ಸಾರಾಂಶ
ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದ ನೂತನ ಬೌದ್ಧ ಸಮಾಜಕ್ಕೆ ಚಾಲನೆ ದೊರೆತಿದ್ದು, ಬೌದ್ಧ ಉಪಾಸಕರ ಸಭೆಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಟ್ಟದಲ್ಲಿ ಬೌದ್ಧ ಸಮಾಜದ ಸಂಘಟನೆ ಬಗ್ಗೆ ಸುದೀರ್ಘವಾಗಿ ಚರ್ಚೆ ನಡೆದು ಬುದ್ಧ ಅನುಯಾಯಿಗಳು ಜಿಲ್ಲಾ ಮಟ್ಟದ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಮೂಲಕ ಸಂಘಟನೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಉಪಾಸಕರು, ಗ್ರಾಮಾಂತರ ಜಿಲ್ಲೆಯಲ್ಲಿ ಬಿಡಿಬಿಡಿಯಾಗಿ ಉಪಾಸನೆ ಮಾಡಿಕೊಂಡು ಬರುತ್ತಿದ್ದು, ಅವರನ್ನೆಲ್ಲಾ ಒಂದು ವೇದಿಕೆಗೆ ತಂದು ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಜಾಗೃತಿ ಮೂಡಿಸುವ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಬೇಕಾಗಿದೆ. ಬೌದ್ಧ ಧಮ್ಮದ ಬಗ್ಗೆ ಜಾಗೃತಿ ಮೂಡಿಸುವ ಹಾಗೂ ಜಿಲ್ಲಾ ಮಟ್ಟದಲ್ಲಿ ಬೃಹತ್ ಬೌದ್ಧ ವಿಹಾರ ನಿರ್ಮಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಅಕ್ಟೋಬರ್ ನಲ್ಲಿ ಜಿಲ್ಲಾ ಸಮಾವೇಶ:
ಬೌದ್ಧ ಸಮಾಜದ ಜಾಗೃತಿಗಾಗಿ ಇದೇ ಅಕ್ಟೋಬರ್ 26 ಮತ್ತು 27 ರಂದು ದೇವನಹಳ್ಳಿಯಲ್ಲಿ ಜಿಲ್ಲಾ ಮಟ್ಟದ ಬೃಹತ್ ಸಮಾವೇಶ ನಡೆಸಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.ನೂತನ ಜಿಲ್ಲಾಧ್ಯಕ್ಷ ಕಾರಹಳ್ಳಿ ಶ್ರೀನಿವಾಸ್ ಮಾತನಾಡಿ, ನಮ್ಮ ಸಮಾಜದ ಏಳಿಗೆಗಾಗಿ ಈ ಸಂಘಟನೆ ಕಾರ್ಯನಿರ್ವಹಿಸುತ್ತದೆ. ಅದರ ಅಂಗವಾಗಿ ದೇವನಹಳ್ಳಿ ನಗರದಲ್ಲಿ ಇದೇ ಅಕ್ಟೋಬರ್ 26 ಮತ್ತು 27ರಂದು ಎರಡು ದಿನಗಳ ಕಾಲ ಬೌದ್ಧ ಸಮಾಜದ ಜಿಲ್ಲಾ ಸಮಾವೇಶ ನಡೆಸಲಿದ್ದೇವೆ. ಸಮಾವೇಶದಲ್ಲಿ ನಾಡಿನ ಪ್ರಜ್ಙಾವಂತ ಚಿಂತಕರು, ಸಾಹಿತಿಗಳು, ರಾಜ್ಯ ಸರ್ಕಾರದ ಪ್ರತಿನಿಧಿಗಳು ಭಾಗವಹಿಸಲಿದ್ದು, ಸಮಾವೇಶದಲ್ಲಿ ನಾಲ್ಕು ಗೋಷ್ಠಿಗಳು ನಡೆಯಲಿವೆ. ಈ ಸಮಾವೇಶದಲ್ಲಿ ವಿದ್ಯಾರ್ಥಿಗಳು ಮಹಿಳೆಯರು ಸೇರಿದಂತೆ ಸಾವಿರಾರು ಸಂಖ್ಯೆಯ ಉಪಾಸಕರು ಭಾಗವಹಿಸಲಿದ್ದಾರೆ. ಸಮಾವೇಶದ ಸರ್ವಾಧ್ಯಕ್ಷರಾಗಿ ಉಪಾಸಕರಾದ ಸಿದ್ಧಾರ್ಥ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.
ಬೆಂ.ಗ್ರಾ. ಜಿಲ್ಲೆ ನೂತನ ಪದಾಧಿಕಾರಿಗಳು:ಅಧ್ಯಕ್ಷರು-ಕಾರಳ್ಳಿ ಶ್ರೀನಿವಾಸ್, ಉಪಾಧ್ಯಕ್ಷರು- ಸುರೇಶ್ ದೇವನಹಳ್ಳಿ, ರಾಜಗೋಪಾಲ್ ದೊಡ್ಡಬಳ್ಳಾಪುರ, ಚಿನ್ನಸ್ವಾಮಿ ಹೊಸಕೋಟೆ, ಪ್ರಧಾನ ಕಾರ್ಯದರ್ಶಿ-ಮಾಳವ ನಾರಾಯಣ್ ಖಜಾಂಚಿ-ಜಿ.ನಾರಾಯಣ, ಸಹ ಕಾರ್ಯದರ್ಶಿಗಳು- ರಾಜುಸಣ್ಣಕ್ಕಿ, ನಾರಾಯಣ ಸ್ವಾಮಿ. ಎಲ್, ಅಜಯ್ ಕುಮಾರ್. ನಾರಾಯಣಸ್ವಾಮಿ (ಟೀಚರ್ ), ನಿರ್ದೇಶಕರಾಗಿ ಬುಳ್ಳಳ್ಳಿ ಮುನಿರಾಜು, ರಮೇಶ್ ನಾಗ ನಾಯಕನಹಳ್ಳಿ, ಗೂಳ್ಯ ಹನುಮಣ್ಣ, ರಾಜೇಂದ್ರ, ಅಶೋಕ್ ಡಾ.ಜಿ ನಾರಾಯಣಸ್ವಾಮಿ, ಶಶಿಕಲಾ, ಕಾನೂನು ಸಲಹೆಗಾರರಾಗಿ ಮಹೇಶ್ ದಾಸ್ ಆಯ್ಕೆಯಾಗಿದ್ದಾರೆ.ಈ ವೇಳೆ ದೇವನಹಳ್ಳಿ, ಹೊಸಕೋಟೆ ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಉಪಾಸಕರು ಉಪಸ್ಥಿತರಿದ್ದರು.
ಫೋಟೋ-12ಕೆಡಿಬಿಪಿ1-
ಬೆಂ.ಗ್ರಾ. ಜಿಲ್ಲಾ ಬೌದ್ದ ಬೌದ್ಧ ಸಮಾಜದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.