ಕನ್ನಡಪ್ರಭ ವಾರ್ತೆ ಮೈಸೂರುಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಅವರು ಎಲ್ಲರನ್ನೂ ಒಳಗೊಂಡಂತಹ ಒಳ್ಳೆಯ ಸಂವಿಧಾನವನ್ನು ನಮಗೆ ನೀಡಿದ್ದಾರೆ. ಸಂವಿಧಾನ ರಚನೆಗಾಗಿ ಅವರು ಎಲ್ಲರನ್ನೂ ಅರ್ಥಮಾಡಿಕೊಂಡು, ಎಲ್ಲರನ್ನೂ ತಿಳಿದುಕೊಂಡು ತಮ್ಮ ಇಡೀ ಜೀವನವನ್ನು ಸಂವಿಧಾನ ರಚನೆಗಾಗಿ ಬಳಸಿದ್ದಾರೆ. ಹೀಗಾಗಿ, ಅವರನ್ನು ನಾವು ಓದಿ ಅರ್ಥ ಮಾಡಿಕೊಳ್ಳಬೇಕು ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ ತಿಳಿಸಿದರು.ನಗರದ ಸ್ಕ್ಯಾನ್ ರೇ ಸಭಾಂಗಣದಲ್ಲಿ ಅಖಿಲ ಭಾರತೀಯ ಸಾಹಿತ್ಯ ಪರಿಷದ್, ಸಹಿತಂ ಪ್ರಕಾರ ಹಾಗೂ ಸ್ವರಾಷ್ಟ್ರ ಪ್ರಕಾಶನ ಸಹಯೋಗದಲ್ಲಿ ಭಾನುವಾರ ಆಯೋಜಿಸಿದ್ದ ಡಾ. ಸುಧಾಕರ ಹೊಸಹಳ್ಳಿ ಅವರ ''''''''ನಾನೂ ಕಾಫಿರ- ಬಾಬಾ ಸಾಹೇಬರ ಹಿಂದುತ್ವ ಕಥನ'''''''' ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಸಾನ್ನಿಧ್ಯ ವಹಿಸಿ ಮಾತನಾಡಿದರು.ಅಂಬೇಡ್ಕರ್ ಅವರು ದೇಶದ ಪ್ರತಿಯೊಬ್ಬರೂ, ಎಲ್ಲಾ ಧರ್ಮದ ಜನರು ಕೂಡ ಹೇಗೆ ಜೀವಿಸಬೇಕು, ಏನು ಹೇಳಬೇಕು, ಎಲ್ಲವನ್ನೂ ಕೂಡ ಸರಳವಾಗಿ ರೀತಿಯಲ್ಲಿ ಬೋಧಿಸಿದ್ದಾರೆ. ತನ್ಮೂಲಕ ಸಂವಿಧಾನವನ್ನು ನಮ್ಮ ಕೈಗೆ ತಂದುಕೊಟ್ಟಿದ್ದಾರೆ. ನಾವು ಅದನ್ನು ಅರ್ಥ ಮಾಡಿಕೊಂಡು ಒಟ್ಟಿಗೆ ಕುಟುಂಬದ ಸದಸ್ಯರಂತೆ ಬಾಳಬೇಕಾಗಿದೆ. ಅವರು ಕೊಟ್ಟಿರುವಂತಹ ತತ್ವಗಳನ್ನು ನಾವು ಓದಬೇಕು. ಅನುಭವ ಮಾಡಿಕೊಳ್ಳಬೇಕು ಹಾಗೂ ತಿಳವಳಿಕೆ ಮೂಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.ವಿಶ್ವದ ಪೂರ್ವ ಭಾಗದಲ್ಲಿ ಅಸ್ಥಿರತೆ, ಮಧ್ಯ ಪ್ರಾಚ್ಯದಲ್ಲಿ ಇವತ್ತು ಇರುವುದು ಅಸ್ಥಿರತೆ. ಹಾಗೆ, ಪಶ್ಚಿಮ ದೇಶಗಳಲ್ಲಿ ಎಲ್ಲಾ ಕಡೆ ಅಸ್ಥಿರತೆ ಇದೆ. ಇವರೆಲ್ಲವನ್ನೂ ನೋಡಿದರೆ ನಮ್ಮ ಭಾರತದಲ್ಲಿ ಮಾತ್ರ ಶಾಂತವಾಗಿದೆ. ಇವತ್ತು ಆಲೋಚನೆ ಮಾಡುವ, ಚಿಂತನೆ ಮಾಡುವಂತಹ ಕಾಲದಲ್ಲಿ ನಾವಿದ್ದು, ಸಮಾಧಾನವಾಗಿ, ಶಾಂತವಾಗಿ ಜೀವನ ನಡೆಸಬೇಕು ಎಂದು ಅವರು ತಿಳಿಸಿದರು. ಅನುವಾದ ಯಥಾವತ್ತಾಗಿರಬೇಕುಪುಸ್ತಕ ಬಿಡುಗಡೆಗೊಳಿಸಿದ ಚಿಂತಕಿ ಸಹನಾ ವಿಜಯ್ ಕುಮಾರ್ ಮಾತನಾಡಿ, ಡಾ. ಅಂಬೇಡ್ಕರ್ ಅವರನ್ನು ಕುರಿತು ಪ್ರಾದೇಶಿಕ ಭಾಷೆಗಳನ್ನು ಬರೆಯುವಾಗ ಅಥವಾ ಕೃತಿಗಳನ್ನು