ಗುಣಮಟ್ಟದ ನಿರ್ಮಾಣ, ಪಾರದರ್ಶಕ ಕಾರ್ಯವಿಧಾನ ಮತ್ತು ಸಮಯಕ್ಕೆ ಸರಿಯಾದ ಯೋಜನೆಗಳ ಪೂರ್ಣಗೊಳಿಸುವಿಕೆಗೆ ಹೆಸರುವಾಸಿಯಾದ ನಕ್ಷಾ ಹೋಮ್ಸ್, ಹಾಸನದ ಜನತೆಗೆ ಅತ್ಯುತ್ತಮ ಮತ್ತು ಕೈಗೆಟಕುವ ಗೃಹ ನಿರ್ಮಾಣ ಪರಿಹಾರಗಳನ್ನು ನೀಡಲು ಮುಂದಾಗಿದೆ. ಇಲ್ಲಿ ಮನೆ ಕಟ್ಟಲು ಕೇವಲ 1899 ರು. ಪ್ರತಿ ಚದರ ಅಡಿ ಅಚ್ಚರಿ ಮೂಡಿಸುವ ನಿರ್ಮಾಣ ಪ್ಯಾಕೇಜ್‌ನ್ನು ಪರಿಚಯಿಸಲಾಗಿದೆ. ಪ್ರದರ್ಶನಕ್ಕೆ ಭೇಟಿ ನೀಡುವವರು ತಜ್ಞರೊಂದಿಗೆ ನೇರವಾಗಿ ಸಂವಾದ ನಡೆಸಿ, ವಿವಿಧ ಮನೆ ವಿನ್ಯಾಸಗಳನ್ನು ಪರಿಶೀಲಿಸಿ, ನಿರ್ಮಾಣ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಪಡೆದು, ತಮ್ಮ ಕನಸಿನ ಮನೆಯನ್ನು ಆತ್ಮವಿಶ್ವಾಸದಿಂದ ಕಟ್ಟಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಹಾಸನ

ನೆರೆಯ ಜಿಲ್ಲೆ ಮೈಸೂರಿನ ನಂ.1 ಖಾಸಗಿ ನಿರ್ಮಾಣ ಸಂಸ್ಥೆಯಾದ ನಕ್ಷಾ ಹೋಮ್ಸ್ ಹಾಸನ ನಗರದಲ್ಲಿ ತನ್ನ ವಿಶೇಷ ಸ್ಟಾಲ್ ಅನ್ನು ಡ್ರೀಮ್ ಹೋಮ್ ಎಕ್ಸಿಬಿಷನ್ 2025ರಲ್ಲಿ ಸ್ಥಾಪಿಸಿದೆ. ಈ ಪ್ರದರ್ಶನವು ಎಂ.ಜಿ.ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿದೆ.

ಗುಣಮಟ್ಟದ ನಿರ್ಮಾಣ, ಪಾರದರ್ಶಕ ಕಾರ್ಯವಿಧಾನ ಮತ್ತು ಸಮಯಕ್ಕೆ ಸರಿಯಾದ ಯೋಜನೆಗಳ ಪೂರ್ಣಗೊಳಿಸುವಿಕೆಗೆ ಹೆಸರುವಾಸಿಯಾದ ನಕ್ಷಾ ಹೋಮ್ಸ್, ಹಾಸನದ ಜನತೆಗೆ ಅತ್ಯುತ್ತಮ ಮತ್ತು ಕೈಗೆಟಕುವ ಗೃಹ ನಿರ್ಮಾಣ ಪರಿಹಾರಗಳನ್ನು ನೀಡಲು ಮುಂದಾಗಿದೆ. ಇಲ್ಲಿ ಮನೆ ಕಟ್ಟಲು ಕೇವಲ 1899 ರು. ಪ್ರತಿ ಚದರ ಅಡಿ ಅಚ್ಚರಿ ಮೂಡಿಸುವ ನಿರ್ಮಾಣ ಪ್ಯಾಕೇಜ್‌ನ್ನು ಪರಿಚಯಿಸಲಾಗಿದೆ. ಪ್ರದರ್ಶನಕ್ಕೆ ಭೇಟಿ ನೀಡುವವರು ತಜ್ಞರೊಂದಿಗೆ ನೇರವಾಗಿ ಸಂವಾದ ನಡೆಸಿ, ವಿವಿಧ ಮನೆ ವಿನ್ಯಾಸಗಳನ್ನು ಪರಿಶೀಲಿಸಿ, ನಿರ್ಮಾಣ ಪ್ರಕ್ರಿಯೆಯ ಸಂಪೂರ್ಣ ಮಾಹಿತಿಯನ್ನು ಪಡೆದು, ತಮ್ಮ ಕನಸಿನ ಮನೆಯನ್ನು ಆತ್ಮವಿಶ್ವಾಸದಿಂದ ಕಟ್ಟಿಕೊಳ್ಳಬಹುದು.

ಡ್ರೀಮ್ ಹೋಮ್ ಎಕ್ಸಿಬಿಷನ್ 2025 ಹೊಸ ಮನೆ ಕಟ್ಟಲು ಯೋಜಿಸುವವರಿಗೆ ಒಂದೇ ಸ್ಥಳದಲ್ಲಿ ಎಲ್ಲ ಮಾಹಿತಿಯನ್ನು ಒದಗಿಸುವ ವೇದಿಕೆಯಾಗಿದ್ದು, ನಕ್ಷಾ ಹೋಮ್ಸ್‌ನ ಸ್ಟಾಲ್ ಮನೆ ಕಟ್ಟಲು ಉದ್ದೇಶಿಸಿರುವ ಪ್ರತಿಯೊಬ್ಬರೂ ಭೇಟಿ ನೀಡಿ ಅಗತ್ಯ ಸಲಹೆ ಪಡೆದುಕೊಳ್ಳಬಹುದಾಗಿದೆ.