ಸಾರಾಂಶ
ಕನ್ನಡಪ್ರಭ ವಾರ್ತೆ, ದಾವಣಗೆರೆ
ಭೀಮಸಮುದ್ರದ ಶ್ರೀಶೈಲ ಎಜುಕೇಷನಲ್ ಟ್ರಸ್ಟ್ ಕಾರ್ಯದರ್ಶಿ, ಜಿಎಂ ವಿಶ್ವವಿದ್ಯಾಲಯ ಕುಲಾಧಿಪತಿ ಜಿ.ಎಂ. ಲಿಂಗರಾಜು ಅವರ 56ನೇ ಹುಟ್ಟುಹಬ್ಬವನ್ನು ನಗರದ ಜಿಎಂ ವಿಶ್ವವಿದ್ಯಾನಿಲಯದಲ್ಲಿ ಜಿಎಂ ಕುಟುಂಬ ಹಾಗೂ ಜಿಎಂ ಸಮೂಹ ಸಂಸ್ಥೆಗಳಿಂದ ಅದ್ಧೂರಿಯಾಗಿ ಆಚರಿಸಲಾಯಿತು.ನಗರದ ಜಿಎಂ ವಿಶ್ವವಿದ್ಯಾಲಯದಲ್ಲಿ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಂತಾರಾಷ್ಟ್ರೀಯ ಸಂಬಂಧಗಳ ಕಚೇರಿ ಉದ್ಘಾಟನೆ, ಸಂಶೋಧನೆಗೆ ಸಂಬಂಧಪಟ್ಟಂತೆ ಸಂಶೋಧನಾ ಬುಲೆಟಿನ್ ಬಿಡುಗಡೆ, ವಿವಿಧ ಸಂಶೋಧನೆಯಲ್ಲಿ ತೊಡಗಿದ ಸಂಶೋಧನಾ ಅಧ್ಯಾಪಕರಿಗೆ ಕಾಲೇಜಿನಿಂದ ಧನಸಹಾಯ ಹಸ್ತಾಂತರ, ಜಿಎಂ ವಿಶ್ವವಿದ್ಯಾಲಯದ ಇಆರ್‌ಪಿ ಚಾಲನೆ, ಪ್ರಾಡಕ್ಟ್ ಡಿಸೈನ್ ಅಂಡ್ ಡೆವಲಪ್ಮೆಂಟ್ ಕೇಂದ್ರ ಉದ್ಘಾಟನೆ, ಅನಿಮೇಷನ್ ತಂತ್ರಜ್ಞಾನದ ವಿಸ್ತಾರ ಸಂಸ್ಥೆಯೊಂದಿಗೆ ಒಡಂಬಡಿಕೆ ಸೇರಿದಂತೆ ವಿವಿಧ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಜಿಎಂ ವಿವಿ ಕುಲಪತಿ ಡಾ. ಎಸ್.ಆರ್.ಶಂಕಪಾಲ ಮಾತನಾಡಿ, ಮುಂದಿನ ದಿನಗಳಲ್ಲಿ ನೂತನ ಕಚೇರಿ, ಇಆರ್‌ಪಿ, ವಿವಿಧ ಕೇಂದ್ರ ಉದ್ಘಾಟನೆ, ಒಡಂಬಡಿಕೆಗಳು ಅದರದೇ ಆದ ರೂಪವನ್ನು ಪಡೆದುಕೊಳ್ಳಲಿದೆ. ಜಿಎಂ ವಿಶ್ವವಿದ್ಯಾಲಯ ಬೆಳವಣಿಗೆಗೆ ಇವೆಲ್ಲರೂ ಮುಂದಿನ ದಿನಗಳಲ್ಲಿ ಸಾಕಷ್ಟು ಸಹಕಾರಿಯಾಗಲಿದೆ. ಈಗಾಗಲೇ ವಿವಿಧ ದೇಶಗಳ ಹಲವು ಪ್ರತಿಷ್ಠಿತ ವಿವಿಗಳೊಡನೆ ಒಡಂಬಡಿಕೆ ಪ್ರಾರಂಭಿಸಲಾಗಿದೆ. ಅಂತರ ರಾಷ್ಟ್ರೀಯ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗಿದೆ ಎಂದರು.