ಅನುವಾದ ಮಾಡುವಾಗ ಪೂರ್ಣ ಭಾಗವನ್ನು ಯಥಾವತ್ತಾಗಿ ಮಾಡಬೇಕು. ಮಹನೀಯರ ಕೃತಿಗಳನ್ನು ಪ್ರಾದೇಶಿಕ ಭಾಷೆಗೆ ಅನುವಾದ ಮಾಡುವಾಗ ಈಗಿನ ಚಳವಳಿಗೆಳಿಗೆ ಅನುಕೂಲ ಮಾಡುವುದು, ಸಂದರ್ಭದ ಅನುಕೂಲಕ್ಕೆ ಉಳಿಸುವುದು ಬಹಳ ಜಾಸ್ತಿ. ಹೀಗಾಗಿ, ಅಂಬೇಡ್ಕರ್ ಅವರ ಕೃತಿಗಳನ್ನು ಈ ತರಹದ ಯಾವ ದಾಕ್ಷಿಣ್ಯಕ್ಕೂ ಒಳಗಾಗದೇ ಇದ್ದದ್ದನ್ನು ಇದ್ದಂತೆ ಅನುವಾದ ಮಾಡಬೇಕು ಎಂದು ಹೇಳಿದರು.ಆರ್ ಎಸ್ಎಸ್ ಕರ್ನಾಟಕ ದಕ್ಷಿಣ ಪ್ರಾಂತ್ಯದ ಮಾಜಿ ಸಂಘ ಚಾಲಕ ಮಾ. ವೆಂಕಟರಾಮ್, ಕೃತಿಯ ಕರ್ತೃ ಡಾ. ಸುಧಾಕರ ಹೊಸಳ್ಳಿ, ಅನುಪಮಾ, ದಿವ್ಯಾ ಮೊದಲಾದವರು ಇದ್ದರು.----ಕೋಟ್...ಜಗತ್ತಿನಲ್ಲಿ ಇರುವ ಎಲ್ಲ ಧರ್ಮಗಳು ಶಾಂತಿಯನ್ನೇ ಬಯಸುತ್ತವೆ. ಯಾವ ಧರ್ಮವೂ ಒಬ್ಬರನ್ನು ಇನ್ನೊಬ್ಬರ ಮೇಲೆ ಆಕ್ರಮಣ ಮಾಡು ಎಂದು ಹೇಳಿಲ್ಲ. ಎಲ್ಲರೂ ಜೀವನದ ಎಲ್ಲ ಸತ್ಯವನ್ನೇ ಹೇಳಿದ್ದಾರೆ. ನಾವು ಅದನ್ನು ಅರ್ಥ ಮಾಡಿಕೊಳ್ಳದೆ ಹೋಗುತ್ತಿದ್ದೇವೆ. ಹೀಗಾಗಿ, ಇವುಗಳನ್ನು ಅರ್ಥ ಮಾಡಿಕೊಳ್ಳಬೇಕಾದರೆ ಎಲ್ಲವನ್ನೂ ತಿಳಿದಿರುವವರು ಚಿಂತನೆ ಮಾಡಬೇಕು. ಜಾಗೃತಿ ಮೂಡಿಸಬೇಕು. ಸಹಭಾಗಿಗಳಾಗಿ ಸಾಮರಸ್ಯದಿಂದ ನಡೆಯಬೇಕು.- ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ಆದಿಚುಂಚನಗಿರಿ ಮೈಸೂರು ಶಾಖಾ ಮಠ----ಬಾಕ್ಸ್... ಅಕ್ಷರ ಮಾರಿಕೊಳ್ಳುವ ದಲ್ಲಾಳಿಗಳಿದ್ದಾರೆಅಕ್ಷರ ಸೇವೆಯ ಮೂಲಕ ರಾಷ್ಟ್ರ ಕಟ್ಟಿದವರ ನಡುವೆ ಅಕ್ಷರಗಳನ್ನು ಮಾರಿಕೊಳ್ಳುವ ದಲ್ಲಾಳಿಗಳು ಇದ್ದಾರೆ. ಮೈಸೂರಿನಲ್ಲಿ ಕೆಲ ಸಾಹಿತಿಗಳು ಅಕ್ಷರ ಮಾರಿಕೊಳ್ಳುವ ದಲ್ಲಾಳಿಗಳಾಗಿದ್ದಾರೆ. ಅವರ ಸಾಹಿತ್ಯ ದುಷ್ಟ ಸಂಹಾರಕ್ಕೆ ಬಳಕೆಯಾಗಲಿಲ್ಲ. ರಾಷ್ಟ್ರ ಸಂಹಾರಕ್ಕೆ ಬಳಕೆಯಾಗುತ್ತಿದೆ, ಇವರಿಂದ ದೇಶ ಮತ್ತು ರಾಜ್ಯ ಒಂದಾಗಲೇ ಇಲ್ಲ. ಕೆಲ ಸಾಹಿತಿಗಳಂತೂ ಪ್ರಧಾನಿ ಮೋದಿ ಅವರನ್ನು ಬೈಯ್ಯುವುದೇ ಖಯಾಲಿ ಮಾಡಿಕೊಂಡಿದ್ದಾರೆ ಎಂದು ಲೇಖಕ ಡಾ. ಸುಧಾಕರ ಹೊಸಳ್ಳಿ ಆರೋಪಿಸಿದರು.
ಡಾ.ಬಿ.ಆರ್. ಅಂಬೇಡ್ಕರ್ ಅವರನ್ನು ಓದಿ ಅರ್ಥ ಮಾಡಿಕೊಳ್ಳಬೇಕು
ಎಲ್ಲರನ್ನೂ ಅರ್ಥಮಾಡಿಕೊಂಡು, ಎಲ್ಲರನ್ನೂ ತಿಳಿದುಕೊಂಡು ತಮ್ಮ ಇಡೀ ಜೀವನವನ್ನು ಸಂವಿಧಾನ ರಚನೆಗಾಗಿ ಬಳಸಿದ್ದಾರೆ.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.