ಸಾರಾಂಶ
ಕುಮಟಾ: ರಾಜ್ಯ ಅರಣ್ಯ ಭೂಮಿ ಹಕ್ಕು ಪರಿಶೀಲನಾ ಸಮಿತಿಯು ಮುಂದಿನ ೬೦ ದಿನಗಳಲ್ಲಿ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಮಂಜೂರಿ ಪ್ರಕ್ರಿಯೆ ಪರಿಶೀಲನೆ ಕಾರ್ಯ ಜರುಗಿಸಬೇಕೆಂದು ನಿರ್ದೇಶನದಡಿಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರ್ಜಿಯ ಮಂಜೂರು ಪ್ರಕ್ರಿಯೆಗೆ ಚಾಲನೆ ದೊರಕಿದೆ ಎಂದು ಅರಣ್ಯ ಹಕ್ಕು ಹೋರಾಟ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ಪಟ್ಟಣದ ಮಾಸ್ತಿಕಟ್ಟಾ ದೇವಸ್ಥಾನ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಅರಣ್ಯವಾಸಿಗಳ ಸಭೆಯನ್ನುದ್ದೇಶಿಸಿ ಮಾತನಾಡಿದರು. ಅರಣ್ಯ ಭೂಮಿಯಲ್ಲಿ ವಾಸ್ತವ್ಯ ಮತ್ತು ಕೃಷಿ ಸಾಗುವಳಿ ಅತಿಕ್ರಮಣ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ಅರಣ್ಯ ಇಲಾಖೆಯ ನೀತಿ ಮತ್ತು ಮಾನದಂಡ ಸಮಂಜಸವಲ್ಲ. ಅರಣ್ಯ ಇಲಾಖೆಯ ಈ ನೀತಿಯಿಂದ ಅರಣ್ಯವಾಸಿ ಅತಿಕ್ರಮಣದಾರರಿಗೆ ಜಮೀನು ಸಾಗುವಳಿಗೆ ಆತಂಕ ಉಂಟಾಗುತ್ತದೆ ಎಂದರು. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಯು ಸಲ್ಲಿಸಿದ ಅರ್ಜಿ ಮಂಜೂರಿ ಪ್ರಕ್ರಿಯೆಯಲ್ಲಿ ಇರುವಂಥ ಕ್ಷೇತ್ರದಲ್ಲಿ ಅವಶ್ಯ ಸಾಗುವಳಿ ಮತ್ತು ಅಭಿವೃದ್ಧಿಯ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯು ಹಸ್ತಕ್ಷೇಪ ಮಾಡಲು ಬರಲಾರದು. ಅರಣ್ಯ ಹಕ್ಕು ಕಾಯಿದೆಯು ದೇಶದಲ್ಲಿ ಪರಮೋಚ್ಚ ಕಾಯಿದೆ ಆಗಿರುವುದರಿಂದ ಇನ್ನುಳಿದ ಕಾಯಿದೆಯಲ್ಲಿರುವ ಅಂಶ ಗಣನೆಗೆ ಬರಲಾರದು ಎಂದರು. ಜಿಲ್ಲಾ ಸಂಚಾಲಕ ಮಹೇಂದ್ರ ನಾಯ್ಕ, ಸೀತಾರಾಮ ನಾಯ್ಕ, ಜಗದೀಶ ಹರಿಕಂತ್ರ, ಸಾರಂಬಿ ಶೇಕ್, ಗಜಾನನ ಪಟಗಾರ, ಶಂಕರ ಕಂದಳ್ಳಿ ಮಾತನಾಡಿದರು.ಹೋರಾಟ ವೇದಿಕೆ ತಾಲೂಕಾಧ್ಯಕ್ಷ ಮಂಜುನಾಥ ಮರಾಠಿ ನಾಗೂರು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಯಾಕುಬ ಬೆಟ್ಕುಳಿ, ರಾಜು ಗೌಡ ಅಳಕೋಡ, ಜ್ಯೋತಿ ದಯಾನಂದ ಗಾವಡಿ, ಮುಜಾಫರ್ ಅಬ್ದುಲ್ ಕರೀಮ ಸಾಬ್, ಯೋಗೇಂದ್ರ ಗೌಡ, ಗೀತಾ ನಾಯ್ಕ ಕರ್ಕಿಮಕ್ಕಿ, ಗಣಪತಿ ಮರಾಠಿ, ಮುಜಾಫರ್ ಇತರರು ಇದ್ದರು.ಆಯುರ್ವೇದ ಭಾರತದ ಹೆಮ್ಮೆಯ ವೈದ್ಯ ಪದ್ಧತಿ
