ಭಾರತ್ ಸ್ಕೌಟ್ ಮತ್ತು ಗೈಡ್ಸ್ ನ ವಾರ್ಷಿಕ ಶಿಬಿರಕ್ಕೆ ಚಾಲನೆ

| Published : Feb 06 2024, 01:30 AM IST

ಸಾರಾಂಶ

ವಿರಾಜಪೇಟೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿರಾಜಪೇಟೆ ವತಿಯಿಂದ ತಾಲೂಕು ಮಟ್ಟದ ಮಕ್ಕಳ ಪ್ರವಿಣತಾ ಪದಕ ಶಿಬಿರ ವಿರಾಜಪೇಟೆ ನಗರದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜನೆಗೊಂಡಿತ್ತು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಬಿರಾರ್ಥಿಗಳು, ತರಬೇತಿದಾರರು, ಸಂಪನ್ಮೂಲ ವ್ಯಕ್ತಿಗಳು, ವಿವಿಧ ಶಾಲೆಗಳ ಶಿಕ್ಷಕರು, ಹಾಜರಿದ್ದರು.

ಕನ್ನಡಪ್ರಭವಾರ್ತೆ ವಿರಾಜಪೇಟೆ

ವಿದ್ಯಾರ್ಥಿಗಳು ಸೇವಾ ಸಂಸ್ಥೆಗಳನ್ನು ಪ್ರತಿನಿಧಿಸುವಂತಾಗಬೇಕು. ಶಿಸ್ತು, ಸಮಯ, ನಡತೆ ಹಾಗೂ ನಾಯಕತ್ವ ಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೆಯಾದಲ್ಲಿ ಉತ್ತಮ ಸಮಾಜ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಗಣ್ಯರು ಸಲಹೆ ನೀಡಿದರು. ವಿರಾಜಪೇಟೆ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ವಿರಾಜಪೇಟೆ ವತಿಯಿಂದ ತಾಲೂಕು ಮಟ್ಟದ ಮಕ್ಕಳ ಪ್ರವಿಣತಾ ಪದಕ ಶಿಬಿರ ವಿರಾಜಪೇಟೆ ನಗರದ ಪ್ರಗತಿ ಆಂಗ್ಲ ಮಾಧ್ಯಮ ಶಾಲೆಯ ಆವರಣದಲ್ಲಿ ಆಯೋಜನೆಗೊಂಡಿತ್ತು.

