ಕಲಾವಿದರಿಗೆ ನಾಟಕಗಳೇ ಜೀವಕಳೆ; ಸಂಸದ ತುಕಾರಾಂ

| Published : Jan 05 2025, 01:34 AM IST

ಕಲಾವಿದರಿಗೆ ನಾಟಕಗಳೇ ಜೀವಕಳೆ; ಸಂಸದ ತುಕಾರಾಂ
Share this Article
  • FB
  • TW
  • Linkdin
  • Email

ಸಾರಾಂಶ

ಕಲಾವಿದರಿಗೆ ಜೀವಕಳೆ ತರುವ ಜೀವಂತ ನಾಟಕಗಳು ಸಮಾಜಕ್ಕೆ ಮೌಲ್ಯಾಧಾರಿತ ಜೀವನವನ್ನು ಕಲಿಸುತ್ತವೆ

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಕಲೆ ಪ್ರದರ್ಶನದಲ್ಲಿ ಮಹತ್ವದ ಪಾತ್ರ ವಹಿಸಿದ್ದು, ಕಲಾವಿದರಿಗೆ ಜೀವಕಳೆ ತರುವ ಜೀವಂತ ನಾಟಕಗಳು ಸಮಾಜಕ್ಕೆ ಮೌಲ್ಯಾಧಾರಿತ ಜೀವನವನ್ನು ಕಲಿಸುತ್ತವೆ ಎಂದು ಸಂಸದ ಈ.ತುಕಾರಾಂ ಹೇಳಿದರು. ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಜಿಲ್ಲಾ ಕಲಾವಿದರ ಸಂಘದಿAದ ಶನಿವಾರ ಹಮ್ಮಿಕೊಂಡಿದ್ದ ಬಳ್ಳಾರಿ ಜಿಲ್ಲಾ ಕಲಾವೈಭವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಾಟಕಗಳು ಸಮಾಜವನ್ನು ಸರಿದಾರಿಗೆ ತರುವ ಸಾಮರ್ಥ್ಯ ಹೊಂದಿದೆ. ಇಂದಿನ ದಿನಗಳಲ್ಲಿ ಮೊಬೈಲ್ ಬಂದು ಎಲ್ಲರೂ ತಲೆತಗ್ಗಿವಂತೆ ಮಾಡಿದೆ.ಎಂದ ಅವರು, ಸಾಮಾಜಿಕ ಜಾಲತಾಣಗಳಿಂದ ಮನುಷ್ಯನ ಜೀವನ ಹಾಳಗುತ್ತಿದೆ. ಕಲೆ, ಸಂಸ್ಕೃತಿ ಉಳಿಸಿ, ಬೆಳೆಸುವಂತಹ ಕೆಲಸಕ್ಕೆ ಎಲ್ಲರೂ ಕೈಜೋಡಿಸಬೇಕು. ಜಿಲ್ಲಾ ಕಲಾವಿದರ ಸಂಘಕ್ಕೆ ನನ್ನ ವೈಯಕ್ತಿಕವಾಗಿ 5 ಲಕ್ಷ ರೂ., ನೀಡುತ್ತೇನೆ ಎಂದು ಇದೇ ವೇಳೆ ಭರವಸೆ ನೀಡಿದರು. ನಮ್ಮ ಜಿಲ್ಲೆಯಲ್ಲಿ ಅನುದಾನದ ಕೊರತೆಯಿಲ್ಲ. ಜಿಲ್ಲೆಯಲ್ಲಿ ಎಷ್ಟು ಕಲಾವಿದರು ಇದ್ದಾರೇ, ಅವರಿಗೆ ಮೂಲಭೂತ ಸೌಕರ್ಯ, ಮಾಸಾಶನ, ಗೌರವಧನ ಮತ್ತು ಮನೆ ಇದೆಯೋ ಅಥವಾ ಇಲ್ಲವೋ ಎಂಬುವುದರ ಬಗ್ಗೆ ಜಿಲ್ಲಾ ಕಲಾವಿದರೂ ಸಂಘದ ಪದಾಕಾರಿಗಳು ಸರ್ವೇ ಮಾಡಿ, ವರದಿ ಕೊಡಿ. ಸಿಎಸ್‌ಆರ್ ಅನುದಾನದಡಿ ಕಲಾವಿದರಿಗೆ ನ್ಯಾಯ ಒದಗಿಸುವಂತಹ ಕೆಲಸ ಮಾಡಲು ಪ್ರಯತ್ನಿಸುತ್ತೇನೆ. ಅಲ್ಲದೇ, ಇದೇ ಜ.15 ರಂದು ಸಂಸದರ ಕಚೇರಿಯನ್ನು ತೆರೆಯಲಾಗುವುದು. ಪ್ರತಿ ತಿಂಗಳು ಒಂದು ದಿನ ಶಾಲಾ ಕಆಲೇಜುಗಳಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ಹಮ್ಮಿಕೊಳ್ಳುವ ಚಿಂತನೆಯಿದೆ. ಇದು ಕಲಾವಿದರ ಜೀವನಕ್ಕೆ ಸಹಕಾರಿಯಾಗುವುದಲ್ಲದೇ, ಮಕ್ಕಳಿಗೆ ನೈತಿಕತೆ ಬೆಳೆಸಲಿದೆ ಎಂದು ವಿವರಿಸಿದರು. ನಗರದ ಸುಧಾಕ್ರಾಸ್ ಬಳಿಯ ಫ್ಲೆöÊಓವರ್ ಕಾಮಗಾರಿ ಆರಂಭವಾಗಿದೆ. ಎರಡನೇ ಗೇಟ್ ರೈಲ್ವೇ ಸೇತುವೆಗೆ ಅರಣ್ಯ ಇಲಾಖೆಯಿಂದ ಜಮೀನು ಪಡೆಯಲಾಗುತ್ತಿದೆ. ಮೋತಿ ರೈಲ್ವೇ ಬ್ರಿಡ್ಜ್ ಬರುವ ಐದಾರು ತಿಂಗಳಲ್ಲಿ ಅಗಲೀಕರಣ ಮಾಡಲಾಗುವುದು. ನಾನು ಕ್ಷೇತ್ರಕ್ಕೆ ಏನು ಮಾಡುವೆ ಎಂಬುದನ್ನು ಲೆಕ್ಕ ತೋರಿಸುವೆ. ಈ ಕಲಾವಿದರ ಸಂಘಕ್ಕೆ ಐದು ಲಕ್ಷ ರೂ ಇಡುಗಂಟನ್ನು ನಮ್ಮ ಕಂಪನಿಯಿಂದ ನೀಡಲಾಗುವುದು. ಅದರ ಬಡ್ಡಿಯಿಂದ ಬರುವ ಹಣದಿಂದ ಕಲಾ ಪ್ರೋತ್ಸಾಹಕ್ಕೆ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿ, ಈ ಸಂಘ ಒಗ್ಗಟ್ಟಿನಿಂದ ಹೆಚ್ಚು, ಹೆಚ್ಚು ಉತ್ತಮ ಕಾರ್ಯಕ್ರಮಗಳನ್ನು ನೀಡುತ್ತ ಬೆಳೆಯಲಿ ಎಂದು ಆಶಯ ವ್ಯಕ್ತಪಡಿಸಿದರು. ಲೆಕ್ಕಪರಿಶೋಧಕ ಎಸ್.ಪನ್ನರಾಜ್ ಮಾತನಾಡಿ, ಕಲಾವಿದರೂ ವೃತ್ತಿ ಜೀವನ ಬಿಟ್ಟು ಬೇರೆ ಕಡೆಗೆ ಹೋಗುತ್ತಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಬೆಳೆಸುವಂತಹ ಜವಾಬ್ದಾರಿ ಸರ್ಕಾರದ ಮೇಲೆ ಇದೆ. ಈ ಮಣ್ಣು, ನಾಡಿನ ಗುಣವನ್ನು ಜನಪ್ರತಿನಿಧಿಗಳು ಅರಿತಾಗ ಮಾತ್ರ ಜನ ಸಾಮಾನ್ಯರ ಸಮಸ್ಯೆಗಳನ್ನು ತಿಳಿದುಕೊಳ್ಳಲು ಸಾಧ್ಯ. ಪ್ರಸುತ್ತ ದಿನಮಾನಗಳಲ್ಲಿ ನಾಟಕಗಳ ಕಾರ್ಯಕ್ರಮಗಳು ಕಣ್ಮರೆಯಾಗುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಲಾವಿದರ ಸಂಘದಿAದ ಶಬರಿ ಅಯ್ಯಪ್ಪ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಜೆ ಗುಪ್ತ, ಹಿರಿಯ ಪತ್ರಕರ್ತ ಸಿ.