ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಉಡುಪಿ ರಂಗಭೂಮಿಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.

ಉಡುಪಿ: ರಾಜ್ಯದ ಪ್ರತಿಷ್ಠಿತ ಹವ್ಯಾಸಿ ನಾಟಕ ಹಾಗೂ ಸಾಂಸ್ಕೃತಿಕ ಸಂಸ್ಥೆಯಾದ ಉಡುಪಿ ರಂಗಭೂಮಿಯ ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.ಸಂಸ್ಥೆಯ 61ನೇ ಮಹಾಸಭೆಯಲ್ಲಿ 2026-2027 ರ ಸಾಲಿನ ಆಡಳಿತ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಮಾರ್ಗದರ್ಶಕರಾಗಿ ಡಾ. ಹೆಚ್. ಶಾಂತಾರಾಮ್, ಗೌರವಾಧ್ಯಕ್ಷರಾಗಿ ಡಾ. ಹೆಚ್. ಎಸ್. ಬಲ್ಲಾಳ್, ಅಧ್ಯಕ್ಷರಾಗಿ ಡಾ. ತಲ್ಲೂರು ಶಿವರಾಮ ಶೆಟ್ಟಿ, ಉಪಾಧ್ಯಕ್ಷರು ಭಾಸ್ಕರ ರಾವ್ ಕಿದಿಯೂರು, ಎನ್. ರಾಜಗೋಪಾಲ ಬಲ್ಲಾಳ್, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ, ಕೋಶಾಧಿಕಾರಿ ಭೋಜ ಯು., ಜೊತೆ ಕೋಶಾಧಿಕಾರಿ ಕೆ. ರವೀಂದ್ರ ಆಚಾರ್ಯ, ಜತೆ ಕಾರ್ಯದರ್ಶಿಗಳು ಶ್ರೀಪಾದ ಹೆಗಡೆ, ವಿವೇಕಾನಂದ ಎನ್., ಸಂಘಟನಾ ಕಾರ್ಯದರ್ಶಿಗಳು ಪೂರ್ಣಿಮಾ ಸುರೇಶ್, ಗಿರೀಶ್ ತಂತ್ರಿ, ರವಿರಾಜ ನಾಯಕ್ ಆಯ್ಕೆಯಾದರು.

ಅಲ್ಲದೇ ಆಡಳಿತ ಮಂಡಳಿ ಸದಸ್ಯರಾಗಿ 8, ಗೌರವ ಸಲಹಾ ಸಮಿತಿಗೆ 7, ವಿಶೇಷ ಆಹ್ವಾನಿತ ಸದಸ್ಯರಾಗಿ 20 ಮಂದಿಯನ್ನು ಆಯ್ಕೆ ಮಾಡಲಾಗಿದೆ.

--