ಸಾರಾಂಶ
ಕನ್ನಡಪ್ರಭ ವಾರ್ತೆ ಹನೂರು
ಮಲೆಮಹದೇಶ್ವರ ಬೆಟ್ಟದಲ್ಲಿ ಶರವನ್ನ ರಾತ್ರಿ ಪ್ರಯುಕ್ತ ಉಯ್ಯಾಲೋತ್ಸವಕ್ಕೆ ಸಾಲೂರು ಬೃಹನ್ ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಚಾಲನೆ ನೀಡಿದರು.ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ದೇವಾಲಯದಲ್ಲಿ ಶರವನ್ನ ರಾತ್ರಿ ಅಂಗವಾಗಿ ಉಯ್ಯಾಲೋತ್ಸವ ಪ್ರಯುಕ್ತ ದಸರಾ ಹಬ್ಬದ 9 ದಿನಗಳು ನಡೆಯುವ ಸಾಂಪ್ರದಾಯ ಪೂಜಾ ಕಾರ್ಯಕ್ರಮಗಳಿಗೆ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಜರುಗಿತು.ಶ್ರೀ ಕ್ಷೇತ್ರದಲ್ಲಿ ಬೇಡಗಂಪಣ ಅರ್ಚಕರ ಸಾಂಪ್ರದಾಯದಂತೆ ಮಹಾನವಮಿ ದಿನ ಜರುಗುವ ಪಟ್ಟದ ಉಯ್ಯಾಲೋತ್ಸವಕ್ಕೆ ಬೇಕಾಗಿರುವ ಬಿದಿರನ್ನು ಅರಣ್ಯ ಪ್ರದೇಶದಿಂದ ತಂದು ದೇವಾಲಯದ ಪಶ್ಚಿಮ ದಿಕ್ಕಿನ ಕಂಠ ಶಾಲೆಯ ಆವರಣದಲ್ಲಿ ಚಪ್ಪರವನ್ನು ಹಾಕಿ ತೂಗು ಉಯ್ಯಾಲೆ ಮಂಟಪವನ್ನು ನಿರ್ಮಿಸಿ ಅದರಲ್ಲಿ ಉತ್ಸವ ಮೂರ್ತಿಗಳನ್ನು ಇಟ್ಟು 9 ದಿನಗಳ ಪೂಜೆ ಸಲ್ಲಿಸಿ ಪ್ರತಿದಿನ ರಾತ್ರಿ 8.30ಕ್ಕೆ ಮಾದೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ನೈವೇದ್ಯ ಮಹಾಮಂಗಳಾರತಿಯೊಂದಿಗೆ ನಂತರ ಉತ್ಸವ ಮೂರ್ತಿಗಳ ಪೂಜೆ ಸಲ್ಲಿಸಿ ಧಾರ್ಮಿಕವಾಗಿ ವಿಧಿ ವಿಧಾನಗಳೊಂದಿಗೆ ಸಂಭ್ರಮ ಸಡಗರದಿಂದ ಪೂಜಾ ಕಾರ್ಯಕ್ರಮಗಳು ನಡೆಯಲಿದೆ.
ಸಾಲೂರು ಮಠಕ್ಕೆ ಹೈಕೋರ್ಟ್ ನ್ಯಾಯಮೂರ್ತಿ ಭೇಟಿ:ಮಲೆ ಮಹದೇಶ್ವರ ಬೆಟ್ಟಕ್ಕೆ ಕರ್ನಾಟಕ ಹೈಕೋಟ್‌ನ ನ್ಯಾಯಮೂರ್ತಿ ಬಸವರಾಜ್ ಅವರು ಭೇಟಿ ನೀಡಿ ಮಹದೇಶ್ವರನ ದರ್ಶನ ಪಡೆದು ನಂತರ ಇತಿಹಾಸ ಪ್ರಸಿದ್ಧ ಸಾಲೂರು ಮಠಕ್ಕೆ ಭೇಟಿ ನೀಡಿ ಶಾಂತ ಮಲ್ಲಿಕಾರ್ಜುನ ಸ್ವಾಮಿ ಅವರಿಂದ ಆಶೀರ್ವಾದ ಪಡೆದು ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುವ ಪೂಜಾ ಕಾರ್ಯಕ್ರಮಗಳ ಹಾಗೂ ಮಠದಲ್ಲಿ ನಡೆಯುವ ವಿಶೇಷತೆಗಳ ಬಗ್ಗೆ ಚರ್ಚೆ ನಡೆಸಿದರು.