3 ದಿನಗಳ ಮಂಗಳೂರು ಬೀಚ್ ಫೆಸ್ಟಿವಲ್- ಟ್ರಯಾಥ್ಲನ್‌ಗೆ ಚಾಲನೆ

| Published : Feb 01 2025, 12:04 AM IST

3 ದಿನಗಳ ಮಂಗಳೂರು ಬೀಚ್ ಫೆಸ್ಟಿವಲ್- ಟ್ರಯಾಥ್ಲನ್‌ಗೆ ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹಿಂಗಾರದ ಸಿರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಕ್ರೀಡೆ, ಮನೋರಂಜನೆ ಮತ್ತು ತುಳುನಾಡಿನ ಸಂಸ್ಕೃತಿಯನ್ನು ನಾಡಿಗೆ ಪರಿಚಯಿಸುವ ನಿಟ್ಟಿನಲ್ಲಿ ಮೂರನೇ ಆವೃತ್ತಿಯ ಮಂಗಳೂರು ಬೀಚ್ ಫೆಸ್ಟಿವಲ್ ಹಾಗೂ ಟ್ರಯಾಥ್ಲನ್ ಶುಕ್ರವಾರ ಸಂಜೆ ತಣ್ಣೀರುಬಾವಿ ಬೀಚ್‌ನಲ್ಲಿ ಆರಂಭಗೊಂಡಿತು.

ಒಡಿಯೂರು ಕ್ಷೇತ್ರದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಹಿಂಗಾರದ ಸಿರಿ ಅರಳಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದರು. ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ ಮಾತಾಡಿದರು.

ಕುಸ್ತಿ ಫೆಡರೇಷನ್ ಚೇರ್ ಮೆನ್ ಗುಣರಂಜನ್ ಶೆಟ್ಟಿ, ಗುರುನಾಥೇ ಗೌಡ, ಡಾ.ಚಂದ್ರೇ ಗೌಡ, ಪದ್ಮಶ್ರೀ ಡಾ.ಉದಯ್ ದೇಶಪಾಂಡೆ, ಡಾ.ಕರುಣಾ ಸಾಗರ್ ಮತ್ತಿತರರು ಇದ್ದರು. ಪ್ರಶಾಂತ್ ಶೆಟ್ಟಿ ನಿರೂಪಿಸಿದರು. ಎನ್‌.ಬಿ. ಶೆಟ್ಟಿ ಸ್ವಾಗತಿಸಿದರು.