ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವು ಸದಾ ಸಮಾಜಮುಖಿ ಆಗಿರುತ್ತದೆ. ಅವರ ಸಾಹಿತ್ಯವು ಸಮಾಜವನ್ನು ಸನ್ಮಾರ್ಗದಡೆಗೆ ಸಾಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದ್ದಾರೆ.

- ಗುತ್ತೂರಿನ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪೆನ್ನುಗಳ ವಿತರಣೆ

- - -

ಹರಿಹರ: ಡಾ. ವಿ.ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವು ಸದಾ ಸಮಾಜಮುಖಿ ಆಗಿರುತ್ತದೆ. ಅವರ ಸಾಹಿತ್ಯವು ಸಮಾಜವನ್ನು ಸನ್ಮಾರ್ಗದಡೆಗೆ ಸಾಗುವಂತೆ ಮಾಡುವ ಶಕ್ತಿಯನ್ನು ಹೊಂದಿದೆ ಎಂದು ಶಾಸಕ ಬಿ.ಪಿ. ಹರೀಶ್ ತಿಳಿಸಿದರು.

ಕನ್ನಡ ಚಿತ್ರರಂಗದ ‌ಚಿತ್ರ ಸಾಹಿತಿ ಡಾ. ವಿ‌.ನಾಗೇಂದ್ರಪ್ರಸಾದ್ ಅವರ 50ನೇ ವರ್ಷಾಚರಣೆ ಪ್ರಯುಕ್ತ ಹರಿಹರ ಸಮೀಪದ ಗುತ್ತೂರಿನ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪೆನ್ನುಗಳನ್ನು ವಿತರಿಸಿ ಅವರು ಮಾತನಾಡಿದರು. ನಾಗೇಂದ್ರ ಪ್ರಸಾದ್ ಅವರು ನನಗೆ ಅತ್ಯಂತ ಆತ್ಮೀಯ ಸ್ನೇಹಿತರಾಗಿದ್ದಾರೆ ಎಂದರು.

ಡಾ. ವಿ.ನಾಗೇಂದ್ರ ಪ್ರಸಾದ್ ಅಭಿಮಾನಿ ಬಳಗದ ತಾಲೂಕು ಅಧ್ಯಕ್ಷ ಗೋಪಿ ಪಿ.ಎನ್. ಮಾತನಾಡಿ, ವಿದ್ಯಾರ್ಥಿಗಳಿಗೆ ಪೆನ್ ನೀಡಿರುವುದು, ವಿದ್ಯಾರ್ಥಿಗಳಲ್ಲಿ ಅಡಗಿರುವ ಕಥೆ, ಕವನ ಮುಂತಾದ ಬರವಣಿಗೆಯ ಸುಪ್ತಶಕ್ತಿಗಳನ್ನು ಹೊರಗೆಡುವುದಕ್ಕೆ ಪ್ರೋತ್ಸಾಹಿಸುವ ಉದ್ದೇಶ ಹೊಂದಿದೆ ಎಂದರು.

ಆಕಾರ್ ಸಂಸ್ಥೆಯ ಮುಖ್ಯಸ್ಥ ರಾಮು ಮಾತನಾಡಿ, ಪೆನ್ ನೀಡುವುದರ‌ ಜೊತೆಗೆ ವಿದ್ಯಾರ್ಥಿಗಳಿಗೆ ಕವನ ಅಥವಾ ಹಾಡು ಬರೆಯವ ಸ್ಪರ್ಧೆ ಏರ್ಪಡಿಸಿ, ವಿಜೇತ ವಿದ್ಯಾರ್ಥಿಯ ಕವನವನ್ನು ನಾಡಿನ ಪ್ರಸಿದ್ಧ ಗಾಯಕರಿಂದ ಹಾಡಿಸುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಅಡಗಿರುವ ಬರವಣಿಗೆ ಕೌಶಲ್ಯವನ್ನು ಪ್ರೋತ್ಸಾಹಿಸುವ ಉದ್ದೇಶ ಹೊಂದಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ್ ಬಾವಿಕಟ್ಟಿ, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ರಮೇಶ್ ಎ.ಟಿ., ಉದ್ಯಮಿ ಗವಿರೆಡ್ಡಿ ಶಾಲೆಯ ಮುಖ್ಯೋಪಾಧ್ಯಾಯರಾದ ನಾಯ್ಕ್ ಎಂ‌.ಆರ್., ಸಿದ್ದೇಶ್, ಶಿಕ್ಷಕರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- - - -12HRR01. MG-20260812-WA0104.jpg:

ಕನ್ನಡ ಚಿತ್ರರಂಗದ ‌ಚಿತ್ರ ಸಾಹಿತಿ ಡಾ. ವಿ‌.ನಾಗೇಂದ್ರಪ್ರಸಾದ್ ಅವರ 50ನೇ ವರ್ಷಾಚರಣೆ ಪ್ರಯುಕ್ತ ಹರಿಹರ ಸಮೀಪದ ಗುತ್ತೂರಿನ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಪೆನ್ನುಗಳನ್ನು ವಿತರಿಸಲಾಯಿತು.