ಜಿ.ಹಂಪಣ್ಣ ಚೇಳ್ಳಗುರ್ಕಿ, ಕುಡದರಹಾಳು ಆಯರ್ವೇದ ವೈದ್ಯ ಡಾ.ಶಿವಕುಮಾರ ತಾತನವರು, ಮಯೂರು ಕಲಾ ಸಂಘದ ಕೆ.ಎಂ.ಸಿದ್ಧಲಿಂಗಯ್ಯಸ್ವಾಮಿ, ಬಸವರಾಜ ಜೋಳದರಾಶಿ ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಾಗರಾಜ್ ಮಾತನಾಡಿದರು. ಬುಡಾ ಅಧ್ಯಕ್ಷ ಜೆ.ಎಸ್.ಆಂಜನೇಯಲು, ಗುತ್ತಿಗೆದಾರ ಮಸೀದಿಪುರ ಸಿದ್ದರಾಮನಗೌಡ, ಮಹಮ್ಮದ್ ರಫೀಕ್, ಮೀನಳ್ಳಿ ಚಂದ್ರಶೇಖರ್, ಪಾಂಡುರಂಗಪ್ಪ, ರಮೇಶ್‌ಗೌಡ ಪಾಟೀಲ್, ಸಿದ್ದಮನಹಳ್ಳಿ ತಮ್ಮನಗೌಡ, ಆದೋನಿ ವೀಣಾ ಸೇರಿ ಹಲವರು ಇದ್ದರು. ಸಂಘದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಸ್ವಾಗತಿಸಿದರು. ಮುದ್ದಟನೂರು ತೆಪ್ಪೆಸ್ವಾಮಿ ಪ್ರಾಸ್ತಾವಿಕ ಮಾತನಾಡಿದರು. ಡಿ.ವಿನೋದ್ ಕಾರ್ಯ ನಿರ್ವಹಿಸಿದರು. ಸಿಹಿ ಕಬ್ಬು, ಬಾಳೆ ಗಿಡಗಳ ಅಲಂಕಾರ ಹೊಸ ಸ್ವರೂಪ ತಂದಿತ್ತು.ವಸಂತ ವೈಭವ ಕಲಾ ತಂಡಗಳ ಮೆರವಣಿಗೆಗೆ ಚಾಲನೆ: ಜಿಲ್ಲಾ ಕಲಾ ವೈಭವ-2025 ಕಾರ್ಯಕ್ರಮ ಹಿನ್ನೆಲೆ ನಗರದ ರಾಘವ ಕಲಾಮಂದಿರದಲ್ಲಿ ವಸಂತ ವೈಭವ ಕಲಾ ತಂಡಗಳ ಮೆರವಣಿಗೆ ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿದರು. ಮೆರವಣಿಗೆಯಲ್ಲಿ ಛದ್ಮವೇಷ, ಬಯಲಾಟ ವೇಷ, ತಾಷರಾಂ ಡೋಲ್, ತೊಗಲು ಗೊಂಬೆ, ಹಕ್ಕಿಪಿಕ್ಕಿ ನ್ಯತ್ಯ, ಹಲಗೆವಾದನ, ಜಾನಪದ, ಕಹಳೆ ವಾದನ, ಚೌಡಿಕಿ ವಾದನ, ಕೋಲಾಟ, ನಂದಿಧ್ವಜ ಕುಣಿತ, ಕಂಸಾಳೆ, ವೀರಗಾಸೆ ಕುಣಿತ ಸೇರಿದಂತೆ 30 ಅಧಿಕ ಕಲಾ ತಂಡಗಳು ಜನರ ಗಮನ ಸೆಳೆದವು. ಮೆರವಣಿಗೆ ರಾಯಲ್ ವೃತ್ತ, ಬೆಂಗಳೂರು ರಸ್ತೆ, ತೇರು ಬೀದಿ, ಮೋತಿ ವೃತ್ತ ಮಾರ್ಗವಾಗಿ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದವರೆಗೆ ನಡೆಯಿತು.