ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ಮೋಟಾರ್ ಯೂನಿಯನ್ನಿಂದ ಆಯೋಜಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಕ್ರಮವಾಗಿದೆ. ಚಾಲಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕೆಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು.
ಸೋಮವಾರಪೇಟೆ: ಸ್ಥಳೀಯ ಪ್ರತಿಭೆಗಳ ಪ್ರೋತ್ಸಾಹಕ್ಕೆ ಮೋಟಾರ್ ಯೂನಿಯನ್ನಿಂದ ಆಯೋಜಿಸುವ ಇಂತಹ ಕಾರ್ಯಕ್ರಮಗಳು ಶ್ಲಾಘನೀಯ ಕ್ರಮವಾಗಿದೆ. ಚಾಲಕರು ತಮ್ಮ ಹಾಗೂ ತಮ್ಮ ಕುಟುಂಬದ ಆರೋಗ್ಯದ ಬಗ್ಗೆಯೂ ಹೆಚ್ಚಿನ ಗಮನ ಹರಿಸಬೇಕು. ವೃತ್ತಿಯಲ್ಲಿ ಪ್ರಾಮಾಣಿಕತೆ ಮೈಗೂಡಿಸಿಕೊಳ್ಳಬೇಕೆಂದು ಮಾಜಿ ಸಚಿವ ಅಪ್ಪಚ್ಚು ರಂಜನ್ ಹೇಳಿದರು. ಇಲ್ಲಿನ ವಾಹನ ಚಾಲಕರು ಮತ್ತು ಕೆಲಸಗಾರರ ಸಂಘದ ವತಿಯಿಂದ 50ನೇ ವರ್ಷದ ಆಯುಧ ಪೂಜಾ ಪ್ರಯುಕ್ತ ಖಾಸಗಿ ಬಸ್ ನಿಲ್ದಾಣದ ವೇದಿಕೆಯಲ್ಲಿ ನಡೆದ ಮುಕ್ತ ನೃತ್ಯ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿದರು.
ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಿಧಾನ ಪರಿಷತ್ ಮಾಜೀ ಸದಸ್ಯ ಎಸ್.ಜಿ. ಮೇದಪ್ಪ, ಜಿ.ಪಂ. ಮಾಜೀ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ತಾ.ಪಂ. ಮಾಜೀ ಅಧ್ಯಕ್ಷ ಎಸ್.ಎಂ. ಡಿಸಿಲ್ವಾ, ಉದ್ಯಮಿ ಎಡಿಕೇರಿ ಪ್ರಸನ್ನ, ಜಿ.ಪಂ. ಮಾಜೀ ಸದಸ್ಯ ಬಿ.ಜೆ. ದೀಪಕ್, ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ.ಎ. ಆದಂ, ಕರವೇ ನಗರಾಧ್ಯಕ್ಷ ಮಂಜುನಾಥ್, ಆಟೋ ಯೂನಿಯನ್ ಅಧ್ಯಕ್ಷ ಸಂಪತ್ಕುಮಾರ್ ಇದ್ದರು.ವಿವಿಧ ಜಿಲ್ಲೆಯ ಕಲಾವಿದರು:ನೃತ್ಯ ಸ್ಪರ್ಧೆ ಸಾರ್ವಜನಿಕರನ್ನು ರಂಜಿಸಿತು. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಕಲಾವಿದರ ತಂಡಗಳೂ ಭಾಗವಹಿಸಿ ಪ್ರದರ್ಶನ ನೀಡಿದರು. ಕಾರ್ಯಕ್ರಮದಲ್ಲಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಡಿ.ಗ್ರೂಪ್ ನೌಕರ ಹೆಚ್.ಸಿ. ಮಂಜುನಾಥ್, ನೇಗಳ್ಳೆಯ ನಿವೃತ್ತ ಯೋಧ ಎನ್.ಆರ್. ಅಜಿತ್ ಕುಮಾರ್, ಪೌರ ಕಾರ್ಮಿಕ ಹೆಚ್.ಬಿ. ಮಂಜುನಾಥ್ ಅವರುಗಳನ್ನು ಅತಿಥಿಗಳು ಸನ್ಮಾನಿಸಿದರು. ವೇದಿಕೆಯಲ್ಲಿ ಜಗ್ಗಿ ಜಾದುಗಾರ್ ಅವರಿಂದ ಮೂಡಿಬಂದಿತು. ಪಟ್ಟಣದ ವರ್ಕ್ಶಾಪ್, ವಾಹನ, ಅಂಗಡಿ ಮಳಿಗೆಗಳ ಅಲಂಕಾರ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸೂಪರ್ ತ್ರೀ ಬಹುಮಾನಕ್ಕೆ ಬೆಟ್ಟದಳ್ಳಿ ಗ್ರಾಮದ ದಿವ್ಯ ನವೀನ್, ಮನ್ವಿತಾ ಅವರು ಭಾಜನರಾದರು. ವರ್ಕ್ಶಾಪ್ ಮತ್ತು ಅಂಗಡಿ ಮಳಿಗೆಗಳ ವಿಭಾಗದಲ್ಲಿ ನಗರೂರಿನ ಕೂರ್ಗ್ ಹಿಲ್ಸ್ ನ್ಯಾಚುರಲ್ ಕಾಫಿ ಅಂಗಡಿ ಪ್ರಥಮ, ಆನೆಕೆರೆಯ ಚಾಮುಂಡೇಶ್ವರಿ ವರ್ಕ್ಶಾಪ್ ದ್ವಿತೀಯ, ಮಾರ್ಕೆಟ್ ಏರಿಯಾದ ಶ್ರೀರಾಮ ಬೈಕ್ ವರ್ಕ್ಶಾಪ್ ತೃತೀಯ ಬಹುಮಾನ ಪಡೆದವು. ಗೂಡ್ಸ್ ವಾಹನ ವಿಭಾಗದಲ್ಲಿ ಎತ್ತಿನ ಗಾಡಿ ಪ್ರಥಮ ಬಹುಮಾನ ಪಡೆಯಿತು.