ಸಾರಾಂಶ
ದಾಬಸ್‍ಪೇಟೆ: ಗೋದಾಮಿನಲ್ಲಿ ಕೆಟ್ಟು ನಿಂತಿದ್ದ ಟ್ರಕ್ ಲಾರಿ ರಿಪೇರಿ ಮಾಡುತ್ತಿದ್ದ ವೇಳೆ ಪಾರ್ಕ್ ಮಾಡಲು ಮುಂದಾದಾಗ ಮತ್ತೊಂದು ಕಂಟೇನರ್ ಲಾರಿ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಚಾಲಕನೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ನೆಲಮಂಗಲ ತಾಲೂಕು ಹ್ಯಾಡಾಳು ಗ್ರಾಮದ ಹಫೀಲೊ ಪ್ಯಾಕಿಂಗ್ ಮತ್ತು ಸಿಯೆಟ್ ಟೈರ್ ಗೋದಾಮಿನ ಆವರಣದಲ್ಲಿ ಈ ಘಟನೆಯೂ ನಡೆದಿದ್ದು, ಮಧ್ಯಪ್ರದೇಶದ ಕೆಮಿ ಚಾಂದ್ ಸಿಂಗ್ (26) ಮೃತ ದುರ್ದೈವಿ ಚಾಲಕನಾಗಿದ್ದಾನೆ.ಸಿಯೆಟ್ ಟೈರ್ಸ್ ಗೋದಾಮಿಗೆ ಟೈರ್ ಅನ್ಲೋಡ್ ಮಾಡಲು ಆಗಮಿಸಿದ್ದ ಚಾಲಕ ಕೆಮಿ ಚಾಂದ್ ಸಿಂಗ್ ಎರಡು ದಿನಗಳಿಂದೆ ಕೆಟ್ಟು ನಿಂತಿದ್ದ ತನ್ನ ಲಾರಿಯನ್ನು ರಿಪೇರಿ ಮಾಡಿಸಲು ಮೆಕಾನಿಕ್ ಕರೆಸಿ ರಿಪೇರಿ ಮಾಡಿಸುತ್ತಿದ್ದನು.ಈ ಸಂದರ್ಬದಲ್ಲಿ ತನ್ನ ಲಾರಿ ಚಕ್ರದ ಪಕ್ಕದಲ್ಲೇ ಕುಳಿತು ಮೆಕಾನಿಕ್‌ಗೆ ಸಹಾಯ ಮಾಡುತ್ತಿದ್ದ ವೇಳೆ ಪಾಕಿರ್ಂಗ್ ಮಾಡಲು ಬಂದ ಮತ್ತೊಂದು ಕಂಟೇನರ್ ಲಾರಿ ಚಾಲಕನ ನಿಯಂತ್ರಣಕ್ಕೆ ಸಿಗದೇ ಎದುರಿಗಿದ್ದ ಕೆಮಿ ಚಾಂದ್ ಸಿಂಗ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ಪರಿಣಾಮ ತಲೆಗೆ ತೀವ್ರ ಗಾಯಗೊಂಡು ಕೆಮಿ ಚಾಂದ್ ಸಿಂಗ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಘಟನಾ ಸ್ಥಳಕ್ಕೆ ನೆಲಮಂಗಲ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಮೃತದೇಹವನ್ನು ನೆಲಮಂಗಲ ಸಾರ್ವಜನಿಕ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತನ ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪೋಟೊ 4 : ಮೃತಪಟ್ಟ ಕೆಮಿ ಚಾಂದ್ ಸಿಂಗ್