ಕಾರ್ಮಿಕರ ವಿರೋಧಿ ಸಂಹಿತೆ ಕೈಬಿಡಿ: ವರಲಕ್ಷ್ಮೀ

| Published : May 02 2024, 12:15 AM IST

ಕಾರ್ಮಿಕರ ವಿರೋಧಿ ಸಂಹಿತೆ ಕೈಬಿಡಿ: ವರಲಕ್ಷ್ಮೀ
Share this Article
  • FB
  • TW
  • Linkdin
  • Email

ಸಾರಾಂಶ

ಬೀದರ್‌ನಲ್ಲಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯಾಧ್ಯಕ್ಷೆ ವರಲಕ್ಷ್ಮೀ ಪತ್ರಿಕಾಗೋಷ್ಠಿ ನಡೆಸಿದರು.

ಕನ್ನಡಪ್ರಭ ವಾರ್ತೆ ಬೀದರ್

ಕಾರ್ಮಿಕರ ವಿರೋಧಿ ಸಂಹಿತೆಗಳಾದ ವೇತನ ಸಂಹಿತೆ, ಔದ್ಯೋಗಿಕ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ಸಂಹಿತೆ, ಕೈಗಾರಿಕಾ ಸಂಹಿತೆ ಮತ್ತು ಸಾಮಾಜಿಕ ಭದ್ರತೆ ಸಂಹಿತೆ ಈ ನಾಲ್ಕು ಸಂಹಿತೆ ಕೈಬಿಡಬೇಕೆಂದು ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ರಾಜ್ಯಾಧ್ಯಕ್ಷೆ ವರಲಕ್ಷ್ಮೀ ತಿಳಿಸಿದರು.

ಅವರು ಬುಧವಾರ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭಾರತದಲ್ಲಿ ಶೇ.100ಕ್ಕೆ 60ರಷ್ಟು ಕಾರ್ಮಿಕರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಾರೆ. ಅವರಿಗೆ ಸರ್ಕಾರದ ನಿಯಮ ಅನುಕರಣೆ ಆಗುವುದಿಲ್ಲ. ಐಆರ್ ಸಂಹಿತೆ ಪ್ರಕಾರ ಸದ್ಯ ಕಾರ್ಮಿಕರು 8 ಗಂಟೆ ಬದಲಾಗಿ 12 ಗಂಟೆ ದುಡಿಯಬೇಕು. ಕಾರ್ಮಿಕರು ತಮ್ಮ ಬೇಡಿಕೆಗಾಗಿ ಹೋರಾಟದ ಅಧಿಕಾರವಿಲ್ಲ. ಯೂನಿಯನ್ ನೋಂದಣಿ ಮಾಡುವಂತಿಲ್ಲ. ಆಹಾರ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಈ ಮೊದಲು ಶೇ.90ರಷ್ಟು ಅನುದಾನ ಕೇಂದ್ರದಿಂದ ರಾಜ್ಯಕ್ಕೆ ಬರುತಿತ್ತು. ಆದರೆ ಈಗ ಶೇ.60 ಮಾತ್ರ ಬರುತ್ತಿದೆ. ಇದರಿಂದ ಕಾರ್ಮಿಕರಿಗೆ ತೀವ್ರ ತೊಂದರೆಯಾಗುತಿದ್ದು, ಇದನ್ನು ಸಿಐಟಿಯು ಖಂಡಿಸುತ್ತದೆ ಎಂದರು.

ಕೇಂದ್ರ ಸರ್ಕಾರ ರಾಜ್ಯದ ಜಿಎಸ್ಟಿ ಪಾಲು ಕೊಡುವುದಿಲ್ಲ. ಹಸಿವಿನ ಸೂಚ್ಯಂಕ 111 ಸ್ಥಾನಕ್ಕೆ ಭಾರತ ಹೋಗಿದೆ. ಆದ್ದರಿಂದ ಕೇಂದ್ರದ ಎನ್‌ಡಿಎ ಸರ್ಕಾರ ಸಮಾನ ವೇತನ ಕಾಯ್ದೆ ರೂಪಿಸಬೇಕು. ನಾಲ್ಕು ಕೋಡ್ ರದ್ದುಗೊಳಿಸಬೇಕು ಎಂಬ ಬೇಡಿಕೆಯಿಟ್ಟರೂ ಕಾರ್ಮಿಕರ ವಿರೋಧಿ ನಡೆ ಅನುಸರಿಸುತ್ತಿರುವ ಎನ್‌ಡಿಎ ಒಕ್ಕೂಟ ಸೋಲಿಸಿ ಎಂದು ವರಲಕ್ಷ್ಮೀ ತಿಳಿಸಿದರು.

ಇದೇ ವೇಳೆ ಜಿಲ್ಲಾ ಅಂಗನವಾಡಿ ನೌಕರರ ಅಧ್ಯಕ್ಷೆ ಸುಶೀಲಾ ಹತ್ತಿ, ಸಿಐಟಿಯು ಜಿಲ್ಲಾ ಸಂಚಾಲಕಿ ಶ್ರೀದೇವಿ ಚೂಡೆ, ಪ್ರಮುಖರಾದ ಪ್ರಭು ಸಂತೋಷಕರ, ಆರ್.ಪಿ. ರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.