ಶಿರಸಿ: ನಗರದ ಆದರ್ಶ ವನಿತಾ ಸಮಾಜದಲ್ಲಿ ಬೈರುಂಬೆಯ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರದಿಂದ ಮಹಿಳಾ ಸಂಘಟನೆಯ ಸದಸ್ಯೆಯರಿಗೆ ಆಹಾರ, ಆರೋಗ್ಯ, ಆಯುರ್ವೇದ, ಯೋಗದ ಬಗ್ಗೆ ತಿಳಿವಳಿಕೆ ನೀಡಲಾಯಿತು.ವೈದ್ಯಾಧಿಕಾರಿ ಡಾ. ಪೂರ್ಣಿಮಾ ಅವರು ಈ ಕುರಿತು ಮಾಹಿತಿ ನೀಡಿದರು. ಆಯುರ್ವೇದ ೫ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಮನುಕುಲದ ಮೊದಲ ವೈದ್ಯ ಪದ್ಧತಿಯಾಗಿದೆ. ಭಾರತದ ಹೆಮ್ಮೆಯ ಪರಿಪೂರ್ಣ ವೈದ್ಯ ಪದ್ಧತಿ ಇದು. ಪಂಚಕರ್ಮ, ಕ್ಷಾರಸೂತ್ರದಂತಹ ವಿಶಿಷ್ಟ ಚಿಕಿತ್ಸೆಗಳು ಇದರಲ್ಲಿ ತಿಳಿಸಲ್ಪಟ್ಟಿದೆ.ಇದರಲ್ಲಿ ಚಿಕಿತ್ಸೆಯೊಂದೇ ಅಲ್ಲ, ರೋಗ ಬಾರದಂತೆ ತಡೆಯುವ ವೈದ್ಯ ವಿಜ್ಞಾನವೂ ಆಯುರ್ವೇದವಾಗಿದೆ. ಹಲವು ವ್ಯಾಧಿಗಳಿಗೆ ಪ್ರಪಂಚದಾದ್ಯಂತ ಭರವಸೆ ಮೂಡಿಸಿದ ವೈದ್ಯ ಪದ್ಧತಿ ಇದಾಗಿದೆ ಎಂದರು.ಈ ವೇಳೆ ನಡೆದ ಪ್ರಶ್ನೋತ್ತರ ಕಾರ್ಯಕ್ರಮದಲ್ಲಿ ಮಹಿಳೆಯರು ಸಮಸ್ಯೆಗಳಿಗೆ ವೈದ್ಯರಿಂದ ಪರಿಹಾರ ಕಂಡುಕೊಂಡರು. ಆದರ್ಶ ವನಿತಾ ಸಮಾಜದ ಅಧ್ಯಕ್ಷೆ ಮಂಗಲಾ ಹಬ್ಬು, ಉಪಾಧ್ಯಕ್ಷೆ ರೇಖಾ ಭಟ್, ಕಾರ್ಯದರ್ಶಿ ಸಹನಾ ಜೋಶಿ, ಖಜಾಂಚಿ ಜ್ಯೋತಿ ಹೆಗಡೆ, ಆಡಳಿತ ಕಮಿಟಿಯ ಉಷಾ ಭಟ್, ವನಜಾ ಬೆಣಗಾಂವಕರ್, ಗೀತಾ ಹೆಗಡೆ ಮತ್ತಿತರರು ಪಾಲ್ಗೊಂಡಿದ್ದರು.ಅರಣ್ಯ ಹಕ್ಕು ಮಂಜೂರು ಪ್ರಕ್ರಿಯೆಗೆ ಚಾಲನೆ: ರವೀಂದ್ರ ನಾಯ್ಕ
Kumta, Ravindra NaikDriving the process of granting forest rights: Ravindra Naikಕುಮಟಾ ಸುದ್ದಿ, ಅರಣ್ಯ ಹಕ್ಕು, ರವೀಂದ್ರ ನಾಯ್ಕ, Kumata News, Forest Rights, Ravindra Naikಅರಣ್ಯ ಭೂಮಿಯಲ್ಲಿ ವಾಸ್ತವ್ಯ ಮತ್ತು ಕೃಷಿ ಸಾಗುವಳಿ ಅತಿಕ್ರಮಣ ಪ್ರದೇಶದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂಬ ಅರಣ್ಯ ಇಲಾಖೆಯ ನೀತಿ ಮತ್ತು ಮಾನದಂಡ ಸಮಂಜಸವಲ್ಲ.