ಆರೋಗ್ಯವಂತ ಸಮಾಜಕ್ಕೆ ಸರ್ವರ ಸಹಕಾರ ಅಗತ್ಯಃ ಡಾ.ಟಿ.ಎಂ.ದೇವರಾಜ್

| Published : May 10 2025, 01:12 AM IST

ಸಾರಾಂಶ

ತರೀಕೆರೆ, ಆರೋಗ್ಯವಂತ ಸಮಾಜ ನಿರ್ಮಿಸಲು ಸರ್ವರ ಸಹಕಾರ ಅಗತ್ಯವಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಟಿ.ಎಂ. ದೇವರಾಜ್ ಹೇಳಿದ್ದಾರೆ.

ರಾಷ್ಟ್ರೀಯ ಕ್ಷಯ ನಿರ್ಮೂಲನಾ ಕಾರ್ಯಕ್ರಮಕ್ಕೆ ಚಾಲನೆ

ಕನ್ನಡಪ್ರಭ ವಾರ್ತೆ, ತರೀಕೆರೆ

ಆರೋಗ್ಯವಂತ ಸಮಾಜ ನಿರ್ಮಿಸಲು ಸರ್ವರ ಸಹಕಾರ ಅಗತ್ಯವಿದೆ ಎಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಟಿ.ಎಂ. ದೇವರಾಜ್ ಹೇಳಿದ್ದಾರೆ.

ಶುಕ್ರವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಾರ್ವಜನಿಕ ಆಸ್ಪತ್ರೆಯಿಂದ ಆಸ್ಪತ್ರೆ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಚುಚ್ಚುಮದ್ದು ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. 60 ವರ್ಷ ಮೇಲ್ಪಟ್ಟ ಸಕ್ಕರೆ ಕಾಯಿಲೆ ಇದ್ದವರಿಗೆ, ಈ ಮುಂಚೆ ಟಿ.ಬಿ.ಯಿಂದ ನರಳಿ, ಗುಣಮುಖರಾದವರಿಗೆ, ಅತೀ ಕಡಿಮೆ ತೂಕ ಇದ್ದವರಿಗೆ, ಟಿ.ಬಿ.ಕಾಯಿಲೆ ರೋಗಿಗಳಿಗೆ ಉಪಚರಿಸಿದವರಿಗೆ ಈ ಚುಚ್ಚುಮದ್ದು ನೀಡಲಾಗುತ್ತಿದೆ. ತರೀಕೆರೆಯನ್ನು ಕ್ಷಯಮುಕ್ತ ತಾಲೂಕನ್ನಾಗಿ ಮಾಡಲು ಎಲ್ಲರ ಸಹಕಾರ ಅಗತ್ಯವಿದೆ. ತಾಲೂಕಿನಲ್ಲಿ 3 ಗ್ರಾಮಗಳನ್ನು ಕ್ಷಯ ಮುಕ್ತ ಗ್ರಾಮಗಳ ನ್ನಾಗಿಸಲ ಘೋಷಿಸಲಾಗಿದೆ. ಕ್ಷಯಮುಕ್ತ ತಾಲೂಕನ್ನಾಗಿಸಲು ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಈ ಚುಚ್ಚುಮದ್ದನ್ನು ರಾಜ್ಯದಲ್ಲಿ 16 ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿದೆ ನೀಡಲಾಗುತ್ತಿದೆ ಎಂದು ಹೇಳಿದರು.ರಂಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಸನ್ನಕುಮಾರ್ ಸಣ್ಣಕ್ಕಿ ಮಾತನಾಡಿ ನಿಮ್ಮನ್ನು ರಕ್ಷಿಸಿಕೊಳ್ಳುವ ಮೂಲಕ ನಿಮ್ಮ ಕುಟುಂಬ ರಕ್ಷಿಸಿಕೊಳ್ಳಬೇಕು. ಕ್ಷಯಮುಕ್ತ ಭಾರತವನ್ನಾಗಿಸಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಿತರು. ಡಾ.ಕೆ.ಆರ್.ರವಿಶಂಕರ್, ಡಾ.ಚೆನ್ನಬಸಪ್ಪ, ಡಾ.ಮೋಹನ್, ಡಾ.ಹೇಮಚಂದ್ರ, ಡಾ.ಗೀತಾ, ಡಾ.ಶ್ರೀನಿವಾಸ್, ಆಸ್ಪತ್ರೆ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

9ಕೆಟಿಆರ್.ಕೆ.8ಃ

ತರೀಕೆರೆಯಲ್ಲಿ ರಾಷ್ಟ್ರೀಯ ಕ್ಷಯ ನಿರ್ಮೂಲನಾ ಕಾರ್ಯಕ್ರಮಕ್ಕೆ ಸಾರ್ವಜನಿಕ ಆಸ್ಪತ್ರೆ ಅಡಳಿತಾಧಿಕಾರಿ ಡಾ.ಟಿ.ಎಂ. ದೇವರಾಜ್ ಚಾಲನೆ ನೀಡಿದರು. ರಂಗೇನಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಸನ್ನಕುಮಾರ್ ಸಣ್ಣಕ್ಕಿ ಮತ್ತಿತರರು ಇದ್ದರು.