ಡಾ. ಆನಂದ ಪಾಂಡುರಂಗಿ ಮನೋರೋಗಕ್ಕೆ ಹೊಸ ಆಯಾಮ ಕೊಟ್ಟವರು. ಎಂದೂ ತಾಳ್ಮೆ ಕಳೆದುಕೊಳ್ಳದ ಅವರು, ಮನೋರೋಗ ವಾಸಿ ಆಗುತ್ತದೆ. ಅದಕ್ಕೆ ಚಿಕಿತ್ಸೆ ಇದೆ ಎಂದು ಸಮಾಜಕ್ಕೆ ತೋರಿಸಿಕೊಟ್ಟವರು.
ಧಾರವಾಡ:
ಡಾ. ಆನಂದ ಪಾಂಡುರಂಗಿ ಮನೋರೋಗಕ್ಕೆ ಹೊಸ ಆಯಾಮ ಕೊಟ್ಟವರು. ಎಂದೂ ತಾಳ್ಮೆ ಕಳೆದುಕೊಳ್ಳದ ಅವರು, ಮನೋರೋಗ ವಾಸಿ ಆಗುತ್ತದೆ. ಅದಕ್ಕೆ ಚಿಕಿತ್ಸೆ ಇದೆ ಎಂದು ಸಮಾಜಕ್ಕೆ ತೋರಿಸಿಕೊಟ್ಟವರು ಎಂದು ವಿವಿಧ ಕ್ಷೇತ್ರಗಳ ಗಣ್ಯರು ಅಭಿಪ್ರಾಯಪಟ್ಟರು.ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿ ಆಯೋಜಿಸಿದ್ದ ಸಂಘದ ವಿಶ್ರಾಂತ ಗೌರವ ಉಪಾಧ್ಯಕ್ಷರಾಗಿದ್ದ ಡಾ. ಆನಂದ ಪಾಂಡುರಂಗಿ ಅವರ ನಿಧನ ಹಿನ್ನೆಲೆಯಲ್ಲಿ ಆಯೋಜಿಸಿದ್ದ ನುಡಿ-ನಮನದಲ್ಲಿ ವಿವಿಧ ಕ್ಷೇತ್ರಗಳ ಗಣ್ಯರು ಮಾತನಾಡಿ, ಮೊಬೈಲ್ ಗೀಳು ಮತ್ತು ಮಾದಕ ವಸ್ತುಗಳಿಂದ ಮಕ್ಕಳನ್ನು, ಯುವಕರನ್ನು ದೂರ ಇರುವಂತೆ ಮಾಡಿದ ಹೆಗ್ಗಳಿಕೆ ಹೊಂದಿದ ಅವರು ವೈದ್ಯಕೀಯ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಿಂತ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರ ಎಂದರು.
ಹುಟ್ಟು ಸಾವಿನ ನಡುವೆ ಸಾರ್ಥಕ ಬದುಕನ್ನೂ ಸಾಗಿಸಿ ಮಾದರಿಯಾದವರು. ಆನಂದ ಪಾಂಡುರಂಗಿಯವರು ಮನಸಿನ ಆಳಕ್ಕೆ ಇಳಿದು ಮನಸಿನೊಂದಿಗೆ ಮಾತನಾಡುತ್ತಿದ್ದರು. ಅನೇಕರಿಗೆ ದಾರಿದೀಪವಾಗಿದ್ದರು, ನಡೆದಾಡುವ ವೈದ್ಯ ದೇವರಾಗಿದ್ದರು. ಅವರು ಮಾಡಿದ ಸಾಧನೆಗಳು ಅವರಿಲ್ಲದಿದ್ದರೂ ಅವು ಮಾತನಾಡುತ್ತಲೇ ಇರುತ್ತವೆ. ಜನಮಾನಸದಲ್ಲಿ ಅವರು ಅಮರವಾಗಿದ್ದಾರೆ. ವೈದ್ಯಕೀಯ ವೃತ್ತಿಗೆ ಘನತೆ ತಂದುಕೊಟ್ಟವರು ಎಂದು ತಿಳಿಸಿದರು.ಶಂಕರ ಕುಂಬಿ, ಸತೀಶ ತುರಮರಿ, ಡಾ. ಸಂಜೀವ ಕುಲಕರ್ಣಿ, ಡಾ. ರಾಜನ್ ದೇಶಪಾಂಡೆ, ಡಾ. ಮಹೇಶ ಹೊರಕೇರಿ, ಸಿ.ಯು. ಬೆಳ್ಳಕ್ಕಿ, ಶ್ರೀನಿವಾಸ ವಾಡಪ್ಪಿ, ಚಂದ್ರಶೇಖರ ಅಮೀನಗಡ, ಶಂಕರಲಿಂಗ ಶಿವಳ್ಳಿ, ಎಂ.ಎಂ. ಚಿಕ್ಕಮಠ, ಡಾ. ಎಸ್.ಎಸ್. ಮುದಕವಿ, ನೇತ್ರಾವತಿ ಕಮ್ಮಾರ, ಡಾ. ಧನವಂತ ಹಾಜವಗೋಳ, ಡಾ. ಎಸ್.ಬಿ. ದಳವಾಯಿ, ಪಾಂಡುರಂಗಿ ಅವರ ಅಕ್ಕ ಜ್ಯೋತಿ, ಡಾ. ಎನ್.ಆರ್. ಬಾಳಿಕಾಯಿ, ಬಿ.ಎಲ್. ಪಾಟೀಲ ವಿ.ವಿನ್. ಕೀರ್ತಿವರ್ತಿ ನುಡಿನಮನ ಸಲ್ಲಿಸಿದರು. ಅವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ, ಒಂದು ನಿಮಿಷದ ಮೌನ ಆಚರಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಶಂಕರ ಹಲಗತ್ತಿ ನಿರೂಪಿಸಿದರು. ಚಂದ್ರಕಾಂತ ಬೆಲ್ಲದ, ಬಸವಪ್ರಭು ಹೊಸಕೇರಿ, ಶಿವಾನಂದ ಭಾವಿಕಟ್ಟಿ, ಡಾ. ಶೈಲಜಾ ಅಮರಶೆಟ್ಟಿ, ವೀರಣ್ಣ ಒಡ್ಡೀನ, ಶಶಿಧರ ತೋಡಕರ, ಪ್ರೊ. ಬಿ.ಎಸ್. ಶಿರೋಳ, ಮಹಾಂತೇಶ ನರೇಗಲ್, ಡಾ. ಶ್ರೀಧರ ಕುಲಕರ್ಣಿ, ಪ್ರಶಾಂತ ಪಾಟೀಲ ಮತ್ತಿತರರು ಇದ್ದರು.