ಉಡುಪಿ: ಇಲ್ಲಿನ ರಥಬೀದಿಯಲ್ಲಿರುವ ಶ್ರೀ ಭಂಡಾರಕೇರಿ ಶಾಖಾ ಮಠಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ಕರ್ಣಾಟಕ ಬ್ಯಾಂಕ್ ವತಿಯಿಂದ ನೀಡಲಾದ ಶುದ್ಧ ನೀರಿನ ಘಟಕವನ್ನು ಶ್ರೀಮಠದ ಶ್ರೀ ವಿದ್ಯೇಶ ತೀರ್ಥ ಶ್ರೀ ಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಶ್ರೀ ಮಠಕ್ಕೆ ವಿಶೇಷ ಸಹಕಾರ ನೀಡುತ್ತಾ ಬಂದಿರುವ ಬ್ಯಾಂಕಿನ ಆಡಳಿತ ನಿರ್ದೇಶಕ ಎಂ. ರಾಘವೇಂದ್ರ ಶ್ರೀನಿವಾಸ್ ಭಟ್ ಅವನ್ನು ಶ್ರೀಗಳು ಅಭಿನಂದಿಸಿ ಅನುಗ್ರಹ ಮಂತ್ರಾಕ್ಷತೆ ನೀಡಿದರು. ತಮ್ಮ ಅನುಗ್ರಹ ಭಾಷಣದಲ್ಲಿ ಬ್ಯಾಂಕಿನ ಸಮಾಜಮುಖಿ ಕಾರ್ಯ ಚಟುವಟಿಕೆಗಳನ್ನು ಕೊಂಡಾಡಿ ಶುಭ ಕೋರಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಪ್ರಧಾನ ಕಚೇರಿಯ ಉಪಮಹಾಪ್ರಬಂದಕ ವಾದಿರಾಜ್ ಭಟ್, ಉಡುಪಿಯ ಸಹಾಯಕ ಮಹಾಪ್ರಬಂಧಕ ರಮೇಶ್ ವೈದ್ಯ, ಉಡುಪಿ ಶಾಖಾಧಿಕಾರಿ ಪ್ರಶಾಂತ್, ಚಂದ್ರಶೇಖರ್ ಆಚಾರ್ಯ, ಯು. ಶ್ರೀನಿವಾಸ್ ಭಾದ್ಯ, ಶ್ರೀಗಳ ಉಡುಪಿ ಚಾತುರ್ಮಾಸ್ಯ ಸಮಿತಿಯ ಸಂಚಾಲಕ ಜಯರಾಮ್ ಆಚಾರ್ಯ, ಉಡುಪಿ ಮಠದ ವ್ಯವಸ್ಥಾಪಕ ರಾಜೇಶ್ ಉಪಾಧ್ಯ ಪಿ. ಉಪಸ್ಥಿತರಿದ್ದರು. ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿ ಧನ್ಯವಾದ ನೀಡಿದರು.
ಭಂಡಾರಕೇರಿ ಮಠದಲ್ಲಿ ಕುಡಿವ ನೀರಿನ ಘಟಕ: ವಿದ್ಯೇಶ ತೀರ್ಥ ಶ್ರೀಗಳಿಂದ ಚಾಲನೆ
ಇಲ್ಲಿನ ರಥಬೀದಿಯಲ್ಲಿರುವ ಶ್ರೀ ಭಂಡಾರಕೇರಿ ಶಾಖಾ ಮಠಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕೆ ಕರ್ಣಾಟಕ ಬ್ಯಾಂಕ್ ವತಿಯಿಂದ ನೀಡಲಾದ ಶುದ್ಧ ನೀರಿನ ಘಟಕವನ್ನು ಶ್ರೀಮಠದ ಶ್ರೀ ವಿದ್ಯೇಶ ತೀರ್ಥ ಶ್ರೀ ಪಾದರು ದೀಪ ಬೆಳಗಿಸಿ ಉದ್ಘಾಟಿಸಿದರು.
Latest Videos
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.