ನಮ್ಮಲ್ಲಿ ಅತ್ಯುತ್ತಮ ಸಂಶೋಧನೆಗಳನ್ನು ನಡೆಸುತ್ತಿರುವ ಸಂಶೋಧನಾ ಪ್ರಾಧ್ಯಾಪಕರಿಗೆ ಧನಸಹಾಯ ಮುಖಾಂತರ ಉತ್ತೇಜಿಸಲಾಗುತ್ತಿದೆ. ಸ್ಥಳೀಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಡಕ್ಟ್ ಡಿಸೈನ್ ಅಂಡ್ ಡೆವಲಪ್ಮೆಂಟ್ ಕೇಂದ್ರವು ಕಾರ್ಯನಿರ್ವಹಿಸಲಿದೆ. ಅನಿಮೇಶನ್ ತಂತ್ರಜ್ಞಾನದ ಬಿಎಸ್‌ಸಿ ಕೋರ್ಸ್ ನೀಡಲು ವಿಸ್ತಾರ ಎಂಬ ಸಂಸ್ಥೆಯೊಡನೆ ಒಡಂಬಡಿಕೆ ಮಾಡಿಕೊಂಡಿದ್ದು, ಈ ಭಾಗದ ವಿದ್ಯಾರ್ಥಿಗಳು ಸದುಪಯೋಗಕ್ಕೆ ಮುಂದಾಗಬಹುದು ಎಂದು ಹೇಳಿದರು.
ಹಲವು ಕಾರ್ಯಕ್ರಮಗಳ ಉದ್ಘಾಟನೆಗಳ ಮುಖಾಂತರ ಜಿ.ಎಂ.ಲಿಂಗರಾಜುರ ಜನ್ಮದಿನವನ್ನು ಆಚರಿಸಲಾಯಿತು. ಜಿ.ಎಂ.ಲಿಂಗರಾಜು, ವಿಶ್ವವಿದ್ಯಾಲಯಕ್ಕೆ ಬೇಕಾದ ಎಲ್ಲ ಅನುಕೂಲತೆಗಳನ್ನು ಕಲ್ಪಿಸಲಾಗಿದೆ. ಪ್ರಾಧ್ಯಾಪಕರು ತಮ್ಮ ಪರಿಶ್ರಮದಿಂದ ವಿಶ್ವವಿದ್ಯಾಲಯವನ್ನು ವಿಶ್ವಮಟ್ಟದಲ್ಲಿ ಗುರುತಿಸುವ ಹಾಗೆ ಬೆಳೆಸಬೇಕು ಎಂದು ಮನವಿ ಮಾಡಿದರು.ಸಹ ಕುಲಪತಿ ಡಾ. ಎಚ್.ಡಿ. ಮಹೇಶಪ್ಪ, ರಿಜಿಸ್ಟರ್ ಡಾ. ಬಿ.ಎಸ್. ಸುನಿಲ್ ಕುಮಾರ್, ಆಡಳಿತಾಧಿಕಾರಿ ವೈ.ಯು. ಸುಭಾಶ್ಚಂದ್ರ, ಜಿಎಂ ಸಮೂಹದ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಪ್ರಾಧ್ಯಾಪಕರು ಉಪಸ್ಥಿತರಿದ್ದರು.
- - - -20ಕೆಡಿವಿಜಿ12, 13:ದಾವಣಗೆರೆಯ ಜಿಎಂ ವಿಶ್ವವಿದ್ಯಾಲಯದ ಕುಲಾಧಿಪತಿ, ಶ್ರೀಶೈಲ ಎಜುಕೇಶನಲ್ ಟ್ರಸ್ಟ್ ಕಾರ್ಯದರ್ಶಿ ಜಿ.ಎಂ. ಲಿಂಗರಾಜು ಅವರ ಹುಟ್ಟುಹಬ್ಬ ಆಚರಿಸಲಾಯಿತು.