ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಸುಧಾಕರ್‌ ಗೆಲುವು ನಿಶ್ಚಿತ

| Published : Apr 05 2024, 01:00 AM IST

ಸಾರಾಂಶ

ದಾಬಸ್ ಪೇಟೆ: ಮೈತ್ರಿ ಪಕ್ಷದ ಅಭ್ಯರ್ಥಿ ಡಾ.ಕೆ.ಸುಧಾಕ್ ಅವರು 2.5 ಲಕ್ಷ ಮತಗಳಲ್ಲಿ ಜಯಗಳಿಸುವುದು ನಿಶ್ಚಿತ. ತಾಲೂಕಿನಲ್ಲಿ 25 ಸಾವಿರ ಲೀಡ್ ನೀಡುವ ಗುರಿ ಹೊಂದಿದ್ದೇವೆ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ತಿಳಿಸಿದರು.

ದಾಬಸ್ ಪೇಟೆ: ಮೈತ್ರಿ ಪಕ್ಷದ ಅಭ್ಯರ್ಥಿ ಡಾ.ಕೆ.ಸುಧಾಕ್ ಅವರು 2.5 ಲಕ್ಷ ಮತಗಳಲ್ಲಿ ಜಯಗಳಿಸುವುದು ನಿಶ್ಚಿತ. ತಾಲೂಕಿನಲ್ಲಿ 25 ಸಾವಿರ ಲೀಡ್ ನೀಡುವ ಗುರಿ ಹೊಂದಿದ್ದೇವೆ ಎಂದು ಮಾಜಿ ಶಾಸಕ ಎಂ.ವಿ.ನಾಗರಾಜು ತಿಳಿಸಿದರು.

ಸೋಂಪುರ ಹೋಬಳಿಯ ನಿಡವಂದ ಕ್ರಾಸ್ ಬಳಿ ಚಿಕ್ಕಬಳ್ಳಾಪುರ ಲೋಕಸಭೆಯ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ಮತ್ತು ಬಹಿರಂಗ ಸಮಾವೇಶಕ್ಕೆ ಹೋಗುವ ಸಂದರ್ಭದಲ್ಲಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರೆ, ಪ್ರಧಾನಿ ನರೇಂದ್ರ ಮೋದಿಯವರ ಆಡಳಿತವನ್ನು ಒಪ್ಪಿ ಮೈತ್ರಿ ಆಗಿರುವುದು ತಾಲೂಕಿನಲ್ಲಿ ಹೊಸ ಶಕ್ತಿ ಬಂದಿದೆ. ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿದ್ದರೆ, ರಾಜ್ಯದಲ್ಲಿ ಸಹ ನಮ್ಮದೇ ಸರ್ಕಾರ ಇರುತ್ತಿತ್ತು. ಬಿಸಿಲನ್ನು ಲೆಕ್ಕಿಸದೇ ಪ್ರಚಾರ ಕೈಗೊಳ್ಳುತ್ತೇವೆ, ದೇಶದ ಸುಭದ್ರತೆಗೆ ಎನ್‌ಡಿಎ ಮೈತ್ರಿಕೂಟ ಬೆಂಬಲಿಸಿ, ಈ ಕ್ಷೇತ್ರದಲ್ಲೂ ಮೈತ್ರಿ ಅಭ್ಯರ್ಥಿಗೆ ಒಮ್ಮತದ ಸಂಘಟನೆಯ ಬಲ ಪ್ರದರ್ಶನ ಮಾಡುತ್ತೇವೆ ಎಂದರು.

ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಮಾತನಾಡಿ, ನಮ್ಮ ತಾಲೂಕಿನಿಂದ ಸುಮಾರು ೫೦೦ ಕಾರುಗಳಲ್ಲಿ, ನೆಲಮಂಗಲದಿಂದ ಒಂದು ತಂಡ, ಸೋಂಪುರ, ಸೋಲೂರು, ತ್ಯಾಮಗೊಂಡ್ಲು ಭಾಗದ ಕಾರ್ಯಕರ್ತರು ಮತ್ತೊಂದು ತಂಡವಾಗಿ ತೆರಳುತ್ತಿದ್ದೇವೆ. ಇತ್ತೀಚೆಗೆ ಆಯ್ಕೆಯಾದ ನೂತನ ಬಿಜೆಪಿ ತಾಲೂಕು ಪದಾಧಿಕಾರಿಗಳಿಗೆ ಈ ಚುನಾವಣೆ ಹೊಸ ಚೈತನ್ಯ ನೀಡಲಿದೆ. ಜೆಡಿಎಸ್-ಬಿಜೆಪಿ ಮೈತ್ರಿ ಸಂಘಟನೆ ಗ್ರಾಮೀಣ ಪ್ರದೇಶಗಳಲ್ಲಿ ಹೊಸ ಸಂಚಲನ ಉಂಟು ಮಾಡಿದ್ದು, ಶೀಘ್ರದಲ್ಲೇ ಬಿರುಸಿನ ಪ್ರಚಾರ ಕೈಗೊಳ್ಳುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಹೋಬಳಿ ಅಧ್ಯಕ್ಷ ಮುರಳೀಧರ್, ಜೆಡಿಎಸ್ ಹೋಬಳಿ ಅಧ್ಯಕ್ಷ ಮೋಹನ್ ಕುಮಾರ್, ರೈತಮೋರ್ಚಾ ಜಿಲ್ಲಾಧ್ಯಕ್ಷ ಭೃಂಗೇಶ್, ನೆ.ಯೋ.ಪ್ರಾ.ಮಾಜಿ ಅಧ್ಯಕ್ಷ ಆನಂದ್, ಗ್ರಾಪಂ ಮಾಜಿ ಅಧ್ಯಕ್ಷರಾದ ಉಮಾಶಂಕರ್, ಹೊನ್ನಗಂಗಶೆಟ್ಟಿ, ಪುಟ್ಟಗಂಗಯ್ಯ, ಎಪಿಎಂಸಿ ಮಾಜಿ ನಿರ್ದೇಶಕ ಗಂಗಣ್ಣ, ಮೈತ್ರಿ ಕಾರ್ಯಕರ್ತರಾದ ಕರವೇ ಮಂಜುನಾಥ್, ಗೆದ್ದಲಹಳ್ಳಿ ನಾಗರಾಜು, ಜಗಜ್ಯೋತಿ ಬಸವೇಶ್ವರ, ಸತೀಶ್, ಗುಬ್ಬಣ್ಣಸ್ವಾಮಿ, ಮಹೇಶ್, ಎಸ್ಸಿ ಮೋರ್ಚಾದ ಸೋಲೂರು ಉಮೇಶ್, ಪುಟ್ಟಸಿದ್ದಯ್ಯ ಮಹಿಳಾ ಪದಾಧಿಕಾರಿಗಳಾದ ವೇದಾವತಿ, ಮಂಜುಳಾ, ನಳಿನ ಮತ್ತಿತರಿದ್ದರು. ಫೋಟೋ 5 : ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ನಾಮಪತ್ರ ಸಲ್ಲಿಕೆ ಮತ್ತು ಬಹಿರಂಗ ಬಿಜೆಪಿ ಸಮಾವೇಶಕ್ಕೆ ಸೋಂಪುರ-ಸೋಲೂರು ಹೋಬಳಿಯ ಬಿಜೆಪಿ-ಜೆಡಿಎಸ್ ನೂರಾರು ಕಾರ್ಯಕರ್ತರು ತೆರಳಿದರು.