ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಕಾನೂನು ಎಲ್ಲರಿಗೂ ಒಂದೇ, ಯಾರೇ ವಾಹನಗಳ ಚಲಾಯಿಸಿದರೂ ಪ್ರತಿಯೊಬ್ಬರೂ ಮೋಟಾರು ವಾಹನ ಕಾಯಿದೆ ಪಾಲಿಸಬೇಕಾದ್ದು ಆದ್ಯ ಕರ್ತವ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಮಹಾವೀರ ಮ. ಕರೆಣವರ್ ತಿಳಿಸಿದರು.ನಗರದ ಆರ್‌ಟಿಒ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ದಾವಣಗೆರೆ ಜಿಲ್ಲಾ ವಕೀಲರ ಸಂಘ ಸಹಯೋಗದೊಂದಿಗೆ ಆಯೋಜಿಸಿದ್ದ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ 2024 ಉದ್ಘಾಟನಾ ಸಮಾರಂಭ ಉದ್ಘಾಟಿಸಿ ಮಾತನಾಡಿ ಕಾನೂನು, ಕಾಯಿದೆಗಳ ಅರಿತು ನಾವು ವಾಹನ ಚಲಾಯಿಸಲು ಅರ್ಹತೆ ಹೊಂದಿರುತ್ತೇವೆ. ಒಂದು ವೇಳೆ ನಮಗೆ ಕಾನೂನು ಗೊತ್ತಿಲ್ಲ ಎನ್ನುವ ನಿರ್ಲಕ್ಷ್ಯ ಮಾತುಗಳಿಗೆ ಅವಕಾಶ ಇರುವುದಿಲ್ಲ ಎಂದರು.
ದಾವಣಗೆರೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್ ಮಾತನಾಡಿ, ಎಲ್ಲಾ ಭಾರೀ ವಾಹನ ಚಾಲಕರು, ವಾಹನ ತರಬೇತಿ ಚಾಲನ ಕೇಂದ್ರಗಳು, ಎಲ್ಲಾ ಇಲಾಖೆಗಳ ಒಳಗೊಂಡಂತೆ ಕಾರ್ಯಕ್ರಮ ಆಯೋಜಿಸುತ್ತಿರುವುದು ಮಾದರಿ. ರಸ್ತೆ ಸುರಕ್ಷತಾ ಸಪ್ತಾಹ ಸಂದರ್ಭದಲ್ಲಿ ನಾವು ಕೇವಲ ವಾಹನ ಚಾಲನೆ ಮಾಡುವವರ ಕುರಿತು ಮತ್ತು ಕಾನೂನು ಉಲ್ಲಂಘನೆ ಕುರಿತು ಜಾಗೃತಿ ಮೂಡಿಸಿದರೆ ಸಾಕಾಗುವುದಿಲ್ಲ. ರಸ್ತೆಗಳ ಸುರಕ್ಷತೆ ಕಡೆಗೂ ಹೆಚ್ಚು ಗಮನ ಕೊಡಬೇಕಾಗಿದೆ. ಅವೈಜ್ಞಾನಿಕ ರಸ್ತೆ ತಡೆ, ಗುಂಡಿ ಬಿದ್ದ ರಸ್ತೆಗಳು, ರೀಪೇರಿಯಾಗದ ರಸ್ತೆಗಳಿಂದ ವಾಹನಗಳು ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಇದರ ಕಡೆಗೂ ಇಲಾಖೆಗಳು ಹೆಚ್ಚಿನ ಗಮ ಹರಿಸಬೇಕು. ಪ್ರತಿಷ್ಠಿತ ಬಡಾವಣೆಗಳಲ್ಲಿ ತ್ರಿಬಲ್ ರೈಡಿಂಗ್ ಸೇರಿ ಕಾನೂನು ಉಲ್ಲಂಘನೆಯಾಗುತ್ತಿರುವುದು ಕಂಡು ಬರುತ್ತಿದೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದರು.ಮೋಟಾರು ವಾಹನ ನಿರೀಕ್ಷಕ ಮಹಮ್ಮದ್ ಖಾಲೀದ್ ಪ್ರಾಸ್ತಾವಿಕವಾಗಿ ಮಾತನಾಡಿ, ಯಾವುದೇ ವಾಹನ ಚಾಲನೆಯನ್ನು ಯಾರೇ ಚಾಲನೆ ಮಾಡಲಿ ಅವರು ಕಡ್ಡಾಯವಾಗಿ ವಾಹನ ಚಾಲನಾ ಕಾನೂನು ಪಾಲನೆ ಮಾಡಬೇಕು. ಯಂತ್ರದೊಂದಿಗೆ ಮಾನವ ಕೆಲಸ ಮಾಡಬೇಕಿದೆ. ತಂತ್ರಜ್ಞಾನ ಮುಂದುವರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ವಾಹನಗಳ ನಿರ್ಮಿಸಲಾಗುತ್ತದೆ. ಅದಕ್ಕೆ ತಕ್ಕಂತೆ ವಾಹನ ಸವಾರರು ತಮ್ಮ ಸ್ಥಿತಿಗತಿಗಳನ್ನು ಬದಲಾವಣೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಮಥೇಶ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಆರ್‌ಟಿಓ ಇಲಾಖೆಯ ಅಧೀಕ್ಷಕ ಶಶಿಧರ್, ತಿಪ್ಪೇಶ್, ವೀರೇಶ್, ಸುರೇಶ ಇತರರು ಇದ್ದರು.ಕಾನೂನು ಉಲ್ಲಂಘಿಸಿದರೆ ಕ್ರಮಮೋಟಾರು ವಾಹನ ಕಾಯಿದೆಗಳ ತಿಳಿಯುವುದು. ಕಾನೂನು ಅಧಿನಿಯಮಗಳನ್ನು ಪಾಲಿಸುವುದು ದೇಶದಲ್ಲಿ ಕಡ್ಡಾಯ. ಒಂದು ವೇಳೆ ಪಾಲನೆ ಮಾಡದೇ ಕಾನೂನು ಉಲ್ಲಂಘಸಿದರೆ ದಂಡ ಕಟ್ಟಿದರೆ ಸಾಕು ಎನ್ನುವ ಮನೋಭಾವ ಬರಬಾರದು. ಕಾನೂನು ಉಲ್ಲಂಘಿಸಿದರೆ ಕ್ರಮ ಅನಿವಾರ್ಯ. ಕಾನೂನು ಬಿಟ್ಟು ಏನು ಮಾಡಲು ಸಾಧ್ಯವಿಲ್ಲ.
ಮಹಾವೀರ ಮ. ಕರೆಣವರ್ , ಹಿರಿಯ ಸಿವಿಲ್ ನ್ಯಾಯಾಧೀಶ