ಕುಡಿವ ನೀರು ಮಾದರಿ ಸಂಗ್ರಹಿಸಿ ತಪಾಸಣೆ

| Published : May 31 2024, 02:27 AM IST

ಸಾರಾಂಶ

ಹುಣಸಗಿ ಪಟ್ಟಣದ 2ನೇ ವಾರ್ಡಿನ ಆಶಾ ಕಾರ್ಯಕರ್ತೆ ನೀರಿನ ಮಾದರಿ ಸಂಗ್ರಹಿಸಿ ತಪಾಸಣೆಗಾಗಿ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನೀಡುತ್ತಿರುವುದು.

ಕನ್ನಡಪ್ರಭ ವಾರ್ತೆ ಹುಣಸಗಿ

ತಾಲೂಕಿನಾದ್ಯಂತ ಹಾಗೂ ಹುಣಸಗಿ ಪಟ್ಟಣದ ಎಲ್ಲಾ ವಾರ್ಡ್ ಗಳಲ್ಲಿರುವ ಕುಡಿಯುವ ನೀರಿನ ಬಾವಿ ಹಾಗೂ ಬೋರವೆಲ್ ನೀರು ಮಾದರಿ ಸಂಗ್ರಹಿಸಿ ತಪಾಸಣೆ ಮಾಡಿಸಲಾಗುತ್ತಿದೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಎಸ್.ಬಿ. ಪಾಟೀಲ್ ತಿಳಿಸಿದ್ದಾರೆ.

ಯಾದಗಿರಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆದೇಶದಂತೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಮಾದರಿ ತಪಾಸಣೆಗೊಳಪಡಿಸಿ ಕುಡಿಲು ಯೋಗ್ಯವಲ್ಲದ ನೀರು ಪತ್ತೆಹಚ್ಚಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರದ ಹಾಗೆ ಕ್ರಮಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗುತ್ತದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ವಿವರಿಸಿದ್ದಾರೆ.

ಮುಂಗರು ಪೂರ್ವ ಮಳೆ ಬೀಳುತ್ತಿದ್ದು, ಕಲುಷಿತ ನೀರು ಪೂರೈಕೆಯಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಆಯಾ ವ್ಯಾಪ್ತಿಯ ನೀರಿನ ಮಾದರಿ ಪರೀಕ್ಷಿಸಿ, ಶುದ್ಧತೆ ಬಗ್ಗೆ ಖಾತ್ರಿ ಪಡೆಸಿಕೊಳ್ಳಬೇಕು. ಕಾಲ-ಕಾಲಕ್ಕೆ ಜಲಮೂಲ ಪರೀಕ್ಷಿಸಬೇಕು. ನೀರು ಸರಬರಾಜು ಮಾಡುವ ಪೈಪ್‌ ದುರಸ್ತಿಗೆ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಉದಾಸಿನ ಸಲ್ಲ ಎಂದು ಅವರು ತಿಳಿಸಿದ್ದಾರೆ.

ಜನರು ಕೂಡ ಕಾಳಜಿ ವಹಿಸಬೇಕು. ತಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛ ಇಟ್ಟುಕೊಳ್ಳಬೇಕು ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.