ಡಾ.ವೀರಣ್ಣ ಚರಂತಿಮಠ ಜನ್ಮದಿನ: ಅಭಿಮಾನಿಗಳಿಂದ ವಿಶೇಷ ಪೂಜೆ

| Published : Jun 03 2024, 12:30 AM IST

ಡಾ.ವೀರಣ್ಣ ಚರಂತಿಮಠ ಜನ್ಮದಿನ: ಅಭಿಮಾನಿಗಳಿಂದ ವಿಶೇಷ ಪೂಜೆ
Share this Article
  • FB
  • TW
  • Linkdin
  • Email

ಸಾರಾಂಶ

ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಜನ್ಮದಿನದ ನಿಮಿತ್ತ ಶನಿವಾರ ಮುಚಖಂಡಿಯ ವೀರಭದ್ರೇಶ್ವರನಿಗೆ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಬಾಗಲಕೋಟೆಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಜನ್ಮದಿನದ ನಿಮಿತ್ತ ಶನಿವಾರ ಮುಚಖಂಡಿಯ ವೀರಭದ್ರೇಶ್ವರನಿಗೆ ಅಭಿಮಾನಿಗಳಿಂದ ವಿಶೇಷ ಪೂಜೆ ಸಲ್ಲಿಸಲಾಯಿತು.

ನಗರ ಬಿಜೆಪಿ ಹಾಗೂ ಚರಂತಿಮಠ ಅಭಿಮಾನಿ ಬಳಗದಿಂದ ಬೆಳಗಿನ ಜಾವ ಐತಿಹಾಸಿಕ ಮುಚಖಂಡಿಯಲ್ಲಿ ವೀರಭದ್ರೇಶ್ವರನಿಗೆ ಪಂಚಾಮೃತ ಅಭಿಷೇಕ, ರುದ್ರಾಭಿಷೇಕ, ಮಹಾಮೃತೃಂಜಯ ಜಪ, ಪುಷ್ಪಾಲಂಕಾರ, ಮಹಾಮಂಗಳಾರತಿ ಮೂಲಕ ವಿಶೇಷ ಪೂಜೆ ಸಲ್ಲಿಸಿದರು. ಡಾ.ವೀರಣ್ಣ ಚರಂತಿಮಠಗೆ ಭಗವಂತ ಆರೋಗ್ಯ, ಆಯುಷ್ಯ, ಸಮೃದ್ಧಿ ನೀಡಿ ಹೆಚ್ಚಿನ ಅಭಿವೃದ್ಧಿ ಕೆಲಸ ಮಾಡುವಂತೆ ಹರಿಸು ಎಂದು ಪ್ರಾರ್ಥನೆ ಸಲ್ಲಿಸಿದರು.

ಆನದಿನ್ನಿ ಕ್ರಾಸ್‌ನಲ್ಲಿರುವ ಸಾಲುಮರದ ತಿಮ್ಮಕ್ಕ ವೃಕ್ಷೋಧ್ಯಾನಕ್ಕೆ ತೆರಳಿ ಅಲ್ಲಿ ಪರಿಸರ ಬಗ್ಗೆ ಜಾಗೃತಿ ಮೂಡಿಸಲಾಯಿತು. ನಂತರ ಮುನಿ ವೃದ್ಧಶ್ರಾಮಕ್ಕೆ ತೆರಳಿ ಅಲ್ಲಿ ವೃದ್ಧರೊಂದಿಗೆ ಡಾ.ವೀರಣ್ಣ ಚರಂತಿಮಠರ ಹುಟ್ಟುಹಬ್ಬಆಚರಿಸಿ ಅಲ್ಲಿದ್ದ ಹಿರಿಯರೊಂದಿಗೆ ಪ್ರಸಾದ ಸ್ವೀಕರಿಸಿದರು.

ಬಿಟಿಡಿಎ ಮಾಜಿ ಅಧ್ಯಕ್ಷ ಜಿ.ಎನ್.ಪಾಟೀಲ, ಡಾ.ಎಂ.ಎಸ್.ದಡ್ಡೆನ್ನವರ, ಲಕ್ಷ್ಮೀನಾರಾಯಣ ಕಾಸಟ, ಬಸವರಾಜ ಯಂಕಂಚಿ, ಸತ್ಯನಾರಾಯಣ ಹೇಮಾದ್ರಿ, ರಾಜು ನಾಯ್ಕರ, ಉಮೇಶ ಹಂಚಿನಾಳ, ಬಸವರಾಜ ಹುನಗುಂದ, ಸಂಗಪ್ಪ ಸಜ್ಜನ, ಸುರೇಶ ಮಜ್ಜಗಿ, ಮಾನೇಶ ಅಂಬಿಗೇರ, ಶಿವು ಹನಮಕ್ಕನವರ, ಚಂದ್ರು ಸರೂರ, ರಾಮಣ್ಣ ಜುಮನಾಳ, ದ್ಯಾವಪ್ಪ ರಾಕುಂಪಿ, ಶ್ರೀಕಾಂತ ಪತ್ತಾರ, ಶಂಕರ ಗಲಗ, ಮಲ್ಲು ಗಬ್ಬೂರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು.