ಕುಡಿಯುವ ನೀರು ಯೋಜನೆ ಶೀಘ್ರ ಲೋಕಾರ್ಪಣೆ

| Published : Jan 04 2025, 12:30 AM IST

ಸಾರಾಂಶ

ತಾಲೂಕಿನ ಜನತೆಗೆ ಮನೆಮನೆಗೆ ಶುದ್ಧ ನೀರು ಕಲ್ಪಿಸುವ 2352 ಕೋಟಿ ರು.ವೆಚ್ಚದ ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೆ ಸಿದ್ಧವಾಗಿದ್ದು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಶೀಘ್ರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನ ಜನತೆಗೆ ಮನೆಮನೆಗೆ ಶುದ್ಧ ನೀರು ಕಲ್ಪಿಸುವ 2352 ಕೋಟಿ ರು.ವೆಚ್ಚದ ತುಂಗಭದ್ರಾ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೆ ಸಿದ್ಧವಾಗಿದ್ದು ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಶೀಘ್ರ ಸಿಎಂ ಸಿದ್ದರಾಮಯ್ಯ ಲೋಕಾರ್ಪಣೆಗೊಳಿಸಲಿದ್ದಾರೆ ಎಂದು ಶಾಸಕ ಎಚ್.ವಿ. ವೆಂಕಟೇಶ್ ಹೇಳಿದರು.ಅವರು ಶುಕ್ರವಾರ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ 2024-25ರ ಶೈಕ್ಷಣಿಕ ಚಟುವಟಿಕೆಗಳ ಸಮಾರೋಪ, ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.

ತಾಲೂಕಿನ ಜನತೆಗೆ ತುಂಗಭದ್ರಾ ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ಕ್ರಮವಹಿಸಿದ್ದು ಫೆಬ್ರುವರಿಯಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಇತರೇ ಸಚಿವರಿಂದ ಉದ್ಘಾಟನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈಗಾಗಲೇ ಸರ್ಕಾರದ ವಿವಿಧ ಯೋಜನೆ ಅಡಿ ಪ್ರಗತಿಗೆ ವಿಶೇಷ ಒತ್ತು ನೀಡಲಾಗಿದೆ. ತಾಲೂಕಿನಲ್ಲಿ ರೈಲ್ವೆ, ಮುಖ್ಯ ರಸ್ತೆ, ಸಮುದಾಯ ಭವನ, ಶಾಲಾ ಕಾಲೇಜುಗಳ ಕಟ್ಟಡ ನಿರ್ಮಾಣ ಸೇರಿದಂತೆ ಇತರೆ ಅನೇಕ ಅಭಿವೃದ್ಧಿ ಕಾಮಗಾರಿಗಳು ಪ್ರಗತಿಯಲ್ಲಿವೆ. ಬಡವರ ವಸತಿ ಸೌಲಭ್ಯಕ್ಕೆ ನಿವೇಶನ ಒದಗಿಸಲು ಈಗಾಗಲೇ ಜಮೀನನ್ನು ಗುರುತಿಸಲಾಗಿದೆ.ಶೀಘ್ರದಲ್ಲಿಯೇ ನಿವೇಶನದ ದಾಖಲೆ ಪತ್ರಗಳ ವಿತರಣೆ ಕಾರ್ಯ ಕೈಗೊಳ್ಳುವುದಾಗಿ ಹೇಳಿದರು.

.ಸ.ಪ.ಪೂರ್ವ ಕಾಲೇಜು ಪ್ರಾಂಶುಪಾಲ ರಾಮಕೃಷ್ಣಪ್ಪ, ಪುರಸಭಾ ಅಧ್ಯಕ್ಷ ಪಿ.ಎಚ್.ರಾಜೇಶ್, ಸದಸ್ಯರಾದ ತೆಂಗಿನಕಾಯಿ ರವಿ, ಗುತ್ತಿಗೆದಾರ ಆರ್‌.ಎ.ಹನುಮಂತರಾಯಪ್ಪ, ಸರ್ಕಾರಿ ಪದವಿಪೂರ್ವ ಕಾಲೇಜು ಸಮಿತಿಯ ಉಪಾಧ್ಯಕ್ಷ ಬೋರಣ್ಣ , ಸದಸ್ಯರಾದ ಕೆ.ಎಂ.ಪ್ರಭಾಕರ್, ರಿಜ್ವಾನ್‌ ಉಲ್ಲಾ ಹನುಮೇಶ್, ಶಬಾನಾ, ಹನುಮಂತರಾಯಪ್ಪ, ಓಬಳಾಪುರದ ದೊಡ್ಡಯ್ಯ,ಪಳವಳ್ಳಿಯ ಬೊಮ್ಮಣ್ಣ, ಕರಿಯಣ್ಣ, ಡಾ.ರಘುವೀರ್, ಇತರರಿದ್ದರು.