ಸೂಕ್ತ ದಾಖಲೆಗಳಿಲ್ಲದೇ ವಾಹನ ಚಾಲನೆ ಅಪರಾಧ

| Published : May 27 2024, 01:08 AM IST / Updated: May 27 2024, 01:20 PM IST

ಸಾರಾಂಶ

ಮೂಡಲಗಿ: ವಾಹನ ಸಂಚಾರಿ ನಿಯಮಗಳ ಜೊತೆಗೆ ವಾಹನ ಚಲಾವಣೆ ಲೈಸನ್ಸ್, ಹೆಲ್ಮೆಟ್, ಇನ್ಸೂರನ್ಸ್, ಪಾಸಿಂಗ್ ಇಲ್ಲದೇ ವಾಹನ ಚಲಿಸಿ ಅಪಘಾತ ಉಂಟಾದರೆ ಕಾನೂನಿನಲ್ಲಿ ಅಪರಾಧವಾಗುತ್ತದೆ 

ಮೂಡಲಗಿ: ವಾಹನ ಸಂಚಾರಿ ನಿಯಮಗಳ ಜೊತೆಗೆ ವಾಹನ ಚಲಾವಣೆ ಲೈಸನ್ಸ್, ಹೆಲ್ಮೆಟ್, ಇನ್ಸೂರನ್ಸ್, ಪಾಸಿಂಗ್ ಇಲ್ಲದೇ ವಾಹನ ಚಲಿಸಿ ಅಪಘಾತ ಉಂಟಾದರೆ ಕಾನೂನಿನಲ್ಲಿ ಅಪರಾಧವಾಗುತ್ತದೆ. ಕಾನೂನು ನಿಯಮಗಳಂತೆ ವಾಹನ ಚಲಿಸಿ ತಂದೆ ತಾಯಿಗಳು ನೀಡಿದ ಜೀವವನ್ನು ರಕ್ಷಣೆ ಮಾಡಿಕೊಳ್ಳುವುದರ ಜೊತೆಗೆ ಮತ್ತೊಬ್ಬರ ಜೀವವನ್ನು ರಕ್ಷಿಸಿದಂತಾಗುತ್ತದೆ ಎಂದು ಮೂಡಲಗಿ ಪಿಎಸ್‌ಐ ಚಂದ್ರಶೇಖರ ಹೆರಕಲ್ ಹೇಳಿದರು.

ಪಟ್ಟಣದ ಆರ್.ಡಿ.ಎಸ್.ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ಸಭಾ ಭವನದಲ್ಲಿ ಮೂಡಲಗಿ ಪೊಲೀಸ್ ಠಾಣಿಯಿಂದ ಆಯೋಜಿಸಿದ್ದ ಸಂಚಾರಿ ನಿಯಮಗಳ ಅರಿವು ಕಾರ್ಯಾಗಾರ ಮಾತನಾಡಿ, ವಿದ್ಯಾರ್ಥಿಗಳು ಅಧ್ಯಯನದ ಜೊತೆಗೆ ಕಾನೂನು ಪರಿಪಾಲನೆಯಲ್ಲಿ ತೊಡಗುವುದು ಅವಶ್ಯವಿದೆ. 

ಕಾನೂನಿನ ಮಾನದಂಡಗಳ ಬಗ್ಗೆ ಅರಿವು ಇಲ್ಲದೇ ಅಪರಾದಗಳು ಹೆಚ್ಚಾಗುತ್ತಿವೆ. ಅಂತಹ ಅಪರಾಧಗಳಲ್ಲಿ ರಸ್ತೆ ಅಪಘಾತಗಳಲ್ಲಿ ಸುರಕ್ಷತೆಗೆ ಹೆಲ್ಮೆಟ್ ಬಳಸದೇ ಇರುವುದು ಕೂಡಾ ಅಪರಾಧ ಎಂದರು. ಪೊಲೀಸ ಇಲಾಖೆಯಲ್ಲಿ ಕಾರ್ಯನಿರ್ವಹಿಸವವರಿಗೆ ಮಾನವೀಯತೆ ಇರುವುದಿಲ್ಲ ಎಂಬ ಸಂದೇಹ ಬೇಡ, ವಿದ್ಯಾರ್ಥಿಗಳು ಕಾನೂನು ಗೌರವಿಸಿ ಪೊಲೀಸ್‌ ಇಲಾಖೆಯ ಪ್ರೀತಿಯನ್ನು ಗಳಿಸಿ. ಅದರ ಜೊತೆಗೆ ಸೈಬರ್ ಕ್ರೈಮ್ ಬಗ್ಗೆ ಎಚ್ಚರಿಕೆ ವಹಿಸಿ ಆನ್‌ಲೈನ್ ಪೇಮೆಂಟ್ ಮಾಡುವಾಗ ಬೇರೆಯವರಿಗೆ ಒಟಿಪಿ ನೀಡುವದರಲ್ಲಿ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.

 ಪೊಲೀಸ್ ಸಿಬ್ಬಂದಿ ಎನ್.ಎಸ್.ಒಡೆಯರ ಮಾತನಾಡಿ, ಈಗಿನ ವಿದ್ಯಾರ್ಥಿಗಳು ಮುಂದೆ ದೇಶದ ಪ್ರಜೆಗಳಾಗಿರುವದರಿಂದ ಸಮಾಜ ರಕ್ಷಣೆ ಮತ್ತು ಕಾನೂನು ಪರಿಪಾಲನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕಾಗುತ್ತದೆ. ಸರಿಯಾದ ಕಾನೂನಿನ ತಿಳಿವಳಿಕೆ ಪಡೆದುಕೊಂಡು ಅಪರಾಧ ಮತ್ತು ಅಪಘಾತ ತಡೆಗಟ್ಟುವಲ್ಲಿ ಪೊಲೀಸ್‌ ಇಲಾಖೆಯೊಂದಿಗೆ ಸಹಕಾರ ನೀಡುವಂತೆ ಕೋರಿದರು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಶಿವಾನಂದ ಸತ್ತಿಗೇರಿ ಉಪನ್ಯಾಸಕರಾದ ಸಂತೋಷ ಲಟ್ಟಿ, ವಾಣಿಶ್ರೀ ಕಾಪಶೆ ಮತ್ತಿತರರು ಇದ್ದರು.