ಮೂರು ದಿನಗಳ ಕಾಲ ನಡೆಯುವ ಶಿಬಿರಕ್ಕೆ ಚಾಲನೆ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿದ ವಿರಾಜಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್, ಶಿಬಿರಗಳು ವಿದ್ಯಾರ್ಥಿಗಳನ್ನು ಉತ್ತಮ ವ್ಯಕ್ತಿಯನ್ನಾಗಿ ರೂಪಿಸುವ ಕೇಂದ್ರಗಳಾಗಿವೆ. ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯು ಲಕ್ಷಾಂತರ ವಿದ್ಯಾರ್ಥಿಗಳನ್ನು ಧೈರ್ಯವಂತ, ಸಾಹಸಿಗರಾಗಿ, ಶಿಸ್ತುಬದ್ಧ ಜೀವನವನ್ನು ರೂಪಿಸುವ ಶಕ್ತಿಯುತ ಸಂಸ್ಥೆಯಾಗಿದೆ. ಅಯೋಜಿಸುವ ಶಿಬಿರದಲ್ಲಿ ಭಾಗವಹಿಸುವುದರಿಂದ ಪರಸ್ಪರ ವಿಚಾರ ವಿನಿಮಯ, ನಾಯಕತ್ವದ ಗುಣಗಳು, ಸಾಹಸ ಕ್ರೀಡೆಗಳಲ್ಲಿ ಭಾಗವಹಿಸುವುದು ಕಲೆ ಅಟೋಟ ಸ್ಪರ್ಧೆಗಳು ಹೀಗೆ ಹಲವು ಕ್ಷೇತ್ರಗಳ ಪರಿಚಯ ನಾಮಗಾಗುತ್ತದೆ. ವಿದ್ಯಾರ್ಥಿಗಳು ಕಲಿಕೆಯೊಂದಿಗೆ ಚಟುವಟಕೆಗಳಲ್ಲಿ ಭಾಗಿಗಳಾದಲ್ಲಿ ಶಾರೀರಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಾಯಕವಾಗಿ ಸದೃಢರಾಗಬಹುದು. ಶಿಬಿರಗಳಲ್ಲಿ ಕಲಿತ ಅಭ್ಯಾಸಗಳು ಮುಂದೆ ಜೀವನ ರೂಪಿಸುವ ಮತ್ತು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ ಪಾತ್ರವಹಿಸುತ್ತದೆ. ಶಿಬಿರದಲ್ಲಿ ತಿಳಿಸುವ ಪ್ರತಿಯೋಂದು ಅಂಶಗಳನ್ನು ಚಾಚು ತಪ್ಪದೆ ಪಾಲಿಸಿ ಎಂದು ಶಿಬಿರಾರ್ಥಿಗಳಿಗೆ ಕರೆ ನೀಡಿದರು.ಎಷೀಯ ಪೆಸಿಫಿಕ್ ವಲಯದ ಡೆಪ್ಯೂಟಿ ಡೈರೇಕ್ಟರ್ ಆಫ್ ಗೈಡ್ಸ್ ಲೀಡರ್ ಟ್ರೈನರ್ ಮಾಚಮ್ಮ, 1909 ರಲ್ಲಿ ಅರಂಭವಾದ ವಿದ್ಯಾರ್ಥಿ ಚಳುವಳಿಯು ಒಂದು ಸಂಘಟನೆಯಾಗಿ ಮಾರ್ಪಟ್ಟಿದ್ದೆ. 117 ದೇಶಗಳಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯನಿರ್ವಹಿಸುತ್ತಿದೆ. ಶಕ್ತಿಯಿರುವವರೆಗೂ ಶ್ರಮಿಸು ಇದು ನಮ್ಮ ಧ್ಯೇಯವಾಕ್ಯವಾಗಬೇಕು. ಸಮಾಜಿಕ ಕಲ್ಪನೆ. ಸಂವೇದನಾಶೀಲತೆ, ಸಾಮಾಜಿಕ ಮೌಲ್ಯಗಳು, ರಾಷ್ಟ್ರ ಭಕ್ತಿ, ಸೇವಾ ಮನೋಭಾವವನ್ನು ಶಿಬಿರಗಳು ತಿಳಿ ಹೇಳುತ್ತದೆ. ಇವುಗಳು ಉತ್ತಮ ವಿದ್ಯಾರ್ಥಿಗಳಾಗಿ ರೂಪಿಸಲು ಸಹಕಾರಿಗಳಾಗುತ್ತದೆ. ಸೇವೆಯನ್ನು ಅರಿತು ನೀಡುವ ಸಂಸ್ಥೆಯ ಪ್ರಮಾಣ ಪತ್ರಗಳು ಸರ್ಕಾರಿ ನೌಕರಿ ಪಡೆಯಲು ಉಪಯೋಗವಾಗುತ್ತದೆ. ಶಿಬಿರಾರ್ಥಿಗಳು ಬಾಲ್ಯದಿಂದ ಪರಿಸರ, ಸೇವಾ ಮನೋಭಾವ, ಸಂಘಟನಾ ಶಕ್ತಿ, ನಾಯಕತ್ವ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ಪ್ರಧಾನ ಆಯುಕ್ತರಾದ ಬೇಬಿ ಮ್ಯಾಥ್ಯೂ ಅವರು ಮಾತನಾಡಿ ನಾವುಗಳು ಸಮಾಜದಿಂದ ಎಲ್ಲಾವನ್ನು ಪಡೆದುಕೊಳ್ಳುತ್ತೇವೆ. ಅದರಂತೆಯೆ ಸಮಾಜಕ್ಕೆ ನಾವು ಪ್ರತಿಫಲದ ರೂಪದಲ್ಲಿ ಕೊಡುಗೆಯಾಗಿ ನೀಡುವಂತಾಗಬೇಕು. ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯೆ ಅಲ್ಲಾ ಆದರೆ ಪರಿಸರದಲ್ಲಿ ಪರಿಸರದಿಂದ ಕಲಿಯುವ ವಿದ್ಯೆಗಳು ನಮ್ಮನ್ನು ಸುಸಂಸ್ಕೃತರನ್ನಾಗಿ ಸೃಷ್ಟಿ ಮಾಡುತ್ತದೆ. ಸಂಘಟನೆ ಮತ್ತು ನಾಯತ್ವದ ಗುಣಗಳನ್ನು ಮೈಗೂಡಿಸಿಕೊಂಡು ಶಿಬಿರದ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಹೇಳಿದರು.ರಾಷ್ಠೃ ನಾಯಕರು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಜಿಲ್ಲಾ ಸ್ಕೌಟ್ ಆಯುಕ್ತರಾದ ಜಿಮ್ಮಿ ಸಿಕ್ವೇರಾ ಅವರು ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಮಾಡಿದರು.ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಮಾಜಿ ಅದ್ಯಕ್ಷರಾದ ವಿ.ಟಿ. ನಾಣಯ್ಯ, ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿಗಳು ವಿರಾಜಪೇಟೆ ವನಜಾಕ್ಷಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಜಿಲ್ಲಾ ತರಬೇತಿ ಆಯುಕ್ತಕರಾದ ಮೈಥೀಲಿ ರಾವ್ ಅವರು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.ಪುರಸಭೆಯ ಸದಸ್ಯರು ಮತ್ತು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆಯ ಅದ್ಯಕ್ಷರಾದ ಸಚೀನ್ ಕುಟ್ಟಯ್ಯ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದರು.ಪದ್ಮಶ್ರೀ ಪ್ರಶಸ್ತಿ ವಿಜೇತರಾದ ರಾಣಿ ಮಾಚಯ್ಯ, ಜಿಲ್ಲಾ ಸಂಸ್ಥೆಯ ಕಾರ್ಯದರ್ಶಿ, ಬೊಳ್ಳಜೀರ ಅಯ್ಯಪ್ಪ, ಜಿಲ್ಲಾ ಸಂಘಟಕರಾದ ದಮಯಂತಿ, ಪ್ರಗತಿ ಶಾಲೆಯ ಸಂಸ್ಥಾಪಕರಾದ ಮಾದಂಡ ಪೂವಯ್ಯ ಉಪಸ್ಥಿತರಿದ್ದರು.ವಿವಿಧ ಶಾಲೆಯ ವಿಧ್ಯಾರ್ಥಿಗಳಿಂದ ದೇಶ ಭಕ್ತಿ ಗೀತಾ ಗಾಯನ ಕಾರ್ಯಕ್ರಮ ನಡೆಯಿತು.

ಪ್ರಗತಿ ಶಾಲೆಯ ಆಡಳಿತಾಧಿಕಾರಿಗಳಾದ ಮಾದಂಡ ಪಿ.ತಿಮ್ಮಯ್ಯ ಸ್ವಾಗತಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆಯ ಉಪಾಧ್ಯಕ್ಷರಾದ ತಸ್ನೀಂ ಆಕ್ತರ್ ಕಾರ್ಯಕ್ರಮ ನಿರೂಪಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಸ್ಥಳೀಯ ಸಂಸ್ಥೆ ಕಾರ್ಯದರ್ಶಿಗಳಾದ ಮಧೋಷ್ ಪೂವಯ್ಯ ಅವರು ಸರ್ವರನ್ನೂ ವಂದಿಸಿದರು.ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳಿಂದ ಆಗಮಿಸಿದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ನ ಶಿಬಿರಾರ್ಥಿಗಳು, ತರಬೇತಿದಾರರು, ಸಂಪನ್ಮೂಲ ವ್ಯಕ್ತಿಗಳು, ವಿವಿಧ ಶಾಲೆಗಳ ಶಿಕ್ಷಕರು, ಹಾಜರಿದ್ದರು.