ಸಾರಾಂಶ
ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಹಬೀಬ, ವಿನಾಯಕ ಹಬೀಬ ಸಂಗಡಿಗರು ಪೂಜೆ
ಗದಗ: ನಗರದ ಕಾಟನ್ ಮಾರ್ಕೆಟ್ ರೋಡ್‌ನಲ್ಲಿ ಶ್ರೀಸುದರ್ಶನ ಚಕ್ರ ಯುವ ಮಂಡಳ ಸಂಘಟನೆಯಿಂದ ಹಿಂದೂ ಮಹಾಗಣಪತಿ ಉತ್ಸವಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಶ್ರದ್ಧಾಭಕ್ತಿಯೊಂದಿಗೆ ಸ್ಥಾಪಿಸಲಾದ ಗಜಾನನೋತ್ಸವಕ್ಕೆ ಉತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಎಚ್. ಚಾಲನೆ ನೀಡಿದರು. ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ರಾಘವೇಂದ್ರ ಹಬೀಬ, ವಿನಾಯಕ ಹಬೀಬ ಸಂಗಡಿಗರು ಪೂಜೆ ನೆರವೇರಿಸಿದರು.ಸಮಿತಿಯ ಅಧ್ಯಕ್ಷ ಸುಧೀರ ಕಾಟೀಗರ, ಉಪಾಧ್ಯಕ್ಷ ರವಿರಾಜ ಮಾಳೇಕೊಪ್ಪಮಠ, ಗಂಗಾಧರ ಹಬೀಬ್, ಅಶ್ವಿನಿ ಜಗತಾಪ, ಕಾರ್ಯದರ್ಶಿ ಅಂಕಿತ ಸಾವಕಾರ, ಶಿವು ಹಿರೇಮನಿ ಪಾಟೀಲ, ಕುಮಾರ ಮಾರನಬಸರಿ, ಕೀರ್ತಿ ಕಾಂಬಳೇಕರ, ಪ್ರಶಾಂತ ಪಾಟೀಲ ಸೇರಿದಂತೆ ಮಹಿಳಾ ಮಂಡಳ ಹಾಗೂ ಯುವಕ ಮಂಡಳದವರು ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಈ ವೇಳೆ ನಗರಸಭೆ ಸದಸ್ಯೆ ಹುಲಿಗೆಮ್ಮ ಹಬೀಬ, ಶ್ರೀಪತಿ ಉಡುಪಿ, ಮೋಹನ ಮಾಳಶೆಟ್ಟರ್, ವಂದನಾ ವೇರ್ಣೆಕರ, ರಂಜನಾ ಕೋಟಿ, ಲತಾ ಮುತ್ತಿನಪೆಂಡಿಮಠ, ಮಂಜು ಖೋಡೆ, ಯಲ್ಲಪ್ಪ ಭಜಂತ್ರಿ, ರಮೇಶ ಸಜ್ಜಗಾರ, ರವಿ ಚವ್ಹಾಣ, ಗಜು ಹಬೀಬ, ಗಣೇಶ ಲದವಾ, ಸ್ವರೂಪ ಹುಬ್ಬಳ್ಳಿ, ಸುರೇಶ ಚವ್ಹಾಣ, ಪ್ರಶಾಂತ ಚವಡಿ, ನಾಗರಾಜ ಸೋಳಂಕಿ, ವಿಶ್ವನಾಥ ಶಿರಗಣ್ಣವರ, ರವಿ ನರೇಗಲ್ಲ, ಪ್ರಸಾದ ಸಿದ್ಲಿಂಗ್, ಅನೀಲ ಪವಾರ, ಗಿರೀಶ ಬೇವಿನಕಟ್ಟಿ, ಗಣೇಶ ಚವ್ಹಾಣ, ಮಾರುತಿ ಕಾಟವಾ, ಪ್ರವೀಣ ನಾಯ್ಕರ್, ಈರಣ್ಣ ಬಳ್ಳಾರಿ ಮುಂತಾದವರು ಉಪಸ್ಥಿತರಿದ್ದರು.