ಮಧ್ಯಮ ವರ್ಗದವರಿಗೆ ಮೋದಿನೇ ಗ್ಯಾರಂಟಿ

| Published : Apr 16 2024, 01:02 AM IST

ಸಾರಾಂಶ

ಬಾಗಲಕೋಟೆ: ದೇಶದ ಮಧ್ಯಮ ವರ್ಗದ ಕುಟುಂಬಗಳ ಉಜ್ವಲ ಭವಿಷ್ಯ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಮಧ್ಯಮ ವರ್ಗದವರಿಗೆ ಮೋದಿನೆ ಗ್ಯಾರಂಟಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ದೇಶದ ಮಧ್ಯಮ ವರ್ಗದ ಕುಟುಂಬಗಳ ಉಜ್ವಲ ಭವಿಷ್ಯ ನಿರ್ಮಾಣ ಬಿಜೆಪಿಯಿಂದ ಮಾತ್ರ ಸಾಧ್ಯ. ಮಧ್ಯಮ ವರ್ಗದವರಿಗೆ ಮೋದಿನೆ ಗ್ಯಾರಂಟಿ ಎಂದು ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಹೇಳಿದರು.

ಭಾನುವಾರ ಬಿಜೆಪಿ ಬಾಗಲಕೋಟೆಯ ಮತಕ್ಷೇತ್ರದಿಂದ ಗ್ರಾಮೀಣ ಭಾಗದ ಬೇಣ್ಣೂರ ಗ್ರಾಮದಲ್ಲಿ ಲೋಕಸಭಾ ಚುನಾವಣೆಯ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಗದ್ದಿಗೌಡರ ಪರ ಮತಯಾಚನೆ ಮಾಡಿ ಮಾತನಾಡಿದ ಅವರು, ಸಮೃದ್ಧ ಭಾರತ ನಿರ್ಮಾಣದ ಕನಸು, ಮಧ್ಯಮ ವರ್ಗದವರ ಆರ್ಥಿಕ ಸ್ಥಿತಿ ಸುಧಾರಿಸುವ ನಿಟ್ಟಿನಲ್ಲಿ ಮಧ್ಯಮ ವರ್ಗದ ಕುಟುಂಬಗಳ ಸ್ವಂತ ಮನೆ ಕನಸು ನನಸಾಗುವುದು. ರಾಜಕೀಯದಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ, ಸ್ವಸಹಾಯ ಗುಂಪುಗಳ ಸದಸ್ಯರಿಗೆ ಕೌಶಲ್ಯ ಅಭಿವೃದ್ಧಿ ತರಬೇತಿಗಳನ್ನು ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆ, ದೇಶದ ಶಕ್ತಿ ಯುವ ಜನಾಂಗ, ವಸತಿ ಮತ್ತು ಶುದ್ಧ ನೀರಿನ ಕನಸು ಸೇರಿದಂತೆ ಅನೇಕ ಜನಪರ ಅಬಿವೃದ್ಧಿಯನ್ನು ಮೋದಿ ಮಾಡಿದ್ದಾರೆ. ದೇಶಕ್ಕಾಗಿ ಮೋದಿ ಅವಶ್ಯವಾಗಿದ್ದು, ದೇಶದ ಸುರಕ್ಷತೆಗಾಗಿ ಮೋದಿ ಬೆಂಬಲಿಸಿ ಎಂದರು.

ಈ ವೇಳೆ ಮುಖಂಡರಾದ ಸಂಗಣ್ಣ ಕಲಾದಗಿ, ಪ್ರಭುಸ್ವಾಮಿ ಸರಗಣಾಚಾರಿ, ಕಾಶಿಬಾಯಿ ರಾಂಪುರ, ಹಣಮಂತ ಶಿಕ್ಕೇರಿ, ಮಲ್ಲಪ್ಪ ಉಳ್ಳಾಗಡ್ಡಿ, ಮಲ್ಲಪ್ಪ ಅಂಗಡಿ, ಶಂಕ್ರಪ್ಪ ರಾಂಪುರ, ರಾಚಪ್ಪ ಗಡೆಂಚಿ, ಗವಿಸಿದ್ದಪ್ಪ ತೋಟಗೇರ, ಮಲ್ಲಪ್ಪ ಬೂದಿಹಾಳ, ಶಂಕ್ರಪ್ಪಚೆಣ್ಣಿಗೇರಿ, ಈರಪ್ಪ ಕೋಟಿ ಸೇರಿದಂತೆ ಅನೇಕರು ಇದ್ದರು. ಶಿರಗುಂಪಿ, ತಳಗಿಹಾಳ, ಇಲಾಳ, ಮುಡಪಲಜೀವಿ, ಕಡ್ಲಿಮಟ್ಟಿಯಲ್ಲಿ ಚುನಾವಣಾ ಪ್ರಚಾರ ಮಾಡಲಾಯಿತು. -----------

ಕೋಟ್...

ಏ.18 ರಂದು ಲೋಕಸಭೆ ಚುನಾವನೆಯ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ನಾಮಪತ್ರ ಸಲ್ಲಿಸಲಿದ್ದಾರೆ. ಈ ವೇಳೆ ಗ್ರಾಮೀಣ ಭಾಗದ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿ

ಡಾ.ವೀರಣ್ಣ ಚರಂತಿಮಠ. ಮಾಜಿ ಶಾಸಕರು ಬಾಗಲಕೋಟೆ