ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಕಾರು: ರಾತ್ರಿಯಿಡೀ ವಾಹನದಲ್ಲೇ ಸಿಲುಕಿ ನರಳಾಡಿದ ಗಾಯಾಳು

| Published : Oct 20 2025, 01:02 AM IST

ಚಾಲಕನ ನಿಯಂತ್ರಣ ತಪ್ಪಿ 20 ಅಡಿ ಆಳಕ್ಕೆ ಬಿದ್ದ ಕಾರು: ರಾತ್ರಿಯಿಡೀ ವಾಹನದಲ್ಲೇ ಸಿಲುಕಿ ನರಳಾಡಿದ ಗಾಯಾಳು
Share this Article
  • FB
  • TW
  • Linkdin
  • Email

ಸಾರಾಂಶ

ಮಧ್ಯ ರಾತ್ರಿ ಆಗಿದ್ದರಿಂದ ಯಾರಿಗೂ ಸಹ ಆತ ನರಳಾಡಿ ಕೂಗಿಕೊಳ್ಳುತ್ತಿರುವುದು ಕೇಳಿಸಿಲ್ಲ. ಬೆಳಕಾಗುತ್ತಿದ್ದಂತೆ ದಾರಿಹೋಕರು ನೋಡಿ ಹತ್ತಿರ ತೆರಳಿ ಕಾರಿನಿಂದ ಬರುವ ನರಳಾಟದ ಕೂಗು ಕೇಳಿ ಗಂಭೀರ ಗಾಯದೊಂದಿದೆ ಕಾಲು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ಮಧ್ಯರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಮಾರುತಿ ಓಮಿನಿ ಆಯತಪ್ಪಿ 20 ಅಡಿ ಆಳದ ಜಮೀನಿಗೆ ಉರುಳಿ ಬಿದ್ದು ಚಾಲಕ ರಾತ್ರಿ ಪೂರ ವಾಹನದಲ್ಲೇ ನರಳಿದ ಘಟನೆ ಪಟ್ಟಣದ ಮೈಸೂರು - ಬೆಂಗಳೂರು ಹೆದ್ದಾರಿಯಲ್ಲಿ ನಡೆದಿದೆ.

ಕೆ.ಆರ್.ಪೇಟೆ ತಾಲೂಕಿನ ಕಿಕ್ಕೇರಿ ಮೂಲದ ಧನಂಜಯ (50) ಅಪಘಾತದಲ್ಲಿ ಜಜ್ಜಿದ ಮಾರುತಿ ಒಮಿನಿ ಕಾರಿನ ಮಧ್ಯೆ ಸಿಲುಕಿದ ಚಾಲಕ ಎಂದು ತಿಳಿದು ಬಂದಿದೆ. ಈತನನ್ನು ಅಗ್ನಿ ಶಾಮಕ ಸಿಬ್ಬಂದಿ ಹರಸಾಹಸ ಮಾಡಿ ಕಾರಿನಿಂದ ರಕ್ಷಿಸಿ ಆಸ್ಪತ್ರೆಗೆ ಸೇರಿಸಿದ್ದಾರೆ.

ಪಟ್ಟಣದ ಅಗ್ನಿ ಶಾಮಕದಳ ಕಚೇರಿ ಎದುರಿನಲ್ಲಿ ಮೈಸೂರು ಕಡೆಯಿಂದ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಬರುತ್ತಿದ್ದ ವೇಳೆ ಸನ್ ಪ್ಯೂರ್ ಕಾರ್ಖಾನೆ ಬಳಿ ಹಳ್ಳದ ಜಮೀನಿಗೆ ಕಾರು ಉರುಳಿ ಬಿದ್ದಿದೆ. ಉರುಳಿಬಿದ್ದ ಕಾರಿನ ಮುಂಭಾಗ ವಾಹನ ನಜ್ಜುಗುಜ್ಜಾಗಿ ಚಾಲಕ ಧನಂಜಯ್ಯನ ಕಾಲು ಸಿಲಿಕಿಕೊಂಡು ನರಳಾಡಿದ್ದಾನೆ.

ಮಧ್ಯ ರಾತ್ರಿ ಆಗಿದ್ದರಿಂದ ಯಾರಿಗೂ ಸಹ ಆತ ನರಳಾಡಿ ಕೂಗಿಕೊಳ್ಳುತ್ತಿರುವುದು ಕೇಳಿಸಿಲ್ಲ. ಬೆಳಕಾಗುತ್ತಿದ್ದಂತೆ ದಾರಿಹೋಕರು ನೋಡಿ ಹತ್ತಿರ ತೆರಳಿ ಕಾರಿನಿಂದ ಬರುವ ನರಳಾಟದ ಕೂಗು ಕೇಳಿ ಗಂಭೀರ ಗಾಯದೊಂದಿದೆ ಕಾಲು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಪಡೆದಿದ್ದಾರೆ.

ನಂತರ ಎದುರಿಗೆ ಕಾಣುತ್ತಿದ್ದ ಅಗ್ನಿ ಶಾಮಕ ಸಿಬ್ಬಂದಿ ಕಚೇರಿಗೆ ಹೋಗಿ ಮಾಹಿತಿ ನೀಡಿ ಕರೆ ತಂದು ಕಾರು ಬಿದ್ದಿರುವ ಸ್ಥಳ ತೋರಿಸಿದ್ದಾರೆ. ನಂತರ ಸಿಬ್ಬಂದಿ ಆಗಮಿಸಿ ಕಾರಿನಲ್ಲಿ ಸಿಲುಕಿದ್ದ ಚಾಲಕನ ಕಾಲು ಬಿಡಿಸಿ ಗಂಭೀರವಾಗಿ ಗಾಯಗೊಂಡಿದ್ದ ಚಾಲಕ ಧನಂಜಯನನ್ನು ಹೊತ್ತು ರಸ್ತೆಗೆ ತಂದು ಆಸ್ಪತ್ರೆಗೆ ಸೇರಿಸಿದ್ದಾರೆ.

ಈ ಕುರಿತು ಶ್ರೀರಂಗಪಟ್ಟಣ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆಗೆ ಸಾರ್ವಜನಿಕರ ಮೆಚ್ಚುಗೆ ವ್ಯಕ್ತವಾಗಿದೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಅಂಬರೀಶ್ ಎನ್.ಉಪ್ಪಾರ್, ಕೆ.ಪಿ.ಪರಮೇಶ್ ತೇಜೋಮೂರ್ತಿ, ಅನಂತ, ಶ್ರೀಶೈಲ ಕುರಿ, ಡಿ. ಎಸ್ ಶಿವು ನೂರಸಾಬ್ ಇದ್ದರು.