ಕುಡಿವ ನೀರಿಗೆ ಕನ್ನ: ಪುರಸಭೆಯಿಂದ ದೂರು ದಾಖಲು

| Published : Mar 27 2024, 01:03 AM IST

ಸಾರಾಂಶ

ಕಡೂರು- ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಭದ್ರಾ ಕುಡಿಯುವ ನೀರು ಯೋಜನೆ ಪೈಪ್ ಲೈನ್‌ ಗಳಿಗೆ ವಾಲ್ವ್ ಹಾಕಿ ನೀರು ಸೋರಿಕೆಯಾಗುವಂತೆ ಮಾಡಿ, ಅದನ್ನು ಅಡಕೆ ತೋಟಗಳಿಗೆ ಅನಧಿಕೃತ ವಾಗಿ ಹಾಯಿಸಿಕೊಳ್ಳುತ್ತಿರುವವರ ವಿರುದ್ಧ ಪುರಸಭೆಯಿಂದ ಮಂಗಳವಾರ ದೂರು ನೀಡಲಾಗಿದೆ.

ವಾಲ್ವ್ ಗೆ ಹಾನಿ ಮಾಡಿ ಅಕ್ರಮವಾಗಿ ಅಡಿಕೆ ತೋಟಗಳಿಗೆ ನೀರು ಹಾಯಿಸುವಿಕೆಕನ್ನಡಪ್ರಭ ವಾರ್ತೆ, ಬೀರೂರು: ಕಡೂರು- ಬೀರೂರು ಪಟ್ಟಣಗಳಿಗೆ ಕುಡಿಯುವ ನೀರು ಪೂರೈಕೆ ಮಾಡುತ್ತಿರುವ ಭದ್ರಾ ಕುಡಿಯುವ ನೀರು ಯೋಜನೆ ಪೈಪ್ ಲೈನ್‌ ಗಳಿಗೆ ವಾಲ್ವ್ ಹಾಕಿ ನೀರು ಸೋರಿಕೆಯಾಗುವಂತೆ ಮಾಡಿ, ಅದನ್ನು ಅಡಕೆ ತೋಟಗಳಿಗೆ ಅನಧಿಕೃತ ವಾಗಿ ಹಾಯಿಸಿಕೊಳ್ಳುತ್ತಿರುವವರ ವಿರುದ್ಧ ಪುರಸಭೆಯಿಂದ ಮಂಗಳವಾರ ದೂರು ನೀಡಲಾಗಿದೆ.

ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯದಿಂದ ಕುಡಿಯುವ ನೀರು, ಪೈಪ್‌ ಲೈನ್ ಮೂಲಕ ತರೀಕೆರೆ ಜಾಕ್ವೆಲ್ ತಲುಪಿ ಅಲ್ಲಿಂದ ಹೊಸೂರು, ಅಜ್ಜಂಪುರ ಕ್ರಾಸ್, ಕೋರನಹಳ್ಳಿ, ಚಟ್ನಹಳ್ಳಿ, ಕೊರಟೀಕೆರೆ ಗ್ರಾಮಗಳ ಮೂಲಕ ಹಾದು ಬೀರೂರು ಪಂಪ್‌ ಹೌಸ್‌ಗೆ ಬರುತ್ತದೆ. ಈ ಮಾರ್ಗದಲ್ಲಿ ಕೆಲವೆಡೆ ವಾಲ್ವ್‌ ಗಳನ್ನು ಅಳವಡಿಸಲಾಗಿದೆ. ವಾಲ್ವ್ ನ ಸ್ಥಳದಲ್ಲಿ ಸ್ವಲ್ಪ ಮಟ್ಟಿನ ಸೋರಿಕೆ ಇದೆ. ಕೆಲವು ತೋಟಗಳ ಮಾಲೀಕರು ಈ ವಾಲ್ವ್‌ಗಳಿಗೆ ಇನ್ನಷ್ಟು ಹಾನಿ ಮಾಡಿ, ನೀರು ಹೆಚ್ಚಿನ ಪ್ರಮಾಣದ ಸೋರಿಕೆಯಾಗುವುದದನ್ನು ಸಂಗ್ರಹಿಸಿ, ಅಕ್ರಮವಾಗಿ ಪಂಪ್‌ ಸೆಟ್‌ಗಳನ್ನು ಅಳವಡಿಸಿ ತಮ್ಮ ತೋಟಗಳಿಗೆ ಹಾಯಿಸಿಕೊಳ್ಳುತ್ತಿದ್ದಾರೆ. ಕೆಲವೆಡೆ ದೂರದ ತೋಟಗಳಿಗೆ ಟ್ಯಾಂಕರ್‌ ನಲ್ಲಿ ನೀರು ತುಂಬಿಸಿಕೊಂಡು ಹೋಗುವ ವ್ಯವಸ್ಥೆ ಮಾಡಿದ್ದಾರೆ. ಇದರಿಂದ ಕಡೂರು-ಬೀರೂರು ಪಟ್ಟಣಗಳಿಗೆ ಸಮರ್ಪಕ ನೀರು ಪೂರೈಕೆಯಾಗದೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

