ನಾಟಕ ಸಮುದಾಯ ಶಿಕ್ಷಣದ ಪ್ರಭಾವಿ ಮಾಧ್ಯಮ

| Published : Dec 29 2024, 01:16 AM IST

ನಾಟಕ ಸಮುದಾಯ ಶಿಕ್ಷಣದ ಪ್ರಭಾವಿ ಮಾಧ್ಯಮ
Share this Article
  • FB
  • TW
  • Linkdin
  • Email

ಸಾರಾಂಶ

ನಾಟಕವು ಸಮಕಾಲೀನ ಜಾಗತಿಕ ಸಮಾಜದ ರಾಜಕೀಯ ವ್ಯವಸ್ಥೆಯ ಕುರಿತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರನಿಧಿಸಬಲ್ಲ ವಿಡಂಬನಾತ್ಮಕ ನಾಟಕ

ಮುಂಡರಗಿ: ಬಹುಕಾಲದಿಂದ ನಾಟಗಳು ಸಮುದಾಯ ಶಿಕ್ಷಣದ ಮಾಧ್ಯಮವಾಗಿ ಹೆಚ್ಚು ಪರಿಣಾಮ ಬೀರುತ್ತ ಬಂದಿದ್ದು, ಇದನ್ನು ಮನಗಂಡೇ ಬ್ರೆಕ್ಟ್ ನಂತವರು ಸಾಮಾಜಿಕ ಆಗುಹೋಗುಗಳ ಬಗ್ಗೆ ಸತ್ಯಾಸತ್ಯತೆ ಅರಿಯುವ ಬಗ್ಗೆ ನಾಟಕಗಳನ್ನು ಬರೆದು ಜನತೆಯನ್ನು ಚಿಂತನೆಗೆ ಹಚ್ಚುವ ಕಾರ್ಯ ಮಾಡಿದರು ಎಂದು ಹಿರಿಯ ರಂಗ ಕಲಾವಿದ ಬಿ.ಬಾಬು ಹೇಳಿದರು.

ಅವರು ಇತ್ತೀಚೆಗೆ ಮುಂಡರಗಿ ಪಟ್ಟಣದ ರಾಮೇನಹಳ್ಳಿ ಶಾಲಾ ಆವರಣದ ಮಕ್ಕಳ ರಂಗ ಮಂದಿರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಕಲಾ ಶಿಕ್ಷಣ ಸಂಸ್ಕೃತಿ ಪ್ರತಿಷ್ಠಾನ, ಚೈತನ್ಯ ಶಿಕ್ಷಣ ಸಂಸ್ಥೆ ಮುಂಡರಗಿ ಸಹಯೋಗದಲ್ಲಿ ಮೈಸೂರಿನ ನಿರ್ದಿಗಂತ ತಂಡ ಪ್ರಸ್ತುತಪಡಿಸಿದ ತಿಂಡಿಗೆ ಬಂದ ತುಂಡೇರಾಯ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಾಟಕದ ಕುರಿತು ಮಾತನಾಡಿದ ಡಾ.ನಿಂಗು ಸೊಲಗಿ ಜರ್ಮನ್ ನಾಟಕಕಾರ ಬರ್ಟೋಲ್ಟ್ ಬ್ರೆಕ್ಟ್ ರಚಿಸಿದ ದ ರೆಜಿಸ್ಟೇಬಲ್ ರೈಸ್ ಆಫ್ ಆರ್ಥುರೋ ಊಯಿ ನಾಟಕದ ಕನ್ನಡ ರೂಪ ತಿಂಡಿಗೆ ಬಂದ ತುಂಡೆರಾಯ ನಾಟಕ. ಈ ನಾಟಕವು ಸಮಕಾಲೀನ ಜಾಗತಿಕ ಸಮಾಜದ ರಾಜಕೀಯ ವ್ಯವಸ್ಥೆಯ ಕುರಿತು ಯಾವುದೇ ದೇಶ ಕಾಲವನ್ನೂ ಸಂಕೇತವಾಗಿ ಪ್ರನಿಧಿಸಬಲ್ಲ ವಿಡಂಬನಾತ್ಮಕ ನಾಟಕವಾಗಿದೆ.ಉತ್ತರ ಕರ್ನಾಟಕದ ಜನಭಾಷೆಯಲ್ಲಿ ರೂಪಿಕೊಂಡಿದ್ದು ನಾಡಿನಾದ್ಯಂತ ಸಂಚರಿಸಿ ಪ್ರದರ್ಶನ ನೀಡುತ್ತಿರುವುದು ವಿಶೇಷವಾಗಿದೆ ಎಂದರು.

ಸಾಹಿತ್ಯ ಪರಿಷತ್ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಸಾಹಿತಿ ಆರ್.ಎಲ್ ಪೋಲೀಸ್ ಪಾಟೀಲ, ಪುರಸಭೆ ಉಪಾಧ್ಯಕ್ಷ ನಾಗೇಶ ಹುಬ್ಬಳ್ಳಿ, ಸದಸ್ಯರಾದ ಲಿಂಗರಾಜಗೌಡ ಪಾಟೀಲ, ದೇವಕ್ಕ ದಂಡಿನ, ನಾಗರಾಜ ಹೊಂಬಳಗಟ್ಟಿ, ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ವೀಣಾ ಪಾಟೀಲ, ಮಂಜುನಾಥ ಮುಧೋಳ, ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಬಾಗಳಿ, ಬಸವರಾಜ ತಿಗರಿ, ಪರಶುರಾಮ ಜಂಬಗಿ ಶಿಕ್ಷಕ ಸಂಘದ ಕಾರ್ಯದರ್ಶಿ ಎಚ್.ಜಿ.ಪವಾರ ಕಾರ್ಯಕ್ರಮದಲ್ಲಿ‌ ಉಪಸ್ಥಿತರಿದ್ದರು.

ತಂಡದ ಮುಖ್ಯಸ್ಥ ಗಣೇಶ್ ಎಚ್, ಸಂಚಾಲಕ ಕಲ್ಲಪ್ಪ ಪೂಜೆರ ಅವರನ್ನು ಸನ್ಮಾನಿಸಲಾಯಿತು. ಶಿಕ್ಷಕ ಬಿ.ಎಚ್. ಹಲವಾಗಲಿ ಸ್ವಾಗತಿಸಿದರು, ಪಿ.ಎಂ.ಲಾಂಡೆ. ನಿರೂಪಿಸಿ ಎಂ.ಆರ್.ಗುಗ್ಗರಿ ವಂದಿಸಿದರು.