ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುನೈಪುಣ್ಯ ಪೂರ್ವ ಪ್ರಾಥಮಿಕ ಹಂತ ಪೂರೈಸಿದ ಯುಕೆಜಿ ವಿಭಾಗದ ಚಿಣ್ಣರನ್ನು ಶಿಕ್ಷಣ ಉತ್ತೇಜನದ ಸಾಂಪ್ರದಾಯಿಕ ವಸ್ತ್ರ ತೊಡಿಸಿ, ಪ್ರಶಸ್ತಿ ಪತ್ರದೊಂದಿಗೆ ಪುರಸ್ಕರಿಸಲಾಯಿತು.ಈ ವೇಳೆ ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಪೂರ್ವ ಪ್ರಾಥಮಿಕ ವಿಭಾಗದ ಮುಖ್ಯಸ್ಥೆ ಭಾವನಾ ಶ್ರೀಕಾಂತ್‌ಮತ್ತು ಪೋಷಕರು ಇದ್ದರು.ಪೋಷಕರು ಮಕ್ಕಳ ಅಭಿರುಚಿ ಹಾಗೂ ಆಯ್ಕೆಯನ್ನು ಉತ್ತೇಜಿಸುವ ಮೂಲಕ ಶಿಕ್ಷಣ ಪ್ರೋತ್ಸಾಹ ನೀಡುವುದು ಪ್ರಸಕ್ತ ಜಾಗತಿಕ ಪೈಪೋಟಿಯ ಸಾಮಾಜಿಕ ವ್ಯವಸ್ಥೆಯಲ್ಲಿ ಅತ್ಯಂತ ಅನಿವಾರ್ಯ ಎಂದು ಸೆಸ್ಕ್ ಇಇ ಅನಿತಾ ಕರೆ ನೀಡಿದರು.ಭಾರತೀಯ ಸಂಸ್ಕೃತಿ ಪರಂಪರೆ ಜಾಗತಿಕ ಮನ್ನಣೆ ಪಡೆಯುತ್ತಿರುವ ಈ ಹೊತ್ತಿನಲ್ಲಿ ನಾವು ಗುರುಕುಲ ಪರಂಪರೆ ಅನುಸರಿಸುವಂತಹ ಶಿಕ್ಷಣವನ್ನು ಅಳವಡಿಸಿಕೊಂಡರೆ, ಮಗುವಿನ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ಆಧುನಿಕ ಮತ್ತು ಸಾಂಪ್ರದಾಯಿಕ ಶಿಕ್ಷಣ ಇವೆರಡರ ಸಂಮಿಶ್ರದಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಉನ್ನತೀಕರಿಸುವ ಸಂಶೋಧನೆ ನಿರಂತರವಾಗಿ ನಡೆಯುತ್ತಿದ್ದು, ಈ ನಿಟ್ಟಿನಲ್ಲಿ ನೈಪುಣ್ಯ ಶಿಕ್ಷಣ ಸಂಸ್ಥೆಯು ತನ್ನ ಶಿಕ್ಷಣ ವ್ಯವಸ್ಥೆಯನ್ನು ಮುನ್ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ಪ್ರಶಂಸಿಸಿದರು.