ಸಾರಾಂಶ
ಕನ್ನಡಪ್ರಭ ವಾರ್ತೆ ಜೇವರ್ಗಿ
ಕಲ್ಯಾಣ ಕರ್ನಾಟಕದ ಸಿದ್ಧಗಂಗಾ ಮಠ ಎಂದೇ ಖ್ಯಾತಿಯಾಗಿರುವ ತಾಲೂಕಿನ ಸೊನ್ನದ ಸಿದ್ದಲಿಂಗೇಶ್ವರ ವಿರಕ್ತಮಠದಲ್ಲಿ ಜ್ಞಾನ ದಾಸೋಹ, ಅನ್ನ ದಾಸೋಹ ಹಾಗೂ ಅನಾಥ ಮಕ್ಕಳಿಗೆ ಉಚಿತ ವಸತಿ, ಶಿಕ್ಷಣ ನೀಡುತ್ತಿರುವ ಮಠದ ಪೀಠಾಧಿಪತಿ ಡಾ. ಶಿವಾನಂದ ಸ್ವಾಮೀಜಿ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಅಭಿಪ್ರಾಯಪಟ್ಟರು.ತಾಲೂಕಿನ ಸೊನ್ನದ ಶಿವಾನಂದ ಶಿವಯೋಗಿ ಗ್ರಾಮೀಣ ಜನಕಲ್ಯಾಣ ಸಂಸ್ಥೆ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಗುರುಸಿದ್ಧ ಸ್ವಾಮೀಜಿ 32ನೇ ಪುಣ್ಯಸ್ಮರಣೆ ಕಾರ್ಯಕ್ರಮದ ನಿಮಿತ್ತ ಉಚಿತ ನೇತ್ರ ಹಾಗೂ ದಂತ ತಪಾಸಣೆ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಸೊನ್ನ ಡಾ. ಶಿವಾನಂದ ಸ್ವಾಮೀಜಿಗಳು ಜೀವನದುದ್ದಕ್ಕೂ ಸಾಮಾಜಿಕ ಸೇವೆಯಲ್ಲಿ ನಿರತರಾಗಿದ್ದಾರೆ. ಅವರ ಕಾರ್ಯ ತಾಲೂಕಿನ ಜನತೆಗೆ ಆದರ್ಶಪ್ರಾಯವಾಗಿದೆ. ಮಠದಿಂದ ಘಟ ಬೆಳೆಯಬಾರದು ಘಟದಿಂದ ಮಠ ಬೆಳೆಯಬೇಕು, ಡಾ.ಶಿವಾನಂದ ಶ್ರೀಗಳು ಘಟವಾಗಿ ಮಠವನ್ನು ಬೆಳೆಸುತ್ತ ಬಂದಿದ್ದಾರೆ. ಶ್ರೀಮಠಕ್ಕೆ ಮುಂಬರುವ ದಿನಗಳಲ್ಲಿ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ₹50 ಲಕ್ಷ ಅನುದಾನ ಬಿಡುಗಡೆ ಗೊಳಿಸುವುದಾಗಿ ಶಾಸಕ ಡಾ. ಅಜಯಸಿಂಗ್ ಹೇಳಿದರು.ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಮಾತನಾಡಿ, ಸೊನ್ನ ಶ್ರೀಗಳ ಸಮಾಜ ಮುಖಿ ಸೇವೆ ಅವಿಸ್ಮರಣೀಯವಾಗಿದೆ. ಸದಾ ಕಾಲ ಶ್ರೀ ಮಠದಲ್ಲಿ ಸಾಮಾಜಿಕ, ಧಾರ್ಮಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಈ ಭಾಗದ ಹಳ್ಳಿಗಳ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಿದ್ದಾರೆ ಎಂದು ಹೇಳಿದರು.
