ಕಲ್ಲು ಕೋರೆಯಲ್ಲಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ತೊರೆನೂರಿನ ಅರೆಗಲ್ಲಿನ ಕೋರೆಯಲ್ಲಿ ನಡೆದಿದೆ.
ಕುಶಾಲನಗರ: ಕಲ್ಲು ಕೋರೆಯಲ್ಲಿ ಲಾರಿ ನಿಯಂತ್ರಣ ತಪ್ಪಿ ಪಲ್ಟಿಯಾಗಿ ಚಾಲಕ ಮೃತಪಟ್ಟ ಘಟನೆ ತೊರೆನೂರಿನ ಅರೆಗಲ್ಲಿನ ಕೋರೆಯಲ್ಲಿ ನಡೆದಿದೆ.
ಕುಶಾಲನಗರದ ಟೌನ್ ಕಾಲನಿ ನಿವಾಸಿ ಆರ್ಮುಗಂ ಅವರ ಪುತ್ರ ವಿನ್ಸೆಂಟ್ ಮೃತ ದುರ್ದೈವಿ. ಲೋಡ್ ಲಾರಿ ಚಾಲನೆ ಸಂದರ್ಭ ನಿಯಂತ್ರಣ ಕಳೆದುಕೊಂಡು ಅಪಘಾತ ಉಂಟಾಗಿದೆ. ನಿಯಂತ್ರಣ ಕಳೆದುಕೊಂಡ ಲಾರಿಯಿಂದ ಹೊರಕ್ಕೆ ಹಾರಿದ ಚಾಲಕ ವಿನ್ಸೆಂಟ್ ಲಾರಿ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಘಟನೆ ಬಗ್ಗೆ ಮೊಕದ್ದಮೆ ದಾಖಲಾಗಿದ್ದು ತನಿಖೆ ಮುಂದುವರಿದಿದೆ.