ಉಬ್ಬೆ ಹುಣಸೆ ಜಲಾಶಯ ನೀರು ಕಾಲುವೆಗೆ ಬಿಡಲು ಚಾಲನೆ

| Published : Dec 09 2024, 12:49 AM IST

ಉಬ್ಬೆ ಹುಣಸೆ ಜಲಾಶಯ ನೀರು ಕಾಲುವೆಗೆ ಬಿಡಲು ಚಾಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಹನೂರು ಸಮೀಪದ ಉಬ್ಬೆ ಹುಣಸೆ ಜಲಾಶಯದ ನೀರು ಕಾಲುವೆಗೆ ಬಿಡಲು ಶಾಸಕ ಎಂ.ಆರ್. ಮಂಜುನಾಥ್ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಹನೂರು

ಜಲಾಶಯದ ನೀರು ಕೋಡಿ ಮೂಲಕ ಹಳ್ಳದಲ್ಲಿ ಹರಿದು ವ್ಯರ್ಥವಾಗಿ ಹೊಳೆಗೆ ಹೋಗುತ್ತಿರುವುದನ್ನು ಮನಗಂಡು ರೈತರ ಜಮೀನುಗಳಿಗೆ ಕಾಲುವೆ ಮುಖಾಂತರ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.

ತಾಲೂಕಿನ ಹುಬ್ಬೆ ಹುಣಸೆ ಜಲಾಶಯದಿಂದ ಕಾಲುವೆಗೆ ನೀರು ಹರಿಸಲು ಚಾಲನೆ ನೀಡಿ ಮಾತನಾಡಿದರು. ತಾಲೂಕಿನಲ್ಲಿ ಉತ್ತಮ ಮಳೆಯಾಗಿ ಬಹುತೇಕ ಜಲಾಶಯಗಳು ಭರ್ತಿಯಾಗಿರುವುದರಿಂದ ಉಬ್ಬೆ ಹುಣಸೆ ಜಲಾಶಯ ತುಂಬಿ ಕೋಡಿ ಮುಖಾಂತರ ತಟ್ಟೆ ಹಳ್ಳದಲ್ಲಿ ವ್ಯರ್ಥವಾಗಿ ಹರಿದು ಅಪಾರ ಪ್ರಮಾಣದ ನೀರು ಹೊಳೆ ಪಾಲಾಗುತ್ತಿದ್ದು, ಇದನ್ನು ಮನಗಂಡು ರೈತರ ಜಮೀನುಗಳಿಗೆ ನೀರು ಹರಿಸಲು ಪ್ರಥಮ ಬಾರಿಗೆ ಕಾಲುವೆ ದುರಸ್ತಿ ಪಡಿಸಿ ಎರಡೂವರೆ ಕಿಲೋಮೀಟರ್ ನೀರನ್ನು ಹರಿಸಲು ಮೊದಲ ಹಂತವಾಗಿ ಕ್ರಮ ಕೈಗೊಳ್ಳಲಾಗಿದೆ. ಉಳಿದಂತೆ 3 ಕಿಮೀ ಸಹ ರೈತರ ಜಮೀನಿಗೆ ನೀರು ಹರಿಸಲು ಕಾಲುವೆಗಳಲ್ಲಿರುವ ಹೂಳು ಮತ್ತು ಗಿಡ ಗಂಟೆಗಳನ್ನು ಸ್ವಚ್ಛಗೊಳಿಸಿ ಶಿಥಿಲಗೊಂಡಿರುವ ಕಾಲುವೆಗಳನ್ನು ಸರಿಪಡಿಸಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಅಂತರ್ಜಲ ವೃದ್ಧಿ: ರೈತರ ಜಮೀನುಗಳಲ್ಲಿ ಕೊಳವೆ ಬಾವಿಗಳು ಮತ್ತು ಅಂತರ್ಜಲ ಹೆಚ್ಚಾಗಲು ಅನುಕೂಲದಾಯಕವಾಗಿದ್ದು, ರೈತರು ತಮ್ಮ ಜಮೀನುಗಳಿಗೆ ಬಳಕೆ ಮಾಡಿಕೊಳ್ಳಲು ಅನುಕೂಲದಾಯಕವಾಗಿದೆ. ಹೀಗಾಗಿ ಪೋಲಾಗಿ ಹೋಗುತ್ತಿರುವ ನೀರನ್ನು ತಡೆಗಟ್ಟಲು ಕಾಲುವೆ ಮೂಲಕ ನೀರನ್ನು ಹರಿಬಿಡಲಾಗಿದೆ, ರೈತರು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಯೋಜನೆಗೆ ಬೇಕಾದ 30 ಎಕರೆ ಜಮೀನು ವಶಕ್ಕೆ ಪಡೆಯಲು ರೈತರಿಗೆ ನೀಡಬೇಕಾಗಿರುವ ಪರಿಹಾರ ಹಣ ನೀಡದೆ ಇರುವುದರಿಂದ ಆ ಕೆಲಸ ನೆನೆಗುದಿಗೆ ಬಿದ್ದಿದೆ. ಮುಂದಿನ ದಿನಗಳಲ್ಲಿ ರೈತರಿಗೆ ಪರಿಹಾರ ಹಣ ನೀಡಿ ಜಮೀನನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗುವುದು. ಹೀಗಾಗಿ ರೈತರ ಸಭೆ ಕರೆದು ನೀರನ್ನು ಬಳಕೆ ಮಾಡಿಕೊಳ್ಳಲು ಬಳಕೆದಾರರ ರೈತರ ಅನುಕೂಲಕ್ಕಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಮುಂದಾಗಿದ್ದೇನೆ. ಇದಕ್ಕೆ ಈ ಭಾಗದ ರೈತರು ಸಾರ್ವಜನಿಕರು ಸಹಕಾರ ನೀಡಬೇಕು ಎಂದರು. ಈ ಸಂದರ್ಭದಲ್ಲಿ ಎ.ಇ. ಕರುಣಾಮಯಿ ಹಾಗೂ ಗುತ್ತಿಗೆದಾರರು, ಮುಖಂಡರು, ರೈತರು ಉಪಸ್ಥಿತರಿದ್ದರು.