ಜಗದ್ಗುರು ಡಾ.ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಮಾತನಾಡಿ, ಗ್ರಾಮೀಣ ಜನ ಕಲ್ಯಾಣ ಸಂಸ್ಥೆಯ ಆವರಣದಲ್ಲಿ ನಿರ್ಮಿಸುತ್ತಿರುವ ವಿದ್ಯಾರ್ಥಿ ವಸತಿ ನಿಲಯಕ್ಕೆ ₹5 ಕೋಟಿ ಅನುದಾನ ಬಿಡುಗಡೆಗೊಳಿಸಬೇಕು. ಇದರಿಂದ ಈ ಭಾಗದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸೊನ್ನದ ಡಾ.ಶಿವಾನಂದ ಸ್ವಾಮೀಜಿ ನೇತೃತ್ವ ವಹಿಸಿದ್ದರು. ಜೇರಟಗಿಯ ಶ್ರೀ ಮಹಾಂತ ಸ್ವಾಮೀಜಿ, ಯಡ್ರಾಮಿಯ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ರಾಜಶೇಖರ ಸೀರಿ, ಡಾ.ವಿಶ್ವನಾಥ ರಡ್ಡಿ, ಡಾ.ಕೆ.ಜಿ ಬಿರಾದಾರ, ಡಾ.ಸಿದ್ದು ಪಾಟೀಲ್, ರೇವಣಸಿದ್ದಪ್ಪ ಸಂಕಾಲಿ, ಹುಣಚಪ್ಪ ಬುರುಡ, ಚನ್ನಮಲ್ಲಯ್ಯ ಹಿರೇಮಠ, ಶಿವಾನಂದ ಸಾಹು ಮಾಕಾ, ಕಲ್ಯಾಣಕುಮಾರ ಗಂವ್ಹಾರ, ಸಾಹೇಬಗೌಡ ಬಿರೆದಾರ, ಮಲ್ಲಿಕಾರ್ಜುನ ಮಹಾಜನಶೆಟ್ಟಿ, ಶಿವಲಿಂಗಪ್ಪ ಮುದೋಳ, ವಿಜಯಕುಮಾರ ಕಲ್ಲಹಂಗರಗಾ, ವಿಜಯಕುಮಾರ ಬಿರೆದಾರ, ಶಿವಾನಂದ ಮುದೋಳ, ಶಿವಲಿಂಗ ಹಳ್ಳಿ, ನಿಂಗಣ್ಣಗೌಡ ಹಿರೇಗೌಡ, ನಬಿ ಬಾಗವಾನ, ಮಲ್ಲಿಕಾರ್ಜುನ ಬಿರೆದಾರ, ಗದಿಗೆಪ್ಪ ಮಾಕಾ, ರೇವಣಸಿದ್ದ ಅಕ್ಕಿ, ಶಂಕರಗೌಡ ಹಾಲಗಡ್ಲಾ, ಸಿದ್ದು ಆಂದೋಲಾ, ಮಲ್ಲಿಕಾರ್ಜುನ ಹಂಗರಗಿ, ಮನೋಜಕುಮಾರ ಪಡದು ಪ್ರಸಾದ ಸೇವೆ ಸಲ್ಲಿಸಿದರು. ಕರಬಸಪ್ಪ ಗುಳಗಿ ಟೆಂಟ ಸೇವೆ ಸಲ್ಲಿಸಿದರು. ಸುರೇಶ ಮಳಲಿ ಪತ್ರಿಕೆ ಪ್ರಚಾರ ಸೇವೆ ಸಲ್ಲಿಸಿದರು. ಅಲ್ಲಾಬಕ್ಷ ಬಾಗವಾನ ಫಲಪುಷ್ಪ ಸೇವೆ ಸಲ್ಲಿಸಿದರು.
ನೇತ್ರ ಹಾಗೂ ದಂತ ತಜ್ಞರಾದ ಡಾ. ಮಂಜುಳಾ ಮಂಗಾಣೆ, ಡಾ.ದೀಕ್ಷಾ ಕಾರಬಾರಿ, ಡಾ.ಸಿದ್ಧಲಿಂಗರಡ್ಡಿ, ಡಾ.ಸಂದ್ಯಾ, ಡಾ. ಲಕ್ಷ್ಮಣ ಪೂಜಾರಿ, ಡಾ.ಮನೋಜ, ಡಾ.ಶ್ವೇತಾ ದೇವದುರ್ಗ, ಡಾ.ಅಮೃತಾ ದೇಶಪಾಂಡೆ, ಡಾ.ರೇಣುಕಾ, ಡಾ.ವಿಶ್ವನಾಥ ಬಂಗಾರಿ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಪಾಲ್ಗೊಂಡಿದ್ದರು.;Resize=(128,128))
;Resize=(128,128))
;Resize=(128,128))
;Resize=(128,128))