ಇಸ್ರೇಲ್‌ ಪರ ಪೋಸ್ಟ್‌: ಬಹರೇನ್‌ನಲ್ಲಿ ಮಂಗಳೂರಿನ ವೈದ್ಯ ಬಂಧನ

| Published : Oct 21 2023, 12:30 AM IST

ಇಸ್ರೇಲ್‌ ಪರ ಪೋಸ್ಟ್‌: ಬಹರೇನ್‌ನಲ್ಲಿ ಮಂಗಳೂರಿನ ವೈದ್ಯ ಬಂಧನ
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್ಲ್‌ ಪರ ಪೋಸ್ಟ್ಸ್ಟ್‌- ಮಂಗಳೂರು ವೈದ್ಯ ಬಹರೇನಲಸಲ್ಲಿ ಸೆರೆ
ಕನ್ನಡಪ್ರಭ ವಾರ್ತೆ ಮಂಗಳೂರು ಇಸ್ರೇಲ್‌ ಪರ ಪೋಸ್ಟ್‌ ಹಾಕಿರುವ ಕಾರಣಕ್ಕೆ ಬಹರೇನ್‌ನಲ್ಲಿ ಹತ್ತು ವರ್ಷಗಳಿಂದ ವೈದ್ಯರಾಗಿರುವ ಮಂಗಳೂರು ಮೂಲದ ವೈದ್ಯ ಡಾ.ಸುನಿಲ್‌ ರಾವ್‌ ಎಂಬವರನ್ನು ಬಹರೇನ್‌ ಪೊಲೀಸರು ಬಂಧಿಸಿದ್ದಾರೆ. ಹಮಾಸ್‌ ಉಗ್ರರನ್ನು ವಿರೋಧಿಸಿ, ಇಸ್ರೇಲ್‌ ದೇಶದ ಪರವಾಗಿ ಡಾ.ಸುನಿಲ್‌ ರಾವ್‌ ಹಾಕಿದ್ದ ಪೋಸ್ಟ್‌ ಎಕ್ಸ್‌ ಟ್ವಿಟರ್‌ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಕೆಲವರು ಈ ಪೋಸ್ಟ್‌ನ್ನು ಬಹರೇನ್‌ ಆಡಳಿತಕ್ಕೆ ಟ್ಯಾಗ್‌ ಮಾಡಿ ಕ್ರಮಕ್ಕೆ ಆಗ್ರಹಿಸಿದ್ದರು. ಪ್ಯಾಲೆಸ್ತೀನ್‌ ವಿರೋಧಿಸಿ ಪೋಸ್ಟ್‌ ಹಾಕಿದ್ದಾರೆಂದು ಆಡಳಿತದ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಡಾ.ಸುನಿಲ್‌ ರಾವ್‌ ಅವರು ರಾಯಲ್‌ ಹಾಸ್ಪಿಟಲ್‌ ಬೆನ್‌ ಸಂಸ್ಥೆಯಲ್ಲಿ 10 ವರ್ಷಗಳಿಂದ ಇಂಟರ್ನಲ್‌ ಮೆಡಿಸಿನ್‌ ವಿಭಾಗದಲ್ಲಿ ಸ್ಪೆಷಲಿಸ್ಟ್‌ ಆಗಿದ್ದರು. ಬಹರೇನ್‌ ಪೊಲೀಸರು ಬಂಧಿಸಿದ ಬೆನ್ನಲ್ಲೇ ಆಸ್ಪತ್ರೆ ಆಡಳಿತ ಅವರನ್ನು ಹುದ್ದೆಯಿಂದ ತೆಗೆದು ಹಾಕಿದೆ ಎನ್ನಲಾಗಿದೆ. ಡಾ.ಸುನೀಲ್‌ ರಾವ್‌ ಅವರ ಪೋಸ್ಟ್‌ ನಮ್ಮ ಸಮುದಾಯಕ್ಕೆ ವಿರುದ್ಧವಾಗಿದೆ. ಅವರ ಸಿದ್ಧಾಂತ ನಮಗೆ ಒಪ್ಪಿತವಲ್ಲ, ಅದು ನಮ್ಮ ನಿಲುವಲ್ಲ, ನಿಯಮ ಉಲ್ಲಂಘನೆ ಮಾಡಿದ್ದರಿಂದ ಕೆಲಸದಿಂದ ವಜಾ ಮಾಡಿದ್ದೇವೆ ಎಂದು ಬಹರೇನ್‌ ರಾಯಲ್‌ ಆಸ್ಪತ್ರೆ ಪ್ರತಿಕ್ರಿಯಿಸಿದೆ. ಕೆಲಸದಿಂದ ವಜಾಗೊಳಿಸುವ ಮುನ್ನ ಡಾ.ಸುನಿಲ್‌ ರಾವ್‌ ಅವರು ಕ್ಷಮೆ ಕೇಳಿದ್ದರು. ಬಹರೇನ್‌ನಲ್ಲಿ ಕಳೆದ 10 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ಈ ದೇಶದ ಜನರನ್ನು, ಧರ್ಮವನ್ನು ಗೌರವಿಸುತ್ತೇನೆ. ಒಬ್ಬ ಡಾಕ್ಟರ್‌ ಆಗಿ ಸಾವು, ನೋವುಗಳ ಬಗ್ಗೆ ಮಾತನಾಡಿದ್ದೆ. ಭಾವನೆಗಳಿಗೆ ಧಕ್ಕೆಯಾದರೆ ಕ್ಷಮಿಸಿ ಎಂದು ಪೋಸ್ಟ್‌ ಮಾಡಿದ್ದರು. ಆದರೂ ಇದಕ್ಕೆ ಅಲ್ಲಿನ ಆಡಳಿತ ಮನ್ನಣೆ ನೀಡಿಲ್ಲ. ಮಂಗಳೂರಿನ ಕೆಎಂಸಿ ಕಾಲೇಜಿನಲ್ಲಿ ಎಂಡಿ ಮಾಡಿದ್ದ ಡಾ.ಸುನಿಲ್‌ ರಾವ್‌, ವಿಶಾಖಪಟ್ಟಣದಲ್ಲಿ ಎಂಬಿಬಿಎಸ್‌ ಪೂರೈಸಿದ್ದರು. ಭಾರತೀಯ ಮೂಲದ ಡಾ.ಸುನಿಲ್‌ ರಾವ್‌ ಬಂಧನ ಆಗಿರುವ ಬಗ್ಗೆ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಉಗ್ರರ ವಿರುದ್ಧ ಪೋಸ್ಟ್‌ ಹಾಕಿದ್ದಕ್ಕಾಗಿ ವೈದ್ಯರ ವಿರುದ್ಧ ಕ್ರಮ ಕೈಗೊಂಡಿರುವುದನ್ನು ನೆಟ್ಟಿಗರು ಖಂಡಿಸಿದ್ದಾರೆ.