆ: ಭಾರತದ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಅವರು ಭಾರತದ ಶ್ರೇಷ್ಠ ಆರ್ಥಿಕ ತಜ್ಞ. ಸರಳತೆಯ ರಾಜಕಾರಣಿ, ಶಿಸ್ತುಬದ್ಧ ಆರ್ಥಿಕ ಸಲಹೆಗಾರರಾಗಿದ್ದರು. ವಿತ್ತ ಸಚಿವರಾಗಿ ದೇಶಕ್ಕೆ ಅವರು ನೀಡಿರುವ ಕೊಡುಗೆ ಅಪಾರ. ಇತಿಹಾಸದಲ್ಲಿ ಎಂದೆಂದೂ ಮರೆಯಲಾಗದ ಧ್ರುವತಾರೆ ಎಂದು ಜವಾಹರ್ ಬಾಲ್ ಮಂಚ್ ಸ್ಮರಿಸಿದೆ ಸ್ಮರಿಸಿದ್ದಾರೆ.

ಆರ್ಥಿಕ ಉದಾರೀಕರಣದ ರೂವಾರಿಯೂ ಆಗಿರುವ ಸಿಂಗ್ ಅವರು, ಭಾರತ ಕಂಡ ಅಪರೂಪದ ವಿನಯವಂತ ಪಾಂಡಿತ್ಯ ಮೂರ್ತಿ. ಯಾವ ರಾಜಕಾರಣಿಗಳು, ಪಕ್ಷಗಳೊಂದಿಗೆ ವೈರತ್ವ ಕಟ್ಟಿಕೊಳ್ಳದೇ ಶಿಸ್ತುಬದ್ಧ ಆರ್ಥಿಕತೆಯಲ್ಲಿ ದೇಶವನ್ನು ಸಂಕಷ್ಟದಿಂದ ಪಾರು ಮಾಡಿದ ಶ್ರೇಷ್ಠ ಆಡಳಿತಗಾರ ಎಂದು ತಿಳಿಸಲಾಗಿದೆ.

ಸಜ್ಜನಿಕೆ ಆಡಳಿತಗಾರ, ಮೃದು ಭಾಷೆಯ ಒಬ್ಬ ಮಹಾನ್ ನಾಯಕನನ್ನು ದೇಶ ಕಳೆದುಕೊಂಡಿದೆ. ಪ್ರಧಾನಿಯಾಗಿದ್ದಾಗ ಕೈಗೊಂಡಿದ್ದ ಯೋಜನೆಗಳು ಇತಿಹಾಸದಲ್ಲಿ ಚಿರಸ್ಥಾಯಿಯಾಗಿ ಉಳಿಯಲಿವೆ. ಮಾಹಿತಿ ಹಕ್ಕು ಕಾಯ್ದೆ, ಲೋಕಪಾಲ್, ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಯೋಜನೆ, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಹತ್ತುಹಲವು ಕಾರ್ಯಕ್ರಮಗಳು ದೇಶದ ಭದ್ರ ಬುನಾದಿಗೆ ಸಹಕಾರಿಯಾಗಿವೆ ಎಂದು ಸಂಘಟನೆಯ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ, ಕೆ.ಎಚ್.ಪ್ರೇಮಾ, ಶಿಲ್ಪಾ ಪರಶುರಾಮ, ಫಯಾಜ್ ಅಹ್ಮದ್ ಹಾಗೂ ಮಂಜುಸ್ವಾಮಿ ಸ್ಮರಿಸಿದ್ದಾರೆ.

- - -