ಸಾರಾಂಶ
ಕ್ರಿಸ್‌ಮಸ್, ಹೊಸ ವರ್ಷದ ಅಂಗವಾಗಿ ನಗರದ ಗಾಜಿನ ಮನೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶುಕ್ರವಾರದಿಂದ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಶನಿವಾರ ಸಂಜೆ ಚಾಲನೆ ನೀಡಲಾಯಿತು.
ದಾವಣಗೆರೆ: ಕ್ರಿಸ್‌ಮಸ್, ಹೊಸ ವರ್ಷದ ಅಂಗವಾಗಿ ನಗರದ ಗಾಜಿನ ಮನೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ ಸಹಯೋಗದಲ್ಲಿ ಶುಕ್ರವಾರದಿಂದ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಿದ್ದು, ಶನಿವಾರ ಸಂಜೆ ಚಾಲನೆ ನೀಡಲಾಯಿತು.
ಈ ಪ್ರದರ್ಶನದಲ್ಲಿ ಕಲ್ಲಂಗಡಿ ಹಣ್ಣಿನಲ್ಲಿ ಹಲವು ದಾರ್ಶನಿಕರು, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಮಹಾತ್ಮಾ ಗಾಂಧೀಜಿ, ಸ್ವಾಮಿ ವಿವೇಕಾನಂದರು, ಶ್ರೀ ಆಂಜನೇಯ, ಸಿರಿಗೆರೆ ಲಿಂಗೈಕ್ಯ ಹಿರಿಯ ಜಗದ್ಗುರುಗಳು, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಮಾಜಿ ಪ್ರಧಾನಿ ದಿವಂಗತ ಡಾ.ಮನಮೋಹನ ಸಿಂಗ್ ಸೇರಿದಂತೆ ಹಲವು ಪ್ರಶಸ್ತಿ ಪುರಸ್ಕೃತರ ಜೊತೆ ಜಿಲ್ಲೆಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅವರ ಭಾವಚಿತ್ರವನ್ನೂ ಅನಾವರಣಗೊಳಿಸಲಾಗಿದೆ.ದಾರ್ಶನಿಕರ ಪುತ್ಥಳಿಗಳು, ಕೂಡಲ ಸಂಗಮ ಬಸವಣ್ಣ ಐಕ್ಯ ಮಂಟಪ, ವಿವಿಧ ಬಗೆಯ ಹೂವುಗಳಿಂದ ಸಂಸತ್ ಭವನ ನಿರ್ಮಿಸಲಾಗಿದೆ. ಕುಂಬಳಕಾಯಿ, ವಿವಿಧ ಬಗೆಯ ತರಕಾರಿಗಳನ್ನು ಬಳಸಿ ಈಶ್ವರಲಿಂಗ, ನವಿಲು, ಮಂಗನ ಗೊಂಬೆ, ಹಾಗಲ ಕಾಯಿಯಿಂದ ಡೈನೋಸಾರಸ್ ಸಹ ನಿರ್ಮಿಸಲಾಗಿದೆ. ಸಿರಿಧಾನ್ಯಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸಾರ್ವಜನಿಕರು, ವಿದ್ಯಾರ್ಥಿಗಳು, ಪೋಷಕರು ಮಕ್ಕಳೊಂದಿಗೆ ಆಗಮಿಸಿ ವೀಕ್ಷಣೆ ಮಾಡಿದರು.
- - - -28ಕೆಡಿವಿಜಿ40, 41, 42, 43, 44: