ಕನ್ನಡಪ್ರಭ ವಾರ್ತೆ ಮಧುಗಿರಿ

ದಕ್ಷಿಣದ ಸಸ್ಯಕಾಶಿ ಎಂದೇ ಪ್ರಸಿದ್ಧಿ ಪಡೆದಿರುವ ಸಿದ್ಧರಬೆಟ್ಟದ ತಪೋಭೂಮಿಯಲ್ಲಿ 21ರಂದು ನಡೆಯಲಿರುವ 20ನೇ ವರ್ಷದ ವಾರ್ಷಿಕೋತ್ಸವ ಧಾರ್ಮಿಕ ಸಮಾರಂಭದಲ್ಲಿ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ಡಾ.ವೀರೇಂದ್ರ ಹೆಗ್ಗಡೆ ಅವರಿಗೆ ಶ್ರೀಮಠದಿಂದ ಸಿದ್ಧಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಬಾಳೆಹೊನ್ನೂರು ಖಾಸಾ ಶಾಖಾ ಮಠದ ಪೀಠಾಧ್ಯಕ್ಷ ಶ್ರೀವೀರಭದ್ರ ಶಿವಾಚಾರ್ಯರು ತಿಳಿಸಿದರು.

ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ಗುರುವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಶ್ರೀಜಗದ್ಗುರು ರೇಣುಕಾಚಾರ್ಯರ ಹಾಗೂ ಜಗಜ್ಯೋತಿ ಬಸವೇಶ್ವರ ಜಯಂತ್ಯುತ್ಸವ ನಡೆಯಲಿದೆ. 20 ವರ್ಷದ ಶ್ರೀ ಸಿದ್ಧಪ್ರಶಸ್ತಿಯನ್ನು ಧರ್ಮಸ್ಥಳದ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರಿಗೆ ಘೋಷಣೆ ಮಾಡುತ್ತಿದ್ದೇನೆ ಎಂದು ತಿಳಿಸಿದರು. ಈ ಮಹತ್ವದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್,ಕೇಂದ್ರ ಜಲಶಕ್ತಿ ಸಚಿವ ವಿ.ಸೋಮಣ್ಣ,ಶಾಸಕ ಕೆ.ಎನ್‌.ರಾಜಣ್ಣ ಸೇರಿದಂತೆ ಅನೇಕ ಗಣ್ಯರು ಭಕ್ತಾದಿಗಳು ಭಾಗವಹಿಸಲಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಡಾ.ಎಂ.ಜಿ.ಶ್ರೀನಿವಾಸಮೂರ್ತಿ, ಲಾಲಪೇಟೆ ಮಂಜುನಾಥ್, ಕೆ.ನಾರಾಯಣ್, ಜಗದೀಶ್ ಕುಮಾರ್. ರುದ್ರರಾಧ್ಯ, ಬಿ.ಆರ್.ಸತ್ಯನಾರಾಯಣ್, ಬಿ.ಎಚ್.ಪಂಚಾಕ್ಷರಯ್ಯ, ಕೆ.ವಿ.ಮಂಜುನಾಥಗುಪ್ತ, ಎಂ.ವೆಂಕಟರಾಮು,ನಂಜಮ್ಮ ಮಂಜುನಾಥ್ ದ್ವಾರಕನಾಥ್, ಮೂಡಲಗಿರೀಶ್,ಮಧು ಮಲ್ಘಟ್ಟ, ಸಿದ್ದಪ್ಪ, ನಾಗರಾಜು, ಕಿಶೋರ್, ದೋಲಿಬಾಬು ಇತರರಿದ್ದರು.