2 ಕೋಟಿ ವೆಚ್ಚದ ಡ್ರೈನೇಜ್ ಕಾಮಗಾರಿ: ಸಚಿವ ದರ್ಶನಾಪುರ ವೀಕ್ಷಣೆ

| Published : Sep 27 2024, 01:26 AM IST

2 ಕೋಟಿ ವೆಚ್ಚದ ಡ್ರೈನೇಜ್ ಕಾಮಗಾರಿ: ಸಚಿವ ದರ್ಶನಾಪುರ ವೀಕ್ಷಣೆ
Share this Article
  • FB
  • TW
  • Linkdin
  • Email

ಸಾರಾಂಶ

ಶಹಾಪುರ ನಗರದ ಮಧ್ಯೆಭಾಗದಲ್ಲಿ ನಡೆಯುತ್ತಿರುವ ಡ್ರೈನೇಜ್ ಕಾಮಗಾರಿಯನ್ನು ಬುಧವಾರ ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ದರ್ಶನಾಪುರ ವೀಕ್ಷಿಸಿದರು.

ಕನ್ನಡಪ್ರಭ ವಾರ್ತೆ ಶಹಾಪುರ

ನಗರದ ಚರಂಡಿಗೆ ದೊಡ್ಡ ಪ್ರಮಾಣದಲ್ಲಿ ಕೆರೆಯ ನೀರು ಬರುತ್ತಿದ್ದು, ನೀರು ಸರಾಗವಾಗಿ ಹರಿದು ಹೋಗಲು ₹2 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿರುವ ಡ್ರೈನೇಜ್ ಕಾಮಗಾರಿ ಹಾಗೂ ಹಳಿಸಗರ ಬಡಾವಣೆಯಲ್ಲಿ ನಡೆದಿರುವ ಚರಂಡಿ ಕಾಮಗಾರಿಯನ್ನು ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಪರಿಶೀಲಿಸಿದರು.

ನಿಯಮಿತ ವೇಳೆಗೆ ಕಾಮಗಾರಿ ಕಾರ್ಯ ಮುಗಿಯಬೇಕು. ಮೇಲ್ವಿಚಾರಕ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿ ಎಲ್ಲಿಯೂ ಲೋಪವಾಗದಂತೆ ಎಚ್ಚರ ವಹಿಸಬೇಕು. ನಗರದ ವಿವಿಧ ಬಡಾವಣೆ ನೀರು, ಕೆನಾಲ ನೀರು, ಮತ್ತು ಕೆರೆಯ ಹೆಚ್ಚಿನ ನೀರು ಒಂದೇ ಡ್ರೈನೇಜ್‌ಗೆ ಬರುತ್ತದೆ. ಈಗಾಗಲೇ ಪ್ರಸ್ತುತ ಲಭ್ಯವಿರುವ ಅನುದಾನದಲ್ಲಿ ಕಾಮಗಾರಿ ನಡೆದಿದ್ದು, ರಸ್ತೆಯ ಮಧ್ಯೆ ಹಳೆಯದಾದ ಕಲ್ಲು, ಕಟ್ಟಣೆಯ ಸಣ್ಣ ಸೇತುವೆ ಇದ್ದು, ಅದನ್ನು ಬರುವ ದಿನಗಳಲ್ಲಿ ಅನುದಾನ ಅವಕಾಶ ಬಳಸಿಕೊಂಡು ಕಾಮಗಾರಿ ನಿರ್ವಹಿಸಲಾಗುವುದು. ಇನ್ನು ₹60 ಲಕ್ಷ ಮೊತ್ತದಲ್ಲಿ ಉಳಿದ ಡ್ರೈನೇಜ್ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಮಲ್ಲಯ್ಯನ ಗುಡ್ಡಕ್ಕೆ ಹೋಗುವ ಸಿಸಿ ರಸ್ತೆ ಕಾಮಗಾರಿ ಪರಿಶೀಲಿಸಿದರು.

ಪೌರಾಯುಕ್ತ ರಮೇಶ ಬಡಿಗೇರ, ಗುರುನಾಥರೆಡ್ಡಿ ಪೊಲೀಸ್ ಪಾಟೀಲ್, ರವೀಂದ್ರ ನರಸನಾಯಕ, ವೆಂಕಟರಡ್ಡಿ ಪಾಟೀಲ್, ಮರೆಣ್ಣ ಚಂಡು, ವಸಂತ ಸುರಪುರಕರ್, ಹಣಮಂತ್ರಾಯ ಟಣಕೇದಾರ, ರವಿಕುಮಾರ ಯಕ್ಷಿಂತಿ, ಶರಣಪ್ಪ ಮುಂಡಾಸ, ಅಶೋಕ ನಾಯಕ, ಹಣಮಂತ ಯಕ್ಷಿಂತಿ, ಜಂಬಣ್ಣ ಮ್ಯಾಕಲದೊಡ್ಡಿ, ರಮೇಶ ಇಟಗಿ, ಎಸ್.ಎಂ. ಜಾನಿ, ಭೀಮಣ್ಣ ಸುರಪುರ, ಶ್ರೀಧರ, ಗೋಪಾಲ ಸುರಪುರ ಸೇರಿದಂತೆ ಇತರರಿದ್ದರು.