ಸಾರಾಂಶ
ನಾಟಕ ಮನರಂಜನೆ ನೀಡುವುದರ ಜತೆಗೆ ಸಮಾಜದ ವ್ಯವಸ್ಥೆಗಳನ್ನು ಜನರ ಮುಂದಿಡುವ ಕಾರ್ಯ ನಡೆಸುತ್ತ ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸುತ್ತದೆ
ಸಿದ್ದಾಪುರ: ನಾಟಕ ಮನರಂಜನೆ ನೀಡುವುದರ ಜತೆಗೆ ಸಮಾಜದ ವ್ಯವಸ್ಥೆಗಳನ್ನು ಜನರ ಮುಂದಿಡುವ ಕಾರ್ಯ ನಡೆಸುತ್ತ ನಮ್ಮ ಸಂಸ್ಕೃತಿಯನ್ನು ಗಟ್ಟಿಗೊಳಿಸುತ್ತದೆ ಎಂದು ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್‌ನ ಮುಖ್ಯಸ್ಥ ಅನಂತಮೂರ್ತಿ ಹೆಗೆಡೆ ಶಿರಸಿ ಹೇಳಿದರು.
ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯ ಸ್ಥಾನಿಕ ನೆರವಿನೊಂದಿಗೆ ಒಡ್ಡೋಲಗ ರಂಗಪರ್ಯಟನ ಹಿತ್ತಲಕೈ ಇವರು ಅನಂತಮೂರ್ತಿ ಹೆಗಡೆ ಚಾರಿಟ್ರೇಬಲ್ ಟ್ರಸ್ಟ್‌ನ ಸಹಕಾರದೊಂದಿಗೆ ಆಯೋಜಿಸಿದ್ದ ಹೆನ್ರಿಕ್ ಇಬ್ಸನ್ ಮೂಲ ರಚನೆಯ ಎಸ್.ಸುರೇಂದ್ರನಾಥ ರೂಪಾಂತರ ಹಾಗೂ ನಿರ್ದೇಶನದ ಜನಶತ್ರು ನಾಟಕ ಪ್ರದರ್ಶನವನ್ನು ಜಾಗಟೆ ಭಾರಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.ಅಧ್ಯಕ್ಷತೆಯನ್ನು ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಅನಂತ ಹೆಗಡೆ ಗೊಂಟನಾಳ ಅಧ್ಯಕ್ಷತೆ ವಹಿಸಿದ್ದರು. ಟಿಎಸ್‌ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ನರೇಂದ್ರ ಹೆಗಡೆ ಹೊಂಡಗಾಸಿ, ಚಂದ್ರಶೇಖರ ಹೆಗಡೆ ಹೊನ್ನೆಹದ್ದ ಉಪಸ್ಥಿತರಿದ್ದರು.
ಒಡ್ಡೋಲಗದ ಅಧ್ಯಕ್ಷ ಗಣಪತಿ ಹೆಗಡೆ ಹಿತ್ಲಕೈ ಪ್ರಾಸ್ತಾವಿಕ ಮಾತನಾಡಿದರು. ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು.ನಂತರ ಹೆನ್ರಿಕ್ ಇಬ್ಸನ್‌ನ ಮೂಲ ನಾಟಕವನ್ನು ಎಸ್.ಸುರೇಂದ್ರನಾಥ್ ರೂಪಾಂತರಿಸಿ, ನಿರ್ದೇಶಿಸಿದ ಹಾಗೂ ಸೌಮ್ಯ ಭಾಗ್ವತ್ ಸಹನಿರ್ದೇಶನ ನೀಡಿರುವ ಜನಶತ್ರು ನಾಟಕ ಪ್ರದರ್ಶನಗೊಂಡಿತು.
ರಂಗದಲ್ಲಿ ಗಣಪತಿ ಹಿತ್ಲಕೈ, ನಾಗರಾಜ್ ಬರೂರು, ನವೀನ ಕುಣಜಿ, ಗಣೇಶ ಹೊನ್ನಾವರ, ಪ್ರಜ್ಞಾ ಹೆಗಡೆ ಹಿತ್ಲಕೈ ಪಾತ್ರನಿರ್ವಹಿಸಿದರು. ಶ್ರೀಧರ ಭಾಗವತ್ಬೆಳಕು ಮತ್ತು ತಾಂತ್ರಿಕ ವ್ಯವಸ್ಥೆ ನೀಡಿದ್ದರು.ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾದಲ್ಲಿ ಜನಶತ್ರು ನಾಟಕ ಪ್ರದರ್ಶನ ಜರುಗಿತು.