2-3 ದಿನಗಳಿಂದ ನೀರು ಪೂರೈಕೆಯಾಗದ ಕಾರಣ ಅನುಮಾನಗೊಂಡ ಪುರಸಭೆ ನೀರುಗಂಟಿಗಳು ಹಾಗೂ ನೌಕರರು ಪೈಪ್‌ ಲೈನ್‌ ನ ಪರಿಶೀಲನೆಗೆ ತೆರಳಿದಾಗ ತರೀಕೆರೆ ಸಮೀಪದ ಬಾವಿಕೆರೆ, ಅಜ್ಜಂಪುರ ಕ್ರಾಸ್, ಕುಡ್ಲೂರು ಸಮೀಪದ ಕೋರನಹಳ್ಳಿ, ಕೊರಟೀಕೆರೆ ಗ್ರಾಮಗಳ ವ್ಯಾಪ್ತಿಯಲ್ಲಿ ಅಕ್ರಮ ನೀರು ಸಂಗ್ರಹಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ಇದನ್ನು ಪ್ರಶ್ನಿಸಿದ ಪುರಸಭೆ ಸಿಬ್ಬಂದಿ ಮೇಲೆ ಕೆಲವರು ಹಲ್ಲೆಗೆ ಮುಂದಾಗಿದ್ದಾರೆ. ಕಡೂರು ಪುರಸಭೆ ಮುಖ್ಯಾಧಿಕಾರಿ ಭಾಗ್ಯಮ್ಮ ಮತ್ತು ಬೀರೂರು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಪ್ರಕಾಶ್ ಪುರಸಭೆ ಆಡಳಿತಾಧಿಕಾರಿ ತರೀಕೆರೆ ಉಪವಿಭಾಗಾಧಿಕಾರಿ ಯನ್ನು ಸಂಪರ್ಕಿಸಿ ಪ್ರಕರಣದ ವಿವರ ನೀಡಿದ್ದು, ಕಡೂರು ಪುರಸಭೆ ಮುಖ್ಯಾಧಿಕಾರಿ, ಉಪ ವಿಭಾಗಾಧಿಕಾರಿ ನಿರ್ದೇಶನದಂತೆ ತರೀಕೆರೆ ಡಿವೈಎಸ್ಪಿ ಕಚೇರಿಗೆ ದೂರು ಸಲ್ಲಿಸಿದ್ದಾರೆ.

ಬಾಕ್ಸ್--

‘ಕಾನೂನು ಕ್ರಮಕ್ಕೆ ಆಗ್ರಹ’

‘ಅವಳಿ ಪಟ್ಟಣಗಳಿಗೆ ನೀರು ಪೂರೈಸುವ ಯೋಜನೆಗೆ ಹಾನಿ ಎಸಗಿದವರ ವಿರುದ್ಧ ಎರಡೂ ಪುರಸಭೆ ಮುಖ್ಯಾಧಿಕಾರಿಗಳು ಪೊಲೀಸ್ ಇಲಾಖೆಗೆ ದೂರು ಸಲ್ಲಿಸಲಿದ್ದು, ಈ ರೀತಿ ಅಕ್ರಮ ನೀರು ಪೂರೈಕೆ ಮಾಡಿಕೊಳ್ಳುತ್ತಿರುವ ಸ್ಥಳಗಳನ್ನು ಗುರುತಿಸಿ, ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಕೋರಲಾಗಿದೆ’ ಎಂದು ಬೀರೂರು ಪುರಸಭೆ ಪ್ರಭಾರ ಮುಖ್ಯಾಧಿ ಕಾರಿ ಪ್ರಕಾಶ್ ಹೇಳಿದರು.

‘ಈಗಾಗಲೇ 4-5 ಸ್ಥಳಗಳಲ್ಲಿ ಅಕ್ರಮ ನೀರು ಪೂರೈಕೆ ಮಾಡಿರುವುದನ್ನು ಗುರುತಿಸಿದ್ದೇವೆ. ಈ ಅಕ್ರಮ ತರೀಕೆರೆ ಪೊಲೀಸರ ವ್ಯಾಪ್ತಿಗೆ ಬರುವುದರಿಂದ ತರೀಕೆರೆ ಡಿವೈಎಸ್ಪಿ ಗಮನಕ್ಕೂ ತರಲಾಗುವುದು ಎಂದು ಪುರಸಭೆ ಎಂಜಿನಿಯರ್ ವೀಣಾ ಹೇಳಿದರು.

26 ಬೀರೂರು 1

ಅಮೃತಾಪುರ ಗೇಟ್ ಬಳಿ ವಾಲ್ವ್‌ಗೆ ಹಾನಿ ಮಾಡಿ ನೀರು ಸಂಗ್ರಹವಾಗುವಂತೆ ಮಾಡಿರುವುದು

26 ಬೀರೂರು 2

ನೀರನ್ನು ಅಕ್ರಮವಾಗಿ ತೋಟಗಳಿಗೆ ಹಾಯಿಸಲು ಕೋರನಹಳ್ಳಿ ಗೇಟ್ ಬಳಿ ಪಂಪ್‌ಸೆಟ್ ಅಳವಡಿಸಿರುವುದು