ಮಾ. 27 ಪಿಂಕ್ ದಿನ, ಗುಲಾಬಿ ಬಣ್ಣದ ಉಡುಪು ಧರಿಸುವುದು. ಮಾ. 28 ರಂದು ಪಾರಂಪರಿಕ ದಿನ ಪಾರಂಪರಿಕ. ಸಾಂಪ್ರದಾಯಿಕ ಉಡುಪು ಧರಿಸುವುದು.
ಕನ್ನಡಪ್ರಭ ವಾರ್ತೆ ಮೈಸೂರು
ಮೈಸೂರಿನ ಸಾಂಸ್ಕೃತಿಕ ಮಹತ್ವ ಸಾರುವ ಅಂಗವಾಗಿ ಮಹಾರಾಣಿ ಕಾಲೇಜಿನಲ್ಲಿ ಸಾಂಸ್ಕೃತಿಕ ಸಮಿತಿಯಿಂದ ಒಂದು ವಾರದ ಕಾಲ ಮನೋರಂಜನೆ ವಾರ ಆಚರಿಸುತ್ತಿದೆ.ಇದರ ಅಂಗವಾಗಿ ಒಂದು ವಾರ ಕಾಲ ವಿದ್ಯಾರ್ಥಿಗಳು ವಿವಿಧ ಪ್ರೀತಿಯ ಬಟ್ಟೆ ಧರಿಸಿ ಸಂತೋಷ ಪಡಲಿದ್ದಾರೆ.
ಸೋಮವಾರ – ಫಿಲ್ಮಿ/ರೆಟ್ರೋ ದಿನ, ಹಳೆಯ ಸಿನೆಮಾ ಅಥವಾ ಹಳೆಯ ಕಾಲದ ಶೈಲಿಯಲ್ಲಿ ಉಡುಪು ಧರಿಸುವುದು.ಮಂಗಳವಾರ – ಕಪ್ಪು ಮತ್ತು ಬಿಳಿ ದಿನ, ಕಪ್ಪು ಮತ್ತು ಬಿಳಿ ಬಣ್ಣದ ಉಡುಪು ಧರಿಸುವುದು, ಮಾ. 25 ರಂದು ಟ್ವಿನ್ನಿಂಗ್ ದಿನ- ಒಬ್ಬ ಮಹಿಳಾ ಸ್ನೇಹಿತೆಯ ಜೊತೆ ಒಂದೇ ರೀತಿಯ ಉಡುಪು ಧರಿಸುವುದು. ಮಾ. 26ರಂದು ಮಿಸ್ಮ್ಯಾಚ್ ದಿನ, ಹೊಂದಿಕೆಯಾಗದ ಬಣ್ಣಗಳು ಅಥವಾ ಬೇರೆ ಬೇರೆ ಶೈಲಿಯ ಉಡುಪು ಧರಿಸುವುದು. ಮಾ. 27 ಪಿಂಕ್ ದಿನ, ಗುಲಾಬಿ ಬಣ್ಣದ ಉಡುಪು ಧರಿಸುವುದು. ಮಾ. 28 ರಂದು ಪಾರಂಪರಿಕ ದಿನ ಪಾರಂಪರಿಕ. ಸಾಂಪ್ರದಾಯಿಕ ಉಡುಪು ಧರಿಸುವುದು.
ಹೀಗೆ ಪ್ರತಿ ದಿನ ವಿದ್ಯಾರ್ಥಿನಿಯರು ವಿವಿಧ ಬಣ್ಣಗಳ ಧಿರಿಸನ್ನು ತೊಟ್ಟು ಆಚರಿಸಲಿದ್ದಾರೆ.----------------